ಹೊಸ ವರ್ಷದ ಆಚರಣೆಗೆ ಸುದೀಪ್ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ...?

ಬೆಂಗಳೂರು, ಮಂಗಳವಾರ, 2 ಜನವರಿ 2018 (11:12 IST)

Widgets Magazine

ಬೆಂಗಳೂರು : ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರು ಯಾರಿಗೆ ತಿಳಿದಿಲ್ಲ ಹೇಳಿ. ಸಾವಿರಾರು ಅಭಿಮಾನಿಗಳ ಪ್ರೀತಿಗೆ ಪಾತ್ರರಾದ ನಟ ಅಂದ್ರೆ ಸುದೀಪ್ ಅವರು. ಇವರು ಒಬ್ಬ ಒಳ್ಳೆಯ ನಟ ಮಾತ್ರವಲ್ಲ, ವಿಶಾಲ ಮನಸ್ಸುಳ್ಳ ವ್ಯಕ್ತಿ ಎಂಬುದಕ್ಕೆ ಅವರ ಸಮಾಜಸೇವೆ ಕೆಲಸಗಳೆ ಸಾಕ್ಷಿ.

 
ಅದೇರೀತಿ ಅವರ ಅಭಿಮಾನಿಗಳು ಕೂಡ ‘ಯಥಾ ರಾಜ ತಥಾ ಪ್ರಜೆ’ ಎಂಬಂತೆ ಅನೇಕ ರೀತಿಯ ಸಮಾಜ ಸೇವೆ ಕೆಲಸಗಳಲ್ಲಿ ತೊಡಗಿದ್ದಾರೆ. ಹೊಸ ವರ್ಷದ ಆಚರಣೆಗೆ ಹಣ ಹಾಳುಮಾಡುವ ಬದಲು ಎಂಟು ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಹೊಸ ವರ್ಷವನ್ನು ಒಂದು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.

 
ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಷಿಯನ್(ರಿ) ಎಂಬ ಸಂಘವನ್ನು ಸ್ಥಾಪಿಸಿ ಅದರ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಂಘ ಸುಮಾರು ಎರಡೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಅನಾಥಾಶ್ರಮ ಹಾಗು ವೃದ್ಧಾಶ್ರಮಕ್ಕೆ  ತಮ್ಮ ಕೈಲಾದಷ್ಟು ಸಹಾಯ ನೀಡಿದ್ದಾರೆ. ಈ ವಿಚಾರವನ್ನು ಪ್ರಚಾರಕ್ಕಾಗಿ ಮಾಡದೆ ಬೇರೆಯವರು ಪ್ರೇರಿತರಾಗಿ ಸಮಾಜಕ್ಕೆ ಏನಾದರೂ ಕೊಡುಗೆಗಳನ್ನು ನೀಡಬಹುದು ಎಂಬ ಉದ್ದೇಶದಿಂದ ಮಾಧ್ಯಮಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿರಾಟ್ -ಅನುಷ್ಕಾ ಕಂಜೂಸ್ ಬುದ್ಧಿ ನೋಡಿ ಜನ ನಗುತ್ತಿರುವುದು ಯಾಕೆ ಗೊತ್ತಾ...?

ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಭಾರಿ ಸುದ್ದಿಯಾಗಿ ಜನರ ಮೆಚ್ಚುಗೆ ಪಡೆದ ವಿರಾಟ್- ...

news

ಪುಟ್ಟಗೌರಿ ರಂಜಿನಿ ಕಾಲೆಳೆದ ಕಿಚ್ಚ ಸುದೀಪ್

ಬೆಂಗಳೂರು: ಭಾನುವಾರ ಬಂತೆಂದರೆ ಕಿಚ್ಚ ಸುದೀಪ್ ಕಲರ್ಸ್ ಸೂಪರ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರದಲ್ಲಿ ...

news

ಬಿಗ್ ಬಾಸ್: ನಿಜಕ್ಕೂ ಅಭಿಮಾನಿಗಳಿಗೆ ದಿವಾಕರ್ ಅವಮಾನ ಮಾಡಿದ್ದು ನಿಜವಾ?!

ಬೆಂಗಳೂರು: ಸಾಮಾನ್ಯ ಜನರಾಗಿ ಮನೆ ಪ್ರವೇಶಿಸಿದ ದಿವಾಕರ್ ಇದೀಗ ಸೀಕ್ರೆಟ್ ರೂಂನಲ್ಲಿರುವುದು ಅಭಿಮಾನಿಗಳಿಗೆ ...

news

ಹ್ಯಾಪಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ದಿವಾಕರ್ ಕೇಳಿದ ವಸ್ತು ಎಲ್ಲರಿಗೂ ಆಶ್ಚರ್ಯ ಅನಿಸಿದೆಯಂತೆ!

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ದಿವಾಕರ್ ಅವರು ಸಿಕ್ರೇಟ್ ರೂಂ ನಲ್ಲಿರುವ ವಿಷಯ ...

Widgets Magazine