ರೆಬಲ್ ಸ್ಟಾರ್ ಅಂಬರೀಶ್ ಪುತ್ರನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು, ಬುಧವಾರ, 9 ಜನವರಿ 2019 (09:36 IST)

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅಂಬರೀಶ್ ಮೇಲಿನ ಪ್ರೀತಿಯ ಋಣಸಂದಾಯ ಮಾಡಲು ಹೊರಟಿದ್ದಾರೆ.


 
ಅಂಬರೀಶ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ‘ಅಮರ್’ ಚಿತ್ರದ ಚಿತ್ರೀಕರಣ ಸಾಗುತ್ತಿದ್ದು,  ಈ ಚಿತ್ರಕ್ಕೆ ಇದೀಗ ದರ್ಶನ್ ಸಾಥ್ ನೀಡಿದ್ದಾರೆ. ಅಭಿಷೇಕ್ ಚೊಚ್ಚಲ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಪಕ್ಕಾ ಆಗಿದೆ.
 
ಈಗಾಗಲೇ ಅಮರ್ ಚಿತ್ರಕ್ಕೆ ಸ್ಟಾರ್ ನಟರು ಸಾಥ್ ನೀಡಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ದರ್ಶನ್ ‘ಅಪ್ಪಾಜಿ’ ಅಂಬರೀಶ್ ಪುತ್ರನ ಸಾಥ್ ಗೆ ನಿಲ್ಲುತ್ತಿರುವುದು ಪಕ್ಕಾ ಆಗಿದೆ. ಈಗಾಗಲೇ ದರ್ಶನ್ ಭಾಗದ ಚಿತ್ರೀಕರಣ ಆರಂಭವಾಗಿದೆ. ಇನ್ನು, ಯಾರೆಲ್ಲಾ ಸ್ಟಾರ್ ನಟರು ಈ ಚಿತ್ರದಲ್ಲಿ ಬಂದು ಹೋಗುತ್ತಾರೋ ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೃತಿಕ್ ರೋಷನ್ ತಂದೆ ನಿರ್ಮಾಪಕ ರಾಕೇಶ್ ರೋಷನ್ ಗೆ ಕ್ಯಾನ್ಸರ್!

ಮುಂಬೈ: ಬಾಲಿವುಡ್ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಕ್ಯಾನ್ಸರ್ ನಂತಹ ಮಹಾಮಾರಿಗೆ ತುತ್ತಾಗುತ್ತಿರುವುದು ...

news

ಡ್ರಾಮಾ ಜ್ಯೂನಿಯರ್ಸ್ ಅಚಿಂತ್ಯ ನೀಡಿದ ಭರ್ಜರಿ ನ್ಯೂಸ್

ಬೆಂಗಳೂರು: ಜೀ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್ ವೀಕ್ಷಿಸುತ್ತಿದ್ದವರಿಗೆ ...

news

ಬಿಗ್ ಬಾಸ್ ವೇದಿಕೆಯಲ್ಲಿ ಐಟಿ ದಾಳಿ ಬಗ್ಗೆ ಕಿಚ್ಚ ಸುದೀಪ್ ಫನ್ನಿ ಟಾಕ್

ಬೆಂಗಳೂರು: ಎರಡು ದಿನ ಐಟಿ ದಾಳಿಗೊಳಗಾಗಿ ಅಕ್ಷರಶಃ ಗೃಹಬಂಧನ ಎದುರಿಸಿದ್ದ ಕಿಚ್ಚ ಸುದೀಪ್ ಅದಾದ ಬಳಿಕ ಸೀದಾ ...

news

ಹತ್ತುಗಂಟೆಗೆ ಫ್ರೀ ಮಾಡ್ಕೊಳ್ಳಿ ಎಂದ ಯೋಗರಾಜ್ ಭಟ್ರು ಇದೇನು ಮಾಡಿಬಿಟ್ರು?!

ಬೆಂಗಳೂರು: ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯೋಗರಾಜ್ ಭಟ್ರು ಈಗ ಒಂದೊಂದೇ ಹಾಡು ...