ಅಭಿಮಾನಿಗಳಿಗೆ ಕೈ ಮುಗಿದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ ಮನವಿಯೇನು ಗೊತ್ತಾ?!

ಬೆಂಗಳೂರು, ಮಂಗಳವಾರ, 6 ಫೆಬ್ರವರಿ 2018 (16:19 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಇದೀಗ ದರ್ಶನ್ ತಮ್ಮೆಲ್ಲಾ ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಏನಂಥ? ಈ ಸುದ್ದಿ ಓದಿ.
 

ಸ್ಟಾರ್ ನಟನ ಹುಟ್ಟುಹಬ್ಬವೆಂದರೆ ಅಭಿಮಾನಿಗಳು ಅವರ ಮನೆ ಎದುರು ನಿಂತು ವಿಶ್ ಮಾಡಲು ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದವರಿಗೂ ಕಿರಿ ಕಿರಿ ಮಾಡುತ್ತಾರೆ. ಇನ್ನು ಮುಂದೆ ಹಾಗೆಲ್ಲಾ ಮಾಡಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
 

‘ನನ್ನ ಹುಟ್ಟುಹಬ್ಬ ದಿನ ನೀವೆಲ್ಲಾ ದೂರದೂರದ ಊರಿನಿಂದ ಬಂದು ನಿಮ್ಮದೇ ಹುಟ್ಟುಹಬ್ಬ ಎಂಬಂತೆ ಸಂಭ್ರಮಿಸುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲವೆಂದೇ ಭಾವಿಸುತ್ತೇನೆ. ಆದರೆ ಈ ರೀತಿಯ ಸಂಭ್ರಮಾಚರಣೆ ಸಂದರ್ಭದಲ್ಲಿ ದಯವಿಟ್ಟು ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕಾಗಿ ನಿಮ್ಮೆಲ್ಲರಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ಅಕ್ಕಪಕ್ಕದ ಮನೆಯ ಕಂಪೌಂಡ್ ಹತ್ತುವುದು, ಹೂ ಕುಂಡಗಳಿಗೆ ಹಾನಿ ಮಾಡಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Sandalwood Challenging Star Darshan Kannada Film News

ಸ್ಯಾಂಡಲ್ ವುಡ್

news

ಸಲ್ಮಾನ್‌ಖಾನ್‌ಗೆ ಕೊನೆಗೂ ಪ್ರೀತಿಯ ಯುವತಿ ಸಿಕ್ಕಿದ್ದಾಳಂತೆ...!

ಯಾವಾಗಲೂ ಏನಾದರೊಂದು ಸುದ್ದಿಯಲ್ಲಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಈಗ ಟ್ವೀಟ್ ಒಂದರಿಂದ ...

news

ಹುಟ್ಟು ಹಬ್ಬದಂದು ಅಭಿಷೇಕ್‌ ಬಚ್ಚನ್‌ಗೆ ಸಿನಿತಾರೆಗಳ ಭರ್ಜರಿ ಹಾರೈಕೆ !!

42ರ ಹರೆಯಕ್ಕೆ ಕಾಲಿಟ್ಟ ಬಾಲಿವುಡ್ ನಟ ಅಭಿಷೇಕ್‌ ಬಚ್ಚನ್‌ಗೆ ನಿನ್ನೆ ಹುಟ್ಟುಹಬ್ಬದ ವಿಶೇಷ ಸಂಭ್ರಮ. ಅವರ ...

news

ಯಶ್ ಬಿಟ್ಟು ಪತ್ನಿ ರಾಧಿಕಾ ಪಂಡಿತ್ ಏಕಾಂಗಿಯಾಗಿ ವಿದೇಶಕ್ಕೆ ಹಾರಿದ್ದೇಕೆ?!

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪತಿ ಯಶ್ ರಿಂದ ತುಂಬಾ ದಿನ ...

news

ಖ್ಯಾತ ಹಾಡುಗಾರ ಸೋನು ನಿಗಮ್ ಅವರಿಗೆ ಪ್ರಾಣ ಬೆದರಿಕೆ!

ಮುಂಬೈ : ಖ್ಯಾತ ಹಾಡುಗಾರ ಸೋನು ನಿಗಮ್ ಅವರಿಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ...

Widgets Magazine
Widgets Magazine