ಸೂಪರ್ ಟಾಕ್ ಟೈಮ್ ನಲ್ಲೇ ಔಟ್ ಆಗಿತ್ತಾ ಚಿರು-ಮೇಘನಾ ಗುಟ್ಟು?

ಬೆಂಗಳೂರು, ಮಂಗಳವಾರ, 10 ಅಕ್ಟೋಬರ್ 2017 (11:13 IST)

ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ತಾರಾ ಜೋಡಿ ಚಿರು ಸರ್ಜಾ-ಮೇಘನಾ ರಾಜ್ ವಿವಾಹದ ಬಗ್ಗೆ ವದಂತಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅವರಿಬ್ಬರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನಡೆದ ಸಂಭಾಷಣೆಗಳು ಕುತೂಹಲ ಮೂಡಿಸಿವೆ.


 
ಆ ಟಾಕ್ ಶೋ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಮತ್ತು ಚಿರು ಸರ್ಜಾ ಜತೆಯಾಗಿ ಭಾಗವಹಿಸಿದ್ದರು. ನಿರೂಪಕ ಅಕುಲ್ ಬಾಲಾಜಿ ಕಾರ್ಯಕ್ರಮದುದ್ದಕ್ಕೂ ಇವರಿಬ್ಬರ ಕಾಲೆಳೆಯುತ್ತಲೇ ಇದ್ದರು.
 
ಪರೋಕ್ಷವಾಗಿ ಚಿರು ಸರ್ಜಾ, ಮೇಘನಾಗೆ ಅವರಿಬ್ಬರ ನಡುವೆ ಪ್ರೀತಿ ಇದೆಯಾ ಎಂದು ಕೇಳುತ್ತಲೇ ಇದ್ದರು. ಆದರೆ ಕೊನೆಯವರೆಗೂ ಇಬ್ಬರೂ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರಲೇ ಇಲ್ಲ. ಆದರೆ ಒಂದು ಹಂತದಲ್ಲಿ ಚಿರು ಸರ್ಜಾ ತಾನು 8 ವರ್ಷದಿಂದ ಸಿಂಗಲ್ ಅಲ್ಲ ಎಂದರು. ಆದರೆ ಅದು ಸಿನಿಮಾ ಬಗ್ಗೆ ಹೇಳಿದ್ದು ಎಂದು ಮಾತು ಹಾರಿಸಿದರು.

ಇನ್ನೊಮ್ಮೆ ಮೇಘನಾ ಬಳಿ ಪಕ್ಷಿ ಸಾಕುವುದು ನಿಮಗೆ ಇಷ್ಟವೇ? ಇಲ್ಲಾ ಪಕ್ಷಿ ಸಾಕುವವರನ್ನು ಇಷ್ಟಪಡುತ್ತೀರಾ? ಎಂದು ಅಕುಲ್ ಕಾಲೆಳೆದರು. ಅಸಲಿಗೆ ಚಿರು ಸರ್ಜಾ ಪಕ್ಷಿ ಸಾಕುತ್ತಿದ್ದಾರೆ. ವಿಶೇಷವೆಂದರೆ ಈ ಪ್ರಶ್ನೆಗೆ ಉತ್ತರಿಸಿದ ಮೇಘನಾ ಪಕ್ಷಿ ಸಾಕುವವರನ್ನು ಇಷ್ಟ ಎಂದಿದ್ದರು! ಇದುವರೆಗೂ ಇಬ್ಬರೂ ಮದುವೆ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೃಜನ್ ಲೋಕೇಶ್ ಮಜಾ ಟಾಕೀಸ್ ಬಂದ್!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಕಾಮಿಡಿ ಶೋ ಮಜಾ ಟಾಕೀಸ್ ...

news

ವಿವಾದಗಳ ನಂತರ ಕನ್ನಡದ ಬಗ್ಗೆ ‘ಹೆಮ್ಮೆ’ಯ ಮಾತನಾಡಿದ ಶ್ರುತಿ ಹಾಸನ್

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಬರಲ್ಲ ಎಂದಿದ್ದ ಶ್ರುತಿ ಹಾಸನ್ ವಿವಾದದ ನಂತರ ಎಚ್ಚೆತ್ತುಕೊಂಡಿದ್ದು, ...

news

ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಿಸಿದ ಜುಬೇರ್ ಖಾನ್

ಮುಂಬೈ: ವಿವಾದಗಳಿಂದಲೇ ಸುದ್ದಿಯಾಗುತ್ತಿದೆ ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ. ಅದೇ ರೀತಿ ಸೀಸನ್ 11 ...

news

ಅ. 22ರಂದು ಚಿರು ಸರ್ಜಾ, ಮೇಘನಾ ರಾಜ್ ನಿಶ್ಚಿತಾರ್ಥ

ಬೆಂಗಳೂರು: ಚಂದನವನದ ತಾರಾ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ...

Widgets Magazine
Widgets Magazine