ಟ್ವೀಟರ್ ನಲ್ಲಿ ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದು ಯಾಕೆ ಗೊತ್ತಾ?

ಬೆಂಗಳೂರು, ಶುಕ್ರವಾರ, 6 ಜುಲೈ 2018 (09:41 IST)

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ವೀಟರ್ ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಈಗ ಆ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ ವ್ಯಕ್ತಿ ಯಾಕೆ ಟ್ವೀಟರ್ ನಲ್ಲಿ ಪುನೀತ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ್ದೆ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.


ನಟ ಪುನೀತ್ ಅವರು ಫೇಸ್ ಬುಕ್ ಅಕೌಂಟ್ ಮಾತ್ರ ಹೊಂದಿದ್ದರು. ಟ್ವೀಟರ್ ನಲ್ಲಿ ಇದುವರೆಗೆ ಅಕೌಂಟ್ ಕ್ರಿಯೆಟ್ ಮಾಡಿಲ್ಲ.  ಆದರೆ ಈಗ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ವೀಟರ್ ನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಆಗಿದ್ದು, ಈ ಖಾತೆಯನ್ನು ಎಷ್ಟೋ ಜನರು ಹಾಗೂ ಕೆಲವು ಸೆಲೆಬ್ರೆಟಿಗಳೂ ಸಹ ಪುನೀತ್  ಅವರ ಖಾತೆ ಎಂದುಕೊಂಡು ಫಾಲೋ ಮಾಡುತ್ತಿದ್ದಾರೆ, ಆದರೆ ಇದು ಫೇಕ್ ಎಂದು ತಿಳಿದ ಮೇಲೆ ಈ ಅಕೌಂಟ್ ನ್ನು ಕ್ರಿಯೆಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಅನೇಕರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಹಾಗೇ ಪುನೀತ್ ಅವರು ಕೂಡ ಆ ಅಕೌಂಟ್ ಫೇಕ್ ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.


ಆದರೆ ಈಗ ಆ ಫೇಕ್ ಅಕೌಂಟ್ ಕ್ರಿಯೆಟ್ ಮಾಡಲು ಕಾರಣವೆನೆಂಬುದನ್ನು ಸ್ವತಃ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ ವ್ಯಕ್ತಿಯೇ ಸ್ಪಷ್ಟನೆ ನೀಡಿದ್ದಾನೆ. ‘’ಹಾಯ್ ನಮಸ್ಕಾರ ಎಲ್ಲರಿಗೂ. ನಾನು ಮೊದಲಿಗೆ #ಅಪ್ಪು ಸರ್ ಗೆ ಕ್ಷಮೆ ಕೇಳುತ್ತೇನೆ. ನಂತರ ಅಪ್ಪು ಅಭಿಮಾನಿ ಗಳಿಗೆ ಕ್ಷಮೆ ಕೇಳುತ್ತೇನೆ. ಈ ಫೇಕ್ ಖಾತೆ ತೆಗೆದಿರುವ ಉದ್ದೇಶ ಇಷ್ಟೇ, ಅಪ್ಪು ಸರ್ ಈ ತರಹದ ತಮ್ಮ ಹೆಸರಿನಲ್ಲಿ ಫೇಕ್ ಖಾತೆ ನೊಡಿಯಾದ್ರು #Twitter ಬರಬಹುದೇನೋ ಅಂತಾ ಅಷ್ಟೇ. ಕೆಟ್ಟ ಉದ್ದೇಶ ಏನು ಇಲ್ಲ’’ ಎಂದು ತಿಳಿಸಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಟ್ವೀಟರ್ ಫೇಕ್ ಅಕೌಂಟ್ Sandalwood Tweeter Puneeth Rajkumar Power Star Fake Account

ಸ್ಯಾಂಡಲ್ ವುಡ್

news

ಬಿಡುಗಡೆಗೂ ಮೊದಲೇ ಸಂಕಷ್ಟಕ್ಕೆ ಸಿಲುಕಿದ ಜಾನ್ ಅಬ್ರಹಾಂ ಹೊಸ ಸಿನಿಮಾ

ಮುಂಬೈ : ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ನಟಿಸಿದ ಹೊಸ ಸಿನಿಮಾ ‘ಸತ್ಯಮೇವ ...

news

ಹುಟ್ಟುಹಬ್ಬಕ್ಕೂ ಮೊದಲೇ ರಣ್‍ವೀರ್ ಸಿಂಗ್ ಗೆ ಸಿಕ್ಕಿದೆ ದುಬಾರಿ ಗಿಪ್ಟ್

ಮುಂಬೈ : ಜುಲೈ 6ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ರಣ್‍ವೀರ್ ಸಿಂಗ್ ...

news

ಬಾಹುಬಲಿ ಚಿತ್ರದ ನಂತರ ನಟಿ ರಮ್ಯಾ ಕೃಷ್ಣ ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ?

ಹೈದರಾಬಾದ್ : ನಟಿ ರಮ್ಯಾ ಕೃಷ್ಣ ಅವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ...

news

ಕನ್ನಡದ ಬಗ್ಗೆ ಅಭಿಮಾನ ತೋರಿದ ಈ ಬಾಲಿವುಡ್ ನಟ ಯಾರು ಗೊತ್ತಾ?

ಮುಂಬೈ : ಎಲ್ಲರೂ ತುಂಬಾ ಇಷ್ಟ ಪಡುವ ಹಾಗೂ ಕಲಿಯಲು ತುಂಬಾ ಸುಲಭವಾದ ಭಾಷೆ ಎಂದರೆ ಅದು ಕನ್ನಡ. ವಿದೇಶದವರು ...

Widgets Magazine