ಐಂದ್ರಿತಾ ಜತೆ ಪ್ರೇಮ ಒಪ್ಪಿಕೊಂಡ ದಿಗಂತ್?

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (08:26 IST)

ಬೆಂಗಳೂರು: ಇತ್ತೀಚೆಗಷ್ಟೇ ಚಿರು ಸರ್ಜಾ ಮತ್ತು ಮೇಘನಾ ರಾಜ್ ರಿಯಲ್ ಲೈಫ್ ನಲ್ಲೂ ಜೋಡಿಯಾಗವುದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇನ್ನೊಂದು ಜೋಡಿಯ ಪ್ರೇಮ ಬಹಿರಂಗವಾಗಿದೆ.


 
ಚಾಕಲೇಟ್ ಹೀರೋ ದಿಗಂತ್ ಮತ್ತು ಐಂದ್ರಿತಾ ರೇ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹಲವು ದಿನಗಳಿಂದ ಗಾಸಿಪ್ ಇದ್ದೇ ಇತ್ತು. ಆದರೆ ಇವರಿಬ್ಬರೂ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ.
 
ಆದರೆ ಇದೀಗ ದಿಗಂತ್ ಖಾಸಗಿ ಮಾಧ್ಯಮವೊಂದರಲ್ಲಿ ತಮ್ಮಿಬ್ಬರ ನಡುವೆ ಪ್ರೀತಿಯಿರುವುದು ನಿಜ. ಆದರೆ ಮದುವೆ ಸದ್ಯಕ್ಕಿಲ್ಲ. ಮುಂದಿನ ವರ್ಷದ ಅಂತ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಮನಸಾರೆ ಸಿನಿಮಾ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲೂ ಜೋಡಿಯಾಗುತ್ತಿರುವ ಸುದ್ದಿಗೆ ಇದೀಗ ಮತ್ತಷ್ಟು ಪುಷ್ಠಿ ಸಿಕ್ಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ದಿಗಂತ್ ಐಂದ್ರಿತಾ ರೇ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Diganth Sandalwood Aindritha Ray Kannada Film News

ಸ್ಯಾಂಡಲ್ ವುಡ್

news

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಿನ್ನು ಆಲಿಯಾಸ್ ಕವಿತಾ ಗೌಡ

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ...

news

ಕನ್ನಡವೆಂದರೆ ಬಾಲಿವುಡ್ ಬೆಡಗಿ ದೀಪಿಕಾಗೆ ಇಷ್ಟೊಂದು ಅಸಡ್ಡೆಯೇ?

ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ...

news

ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪ್ರಭಾಸ್ ಪೂಜೆ!

ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಜಗತ್ತಿನ ಯಾವ ಮೂಲೆಯಿಂದೆಲ್ಲಾ ಪ್ರಭಾಸ್ ಆರಾಧಿಸುವವರು ಇದ್ದಾರೆ ...

news

ಬಿಗ್ ಬಾಸ್ ಮನೆಯಲ್ಲಿ ಅಸ್ವಸ್ಥಗೊಂಡ ಅನುಪಮಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ...

Widgets Magazine