Widgets Magazine

ಗಾಳಿ ಸುದ್ದಿ ನಂಬಬೇಡಿ ಎನ್ನುತ್ತಲೇ ದರ್ಶನ್ ಪತ್ನಿ ಮಾಡಿದ ಈ ಕೆಲಸದಿಂದ ಅನುಮಾನವೊಂದು ಶುರುವಾಗಿದೆ!

ಬೆಂಗಳೂರು| Krishnaveni K| Last Modified ಮಂಗಳವಾರ, 13 ಆಗಸ್ಟ್ 2019 (08:47 IST)
ಬೆಂಗಳೂರು: ಕುರುಕ್ಷೇತ್ರ ಯಶಸ್ಸಿನ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ಬದುಕಿನಲ್ಲಿ ಮತ್ತೆ ಬಿರುಗಾಳಿ ಎದ್ದಿದೆ ಎಂಬ ರೂಮರ್ ಹಬ್ಬಿತ್ತು.

 
ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಹೊಡೆದಿದ್ದಾರೆ. ಗಾಯಗೊಂಡ ವಿಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶನಿವಾರ ನಡೆದ ಈ ಗಲಾಟೆಯಲ್ಲಿ ವಿಜಯಲಕ್ಷ್ಮಿ ತಾಯಿಗೂ ಗಾಯವಾಗಿದೆ ಎಂದೆಲ್ಲಾ ಸುದ್ದಿಯಾಗಿತ್ತು.
 
ಆದರೆ ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ರೂಮರ್ ಗಳೆಲ್ಲಾ ಆಧಾರ ರಹಿತ ಎಂದು ಟ್ವೀಟ್ ಮಾಡಿದ್ದರು. ಆದರೆ ಹೀಗನ್ನುತ್ತಲೇ ಅವರು ತಮ್ಮ ಟ್ವಿಟರ್ ಪೇಜ್ ನಿಂದ ದರ್ಶನ್ ಹೆಸರು ಕಿತ್ತು ಹಾಕಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟು ದಿನ ಇದ್ದ ದರ್ಶನ್ ಹೆಸರನ್ನು ದಿಡೀರ್ ಆಗಿ ಕಿತ್ತು ಹಾಕಿದ್ದೇಕೆ? ಹಾಗಿದ್ದರೆ ಇಬ್ಬರ ನಡುವೆ ಮತ್ತೆ ಮುನಿಸಾಗಿದ್ದು ನಿಜವಾಗಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ. ಅಂತೂ ದರ್ಶನ್ ವೈಯಕ್ತಿಕ ಬದುಕು ಆಗಾಗ ಇಂತಹ ಘಟನೆಗಳಿಂದ ಸುದ್ದಿಯಾಗುವುದು ಖೇದಕರ.
ಇದರಲ್ಲಿ ಇನ್ನಷ್ಟು ಓದಿ :