ನಿರ್ದೇಶಕ ಎಸ್ ನಾರಾಯಣ್‌ ಗೆ ತಮಿಳುನಾಡು ಮೂಲದ ಜ್ಯೋತಿಷಿಯಿಂದ ವಂಚನೆ

ಬೆಂಗಳೂರು, ಶನಿವಾರ, 1 ಸೆಪ್ಟಂಬರ್ 2018 (07:20 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್ ನಾರಾಯಣ್‌  ಅವರಿಗೆ ತಮಿಳುನಾಡು ಮೂಲದ ಜ್ಯೋತಿಷಿಯೊಬ್ಬರು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ವಿಚಾರ ಇದೀಗ ಬೆಳಕಿಗೆ ಬಂದಿದೆ.


ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿ,  ನಿರ್ದೇಶಕ ಎಸ್ ನಾರಾಯಣ್‌  ಅವರಿಗೆ ಎಪ್ಪತ್ತು ಕೋಟಿ ಹಣವನ್ನು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿ ಅದಕ್ಕಾಗಿ 20 ಲಕ್ಷ ನಿರ್ವಹಣಾ ಶುಲ್ಕವನ್ನು ನಿರ್ದೇಶಕ ಎಸ್ ನಾರಾಯಣ್‌  ಅವರಿಂದ ತೆಗೆದುಕೊಂಡಿದ್ದಾರಂತೆ.


ಆದರೆ ಸಾಲವೂ ಕೊಡದೆ, ಕೊಟ್ಟ ಹಣವನ್ನು ಹಿಂದಿರುಗಿಸದೆ ಜ್ಯೋತಿಷಿ ಮಂದಾರ ಮೂರ್ತಿ ವಂಚಿಸಿದ್ದಾನೆ ಎಂದು ಎಸ್ ನಾರಾಯಣ್ ಮಂದಾರ ಮೂರ್ತಿಯ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈ ದೂರಿನನ್ವಯ ಮಂದಾರ ಮೂರ್ತಿ ಅವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಮ್ಯಾಗೆ ಮತ್ತೆ ಚಿತ್ರರಂಗಕ್ಕೆ ಬರಲು ಹೇಳಿದ ಸ್ಯಾಂಡಲ್ ವುಡ್ ನಟಿ ಇವರೇ?

ಬೆಂಗಳೂರು : ಒಂದುಕಾಲದಲ್ಲಿ ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎಂದು ಹೆಸರು ಮಾಡಿದ ನಟಿ ರಮ್ಯಾ ಅನಂತರ ...

news

ಕತ್ರೀನಾ ಕೈಫ್ ಇಂಗ್ಲೆಂಡ್‌ನಲ್ಲಿ ಸ್ನೇಹಿತರೊಂದಿಗೆ ಜಾಲಿ ರೈಡ್

ಕತ್ರೀನಾ ಕಾರಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವರು ...

news

ಹಾಸ್ಯ ನಟ ಸುನೀಲ್ ಈಗ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ಹೈದರಾಬಾದ್ : ಟಾಲಿವುಡ್​ ಹಾಸ್ಯ ನಟ ಸುನೀಲ್ ಇಷ್ಟುದಿನ ಚಿತ್ರ ರಂಗದಿಂದ ದೂರ ಇದ್ದು ಇದೀಗ ಮತ್ತೆ ...

news

ಖ್ಯಾತ ನಟ ಅಮಿತಾಬ್ ಬಚ್ಚನ್ ಗೆ ಈ ಮೂವರು ನಟಿಯರ ಜೊತೆ ನಟಿಸಲು ಭಯವಾಗುತ್ತದೆಯಂತೆ!

ಮುಂಬೈ : ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿ ಬಾಲಿವುಡ್ ಸ್ಟಾರ್ ನಟ ಎಂದೇ ...

Widgets Magazine