Widgets Magazine
Widgets Magazine

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಚ್ಚು ಮೆಚ್ಚಿನ ನಟ ಯಾರು ಗೊತ್ತಾ...?

ಬೆಂಗಳೂರು, ಶುಕ್ರವಾರ, 19 ಜನವರಿ 2018 (06:51 IST)

Widgets Magazine

ಬೆಂಗಳೂರು : ಇತ್ತಿಚೆಗೆ ಚಿತ್ರರಂಗದ  ನಟರ ನಡುವೆ ಭಾರಿ ಪೈಪೋಟಿಯಿದ್ದು, ಒಬ್ಬ ನಟನನ್ನು ಮತ್ತೊಬ್ಬ ನಟ ಮೆಚ್ಚಿಕೊಳ್ಳುವುದೇ ಅಪರೂಪವಾಗಿದೆ. ಆದರೆ ಈ ಮಧ್ಯ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನವರಸ ನಾಯಕ ಜಗ್ಗೇಶ್ ಅವರ ಅಭಿನಯವನ್ನು ಹೊಗಳಿದ್ದಾರೆ.

 
ಪುನೀತ್ ರಾಜ್ ಕುಮಾರ್  ಅವರ ನೆಚ್ಚಿನ ನಟ ಜಗ್ಗೇಶ್ ಅವರಂತೆ. ಮೊದಲಿನಿಂದಲೂ ಪುನೀತ್ ಅವರು ಜಗ್ಗೇಶ್ ಅವರ ಚಿತ್ರ ಬಿಡುಗಡೆಯಾಗುವುದನ್ನೇ ಕಾಯುತ್ತಿದ್ದರಂತೆ. ಅವರ ಚಿತ್ರ ಬಿಡುಗಡೆಯಾದ ಅದನ್ನು ಒಂದೆರಡು ಬಾರಿಯಲ್ಲ, ಅನೇಕ ಬಾರಿ ನೋಡುತ್ತಿದ್ದರಂತೆ. ಪುನೀತ್ ಅವರು ಲೆಕ್ಕವಿಡಲಾರದಷ್ಟು ಸಲ ನೋಡಿದ ಜಗ್ಗೇಶ್ ಅವರ ಚಿತ್ರವೆಂದರೆ ತರ್ಲೆ ನನ್ಮಗ ಚಿತ್ರವಂತೆ. ಅದೇರೀತಿ ಎದ್ದೇಳು ಮಂಜುನಾಥ ಹಾಗು ನೀರ್ ದೋಸೆ ಚಿತ್ರವನ್ನು ಕೂಡ ಅನೇಕ ಬಾರಿ ನೋಡಿರುವುದಾಗಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ಜಗ್ಗೇಶ್ ಅವರ ಅಭಿಮಾನಿ ಎಂಬುದರಲ್ಲಿ ಸಂಶಯವಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಾಶೀನಾಥ್ ಬಗ್ಗೆ ಚೌಕ ನಿರ್ದೇಶಕರು ಬಿಚ್ಚಿಟ್ಟ ಸತ್ಯ!

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ ಎಂಬುದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ...

news

ಕಾಶೀನಾಥ್ ನಿಧನಕ್ಕೆ ಚಿತ್ರರಂಗದ ಪ್ರತಿಕ್ರಿಯೆ ಏನು?

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟ ಜಗ್ಗೇಶ್, ...

news

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ!

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಅವರು ಗುರುವಾರ(ಇಂದು) ಬೆಳಿಗ್ಗೆ ...

news

ಜಗ್ಗೇಶ್ ಈಗ ಸರಿಗಮಪ ಲಿಟಲ್ ಚಾಂಪ್ಸ್ ಜ್ಞಾನೇಶನ ಫ್ಯಾನ್!

ಬೆಂಗಳೂರು: ನವರಸನಾಯಕ ಜಗ್ಗೇಶ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪಿಯನ್ ...

Widgets Magazine Widgets Magazine Widgets Magazine