ಪುನೀತ್ ಪಿಎ ಎಂದು ಸುಳ್ಳು ಹೇಳಿ ಆತ ಮಾಡಿದ ಖತರನಾಕ್ ಕೆಲಸವೇನು ಗೊತ್ತೇ?

ಬೆಂಗಳೂರು, ಶನಿವಾರ, 14 ಜುಲೈ 2018 (13:58 IST)

ಬೆಂಗಳೂರು : ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟ ದರ್ಶನ್ ಅವರ  ಮ್ಯಾನೆಜರ್ ದರ್ಶನ್ ಅವರಿಗೆ ಮೋಸ ಮಾಡಿ ಹಣ ದೋಚಿಕೊಂಡು ಹೋದ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಮತ್ತೊಬ್ಬ ಸ್ಯಾಂಡಲ್ ವುಡ್ ನಟನ  ಪಿಎ ಎಂದು ಹೇಳಿಕೊಂಡು ಹಣ ಸಂಗ್ರಹ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.


ಹೌದು. ರವಿ ಎಂಬಾತ ತಾನು ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್ ಪಿಎ ಅಂತ ಹೇಳಿಕೊಂಡು ತನ್ನ ತಂಗಿ ಮದುವೆಗಾಗಿ ಹಣ ಸಂಗ್ರಹಮಾಡಿ, ಅದ್ದೂರಿಯಾಗಿ ಮದುವೆ ಮಾಡಿದ್ದಾನಂತೆ. ಮೈಸೂರು ಜಿಲ್ಲೆ ಟಿ.ನರಸೀಪುರದ ಬನ್ನೂರಿನವನಾದ ರವಿ ಕಳೆದ 20 ವರ್ಷಗಳಿಂದ ಬೆಂಗಳೂರಿನ ವಾಸವಿದ್ದನು ಎನ್ನಲಾಗಿದೆ.


ಆದರೆ ಇತ್ತೀಚೆಗೆ ರವಿ ತನ್ನ ತಂಗಿ ಮದುವೆಗೆ ಹಣ ಹೊಂದಿಸುವ ಉದ್ದೇಶದಿಂದ ಊರಿಗೆ ಹೋಗಿ ಸಂಬಂಧಿಕರು, ಸ್ನೇಹಿತರಿಗೆ ನಾನು ಪುನೀತ್ ರಾಜ್ ಕುಮಾರ್ ಪಿಎಯಾಗಿದ್ದು, ನಿಮಗೆ ಸಿನಿಮಾದಲ್ಲಿ ಚಾನ್ಸ್ ಸೇರಿದಂತೆ ಪುನೀತ್ ಜೊತೆ ಕೆಲಸ ಮಾಡುವ ಅವಕಾಶ ನೀಡುತ್ತೇನೆ ಎಂದು ಹೇಳಿ , ಈಗ ಸದ್ಯಕ್ಕೆ ನನ್ನ ತಂಗಿ ಮದುವೆಗೆ ಹಣದ ಅವಶ್ಯಕತೆ ಇದ್ದು, ನನಗೆ ಹಣ ನೀಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಆದಕಾರಣ ರವಿ ಸ್ನೇಹಿತರು ಹಾಗೂ ಸಂಬಂಧಿಕರು ಲಕ್ಷ ಗಟ್ಟಲೇ ಹಣ ನೀಡಿದ್ದಾರಂತೆ.


ಆದರೆ ತಂಗಿ ಮದುವೆ ಮಾಡಿದ ನಂತರ ಆತ ತನ್ನ ಫೋನ್ ಅನ್ನು ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖಳನಟ ವಜ್ರಮುನಿ ಕುಟುಂಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ಯಾಕೆ?

ಬೆಂಗಳೂರು : ಕನ್ನಡ ಚಿತ್ರರಂಗದ ಖಾತ್ಯ ಖಳನಟ ವಜ್ರಮುನಿ ಅವರ ಕುಟುಂಬದವರು ಚಿತ್ರತಂಡವೊಂದರ ವಿರುದ್ಧ ...

news

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಸೆಕ್ಸ್ ಮಾಡಿದ್ರು- ನಟಿ ಶ್ರೀ ರೆಡ್ಡಿ

ಹೈದರಾಬಾದ್ : ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಟಾಲಿವುಡ್ ನಲ್ಲಿ ಹೊಸ ಸಂಚಲನ ಮೂಡಿಸಿದ ...

news

ನಾಗರಹಾವು' ಸಿನಿಮಾದ ಒನಕೆ ಓಬವ್ವನ ಪಾತ್ರಕ್ಕೆ ಜಯಂತಿಗಿಂತ ಮೊದಲು ಆಯ್ಕೆಯಾಗಿದ್ದು ಯಾರು ಗೊತ್ತೇ

ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ನಟಿಸಿದ ಹಿಟ್ ಸಿನಿಮಾ 'ನಾಗರಹಾವು' ಈಗ ಮತ್ತೆ ತೆರೆ ...

news

ಶಿವರಾಜ್ ಕುಮಾರ್ ನನ್ನ ಹಿಂದಿನ ಜನ್ಮದ ಸಹೋದರ ಎಂದು ನಟ ಜಗ್ಗೇಶ್ ಹೇಳಿದ್ದು ಯಾಕೆ?

ಬೆಂಗಳೂರು : ಕನ್ನಡದ ಖ್ಯಾತ ನಟರೊಬ್ಬರು ಸ್ಯಾಂಡಲ್ ವುಡ್ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ...

Widgets Magazine
Widgets Magazine