ಕಿಚ್ಚ ಸುದೀಪ್ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (07:36 IST)

ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಮತ್ತು ಸಮಾಧಿ ಸ್ಥಳ ಅಭಿವೃದ್ಧಿ ಪಡಿಸುವಂತೆ ಇತ್ತೀಚೆಗಷ್ಟೇ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಕಿಚ್ಚ ಸುದೀಪ್ ಮನವಿಗೆ ಸರ್ಕಾರ ಸ್ಪಂದಿಸಿದೆ.
 

ಮುಖ್ಯಮಂತ್ರಿಗಳ ಪರವಾಗಿ ಅವರ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
 
ಇತ್ತೀಚೆಗೆ ಸಿಎಂ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಸುದೀಪ್, ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ಸ್ಥಳದ ಭೂ ವಿವಾದವನ್ನು ಬಗೆಹರಿಸಿ, ಆ ಪುಣ್ಯಭೂಮಿಯನ್ನು ಅಭಿವೃದ್ಧಿಗೊಳಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದರು. ಇದು ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅಸಮಾಧಾನಕ್ಕೂ ಕಾರಣವಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಾಳ್ಮೆ ಕಳೆದುಕೊಂಡ ಹುಚ್ಚ ವೆಂಕಟ್ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ನಟ ನಿರ್ದೇಶಕ ಹುಚ್ಚ ವೆಂಕಟ್ ಅವರು ಸುದ್ದಿ ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದ ...

news

ಬಿಗ್ ಬಾಸ್ ನ ಸಮೀರ್ ಆಚಾರ್ಯ ಬಗ್ಗೆ ನಿಮಗೆಷ್ಟು ಗೊತ್ತು!

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 5 ರಲ್ಲಿ ಸೆಲೆಬ್ರಿಟಿಗಳ ಜೊತೆಗೆ ...

news

ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಕೇಳಿಬಂತು ಸಾಧು ಕೋಕಿಲಾ, ಮಂಡ್ಯ ರಮೇಶ್ ಹೆಸರು?!

ಬೆಂಗಳೂರು: ಸ್ಯಾಂಡಲ್ ವುಡ್ ನಟರಾದ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲಾ ಹೆಸರು ಸೆಕ್ಸ್ ಸ್ಕ್ಯಾಂಡಲ್ ...

news

ಸ್ಯಾಂಡಲ್ ವುಡ್ ಡೈರೆಕ್ಟರ್ ಮುಂಬೈ ಐಟಂ ಗರ್ಲ್ ಜತೆ ಮಾಡಿದ್ದೇನು ಗೊತ್ತಾ...?

ಬೆಂಗಳೂರು: ಮುಂಬೈನ ಐಟಂ ಗರ್ಲ್ ಶರಣ್ಯಾ ಎಂಬಾಕೆ ಸ್ಯಾಂಡಲ್ ವುಡ್ ಡೈರೆಕ್ಟರ್ ಮೆಲ್ವಿನ್ ವಿರುದ್ಧ ಫೇಸ್ ...

Widgets Magazine