ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ.

ಬೆಂಗಳೂರು, ಮಂಗಳವಾರ, 1 ಆಗಸ್ಟ್ 2017 (09:13 IST)

Widgets Magazine

ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ. ವಿಕಲಚೇತನರಿಗೆ ಸ್ಫೂರ್ತಿಯಾಗಿದ್ದ ಧ್ರುವ ಶರ್ಮಾ ಬಹುಅಂಗಾಂಗ ವೈಫಲ್ಯದಿಂದ ಬೆಂಗಳೂರಿನ ಕೊಲಂಬಿಯಾ ಏಶಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮೂರ್ಛೆಹೋದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಸ್ಪತ್ರೆ ಬಳಿಯೇ ಪಿಟ್ಸ್ ಕೂಡ ಆಗಿತ್ತು ಎನ್ನಲಾಗಿದೆ. ಬೆಳಗಿನ ಜಾವ 1.30ರ ಸುಮಾರಿಗೆ ಹೃದಯಾಘಾತದಿಂದ ಧ್ರುವ ಶರ್ಮಾ ನಿಧನರಾಗಿದ್ದಾರೆ. ಪುತ್ರಿ ಮತ್ತು ಪತ್ನಿಯನ್ನ ಅವರನ್ನ ಧ್ರುವ ಶರ್ಮಾ ಅಗಲಿದ್ದಾರೆ.

ಖ್ಯಾತ ಉದ್ಯಮಿ ಮತ್ತು ನಟ ಸುರೇಶ್ ಶರ್ಮಾ ಅವರ ಪುತ್ರರಾಗಿದ್ದ ಧ್ರುವ ಶರ್ಮಾ, ವಾಕ್ ಶ್ರವಣ ದೋಷದಿಂದ ಬಳಲುತ್ತಿದ್ದರೂ ಕ್ರಿಕೆಟ್ ಮತ್ತು ನಟನೆಯಲ್ಲಿ ಹೆಸರು ಮಾಡಿದ್ದರು. ಕರ್ನಾಟಕ ಸೆಲೆಬ್ರಿಟಿ ಲೀಗ್`ನ ಉಪನಾಯಕರಾಗಿದ್ದ ಧ್ರುವ ಶರ್ಮಾ, ಕಿಚ್ಚ ಸುದೀಪ್ ಅವರ ನೆಚ್ಚಿನ ಆಟಗಾರರಾಗಿದ್ದರು. ಕಿವುಡರ ವಿಶ್ವಕಪ್`ನಲ್ಲೂ ಭಾರತ ತಂಡದ ನಾಯಕತ್ವ ವಹಿಸಿದ್ದರು. ಸ್ಲೇಹಾಂಜಲಿ ಚಿತ್ರದಲ್ಲಿ ನಾಯಕರಾಗಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಮಲ್ ಹಾಸನ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ತಮಿಳಿನ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಮತ್ತೊಂದು ...

news

ದರ್ಶನ್ ಜತೆ ಅಭಿನಯಿಸದ್ದಕ್ಕೆ ಶಿವರಾಜ್ ಕುಮಾರ್ ಬೇಸರ

ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಹತ್ವಾಕಾಂಕ್ಷೆಯ ‘ಕುರುಕ್ಷೇತ್ರ’ ಚಿತ್ರ ಭಾರೀ ...

news

ಸ್ಮೈಲ್ ರಾಜಾ ಚಿತ್ರದ ನಿರ್ದೇಶಕ ಹರೀಶ್ ಅರೆಸ್ಟ್

ಬೆಂಗಳೂರು: ಹಣಕಾಸಿನ ವಿವಾದದಲ್ಲಿ ಹಲ್ಲೆ ಮಾಡಲು ರೌಡಿಗಳಿಗೆ ಸುಪಾರಿ ನೀಡಿದ್ದ ಸ್ಮೈಲ್ ರಾಜಾ ಚಿತ್ರದ ...

news

ರಾಣಾ ಚಿತ್ರದಲ್ಲಿ ಕಿರಿಕ್ ಬೆಡಗಿ ಯಶ್ ಗೆ ನಾಯಕಿ ವಿಚಾರ: ಇದು ಸುಳ್ಳುಸುದ್ದಿ ಎಂದ ರಶ್ಮಿಕಾ

ರಾಕಿಂಗ್ ಸ್ಟಾರ್ ಯಶ್ ನಾಯಕ ನಟರಾಗಿ ಅಭಿನಯಿಸುತ್ತಿರುವ ಹರ್ಷ ನಿರ್ದೇಶನದ ರಾಣಾ ಚಿತ್ರಕ್ಕೆ ಕಿರಿಕ್ ...

Widgets Magazine