Widgets Magazine

ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಧನುಷ್ ‘ಜಗಮೆ ತಂತ್ರ’ ಚಿತ್ರ

ಚೆನ್ನೈ| pavithra| Last Modified ಬುಧವಾರ, 13 ಜನವರಿ 2021 (12:43 IST)
ಚೆನ್ನೈ : ನಟ ಧನುಷ್ ಪ್ರಸ್ತುತ ಕಾರ್ತಿಕ್ ನರೈನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಶೂಟಿಂಗ್ ಇದೀಗ ಪ್ರಾರಂಭವಾಗಿದೆ. ಇದೀಗ ಧನುಷ್ ಅವರ ‘ಜಗಮೆ ತಂತ್ರ’ ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

ಈಗಾಗಲೇ ಜನವರಿಯ ಸಂಕ್ರಾಂತಿಯ ದಿನದಂದು ವಿಜಯ್ ಮಾಸ್ಟರ್ ಮತ್ತು ಸಿಂಬು ಈಶ್ವರನ್ ಚಿತ್ರಗಳು ದೀರ್ಘ ವಿರಾಮದ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ಧನುಷ್ ಅವರ ಜಗಮೆ ತಂತ್ರ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಕಾರಣಕ್ಕೆ ಧನುಷ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :