ಪುನೀತ್ ಸಿನಿಮಾ ಹೆಸರುಗಳಲ್ಲಿ ಮಾಡಿದ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ ?

ಬೆಂಗಳೂರು, ಗುರುವಾರ, 14 ಜೂನ್ 2018 (06:33 IST)

ಬೆಂಗಳೂರು : ಜನರಿಗೆ ತಮ್ಮ ನೆಚ್ಚಿನ ನಟನ ಮೇಲೆ ಎಷ್ಟರ ಮಟ್ಟಿಗೆ ಅಭಿಮಾನವಿರುತ್ತದೆ ಎಂಬುದಕ್ಕೆ ಇಲ್ಲೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ತನ್ನ ನೆಚ್ಚಿನ ನಟನ ಸಿನಿಮಾ ಹೆಸರುಗಳನ್ನು ಸೇರಿಸಿ ಮಾಡಿಸಿಕೊಂಡಿರುವುದೇ ಸಾಕ್ಷಿ.


ಬೆಂಗಳೂರಿನ ಮಾಗಡಿಯವರಾದ ನವೀನ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಇವರ ಮದುವೆಯು ರಶ್ಮಿ ಎಂಬುವವರ ಜೊತೆ ಇದೇ ತಿಂಗಳು ಜೂನ್ 17 ಹಾಗೂ 18ರಂದು ನಡೆಯಲಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿಯಾದ  ಇವರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಪುನೀತ್ ಅವರ ಎಲ್ಲಾ ಸಿನಿಮಾಗಳ ಹೆಸರನ್ನು ಬಳಸಿಕೊಂಡು ಮಾಡಿಸಿದ್ದಾರೆ.


ಅದು ಹೇಗಿದೆ ಎಂದರೆ ಆಕಾಶ್’ ವೇ ಚಪ್ಪರ, ‘ಪೃಥ್ವಿ’ ಯೇ ಹಸೆಮಣೆ, ಮದುವೆಯೇ ‘ಮಿಲನ’, ಈ ನವೀನ ‘ಮೈತ್ರಿ’ ಬದುಕಿಗೆ ‘ಹೊಸ ಬೆಳಕು’ ಪ್ರೀತಿ. ‘ಪರಮಾತ್ಮ’ನ ಸ್ಮರಿಸುತ್ತಾ, ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ ‘ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ ‘ಬಿಂದಾಸ್’ ಆಗಿ ಬನ್ನಿ. ಆರತಕ್ಷತೆಯ ‘ಅಪ್ಪು’ಗೆ ಮೂಹೂರ್ತದ ‘ಪವರ್’ ಎಂದು ಮುದ್ರಿಸಿದ್ದಾರೆ. ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಟ್ವಿಟ್ಟರಿನಲ್ಲಿ ಪುನೀತ್ ರಾಜ್‍ಕುಮಾರ್ ನವೀನ್ ಹಾಗೂ ರಶ್ಮಿ ಜೋಡಿಗೆ ಶುಭಾಶಯ ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಸ್ತೆ ಬದಿಯ ತಳ್ಳುಗಾಡಿಯಲ್ಲಿ ಹೇರ್‌ಬ್ಯಾಂಡ್‌ ಖರೀದಿಸಿದ ಬಾಲಿವುಡ್ ನ ಈ ನಟಿ ಯಾರು ಗೊತ್ತಾ?

ಮುಂಬೈ : ಸಿನಿಮಾ ತಾರೆಯರು ಅಂದ ಮೇಲೆ ಅವರು ಶಾಪಿಂಗ್ ಮಾಡುವಾಗ ಸಣ್ಣ ಪುಟ್ಟ ವಸ್ತುಗಳನ್ನು ಕೂಡ ದೊಡ್ಡ ...

news

ಸಲ್ಮಾನ್‌ ಖಾನ್ ಬಗ್ಗೆ ಕತ್ರಿನಾ ಹೇಳಿದ ಈ ವಿಷಯ ಕೇಳಿದ್ರೆ ಶಾಕ್ ಆಗ್ತಿರಿ!

ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್‌ ಹಾಗೂ ನಟಿ ಕತ್ರಿನಾ ಕೈಫ್‌ ಅವರು ಈ ಹಿಂದೆ ...

news

ಕನ್ನಡದ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ

ಮುಂಬೈ : ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರುವ ಸುದ್ದಿ ಈಗಾಗಲೇ ...

news

ಹೊಸದೊಂದು ಫಿಟ್ನೆಸ್ ಚಾಲೆಂಜ್ ಹಾಕಿದ ನಟ ಸುದೀಪ್

ಬೆಂಗಳೂರು : ಇತ್ತೀಚೆಗೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಫಿಟ್ನೆಸ್ ಚಾಲೆಂಜ್ ಹಾಕಿ ...

Widgets Magazine
Widgets Magazine