Widgets Magazine
Widgets Magazine

ದುನಿಯಾ ರಶ್ಮಿ ಅಭಿನಯದ ’ಅವನಿಲ್ಲಿ ಇವಳಿಲ್ಲಿ’

Bangalore, ಮಂಗಳವಾರ, 7 ಮಾರ್ಚ್ 2017 (12:34 IST)

Widgets Magazine

ತೀರ್ಥಹಳ್ಳಿಯ ಹೆದ್ದೂರಿನ ಯುವಕ ಸಂದೇಶ್.ಕೆ ಪುಟ್ಟ ಪರದೆಯಿಂದ ಈಗ ಹಿರಿತೆರೆ ಎಂಬ ಹೆದ್ದಾರಿಗೆ ಬಂದು ತಲುಪಿದ್ದಾರೆ. ಇವರೇ ರಚಿಸಿ, ಚಿತ್ರಕಥೆ ಬರೆದು ನಿರ್ದೇಶನ ಹಾಗೂ ಸಂಕಲನ ಸಹ ಮಾಡುತ್ತಿರುವ `ಅವನಿಲ್ಲಿ ಇವಳಿಲ್ಲಿ’ ಒಂದು ವಿಭಿನ್ನ ಕಥೆ ಜೊತೆ ಯುವಕರಲ್ಲಿ ಜವಾಬ್ದಾರಿ ಮೂಡಿಸುವ ಚಿತ್ರ ಸಹ ಆಗಿದೆ. 
 
ಎಲ್ ಎನ್ ರಾಜು ನಿರ್ಮಾಣದ ಈ ಚಿತ್ರದ ಮೊದಲ ಹಂತದ ಚಿತ್ರಿಕರಣ ಬಗಲಗುಂಟೆ, ಸಾವನ ದುರ್ಗ ಕಾಡು ಹಾಗೂ ಬಿಡದಿಯಲ್ಲಿ 8 ದಿನಗಳು ನಡೆದು ನಂತರ ಶ್ರೀರಂಗಪಟ್ಟಣ, ಮೈಸೂರು ಹಾಗೂ ಸಕಲೆಶಪುರದಲ್ಲಿ ಎರಡನೇ ಹಂತ ಹಾಗೂ ಕೊನೆಯ ಹಂತವಾಗಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾದಲ್ಲಿ ಎಂಟು ದಿನ ಚಿತ್ರೀಕರಣ ನೆರವೇರಿಸಲಿದೆ. ಒಟ್ಟಾರೆ 40 ದಿವಸದ ಚಿತ್ರೀಕರಣ ಏಪ್ರಿಲ್ ಎರಡನೇ ವಾರದಲ್ಲಿ ಮುಗಿಯಲಿದೆ. 
 
ಹೆದ್ದೂರಿನ ಸಂದೇಶ್ ಕಳೆದ 10 ವರ್ಷಗಳಿಂದ ಪುಟ್ಟ ಪರದೆಯಲ್ಲಿ ಸಂಕಲನಕಾರ ಆಗಿ ಒಂದು ಸಿನಿಮಾ ನಿರ್ದೇಶನದ ಕನಸು ಹೊತ್ತು ಸ್ನೇಹಿತರಾದ ವೇಣು ನಾಗಸಂದ್ರ ಹತ್ತಿರ ಹೇಳಿಕೊಂಡಾಗ ಈ ಚಿತ್ರಕ್ಕೆ ಅವಕಾಶ ಲಭಿಸಿದೆ. ಪುಟ್ಟ ಪರದೆಯಲಿ ಪ್ರೀತಿ ಇಲ್ಲದ ಮೇಲೆ, ಜೋಗುಳ, ಮುಕ್ತ ಮುಕ್ತ, ಆಕಾಶ ದೀಪ ಅಂತಹ 20 ಮೆಗಾ ಧಾರವಾಹಿಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 
 
ಈ `ಅವನಿಲ್ಲಿ ಇವಳಿಲ್ಲಿ’ ಚಿತ್ರದಲ್ಲಿ ವಾಸ್ತವ ವಿಚಾವರನ್ನು ಮನದಟ್ಟಾಗುವಂತೆ ಹೇಳುತ್ತಿದ್ದಾರೆ. 20 ರಿಂದ 25 ವಯಸ್ಸನ್ನು ಜವಾಬ್ದಾರಿಯಿಂದ ಯುವಕ ಯುವತಿಯರು ಸರಿಯಾಗಿ ನಿರ್ವಹಿಸದೆ ಇದ್ದರೆ ಆಘಾತ ಕಟ್ಟಿಟ್ಟ ಬುತ್ತಿ. ಕೆಲವು ವಿಷಯಗಳನ್ನು ಪಕ್ಕಕ್ಕೆ ಸರಿಸಿ ಜೀವನವನ್ನು ನಿರ್ವಹಿಸಬೇಕು ಎಂದು ಚಿತ್ರದ ಮುಖಾಂತರ ಹೇಳುತ್ತಿದ್ದಾರೆ ನಿರ್ದೇಶಕ 
ಸಂದೇಶ್. 
 
ಈ ಚಿತ್ರದಲ್ಲಿ ಪ್ರಭು, ದುನಿಯ ರಶ್ಮಿ, ಎಲ್ ಎನ್ ರಾಜು, ಹನುಮಂತೆ ಗೌಡ, ಜೈ ಜಗದೀಶ್, ಹರ ಹರ ಮಹಾದೇವ ಪೌರಾಣಿಕ ಧಾರವಾಹಿಯ ಶಿವನ ಪಾತ್ರದಾರಿ ವಿನಯ್ ಗೌಡ ಖಳ ನಾಯಕ ಆಗಿ ನಟಿಸುತ್ತಿದ್ದಾರೆ. ಸುಚಿತ್ರಾ, ಶ್ರೀನಿವಾಸ ಮೇಷ್ಟ್ರು, ಸಂಗೀತ, ವೀಣಾ ಪೊನ್ನಪ್ಪ, ಜಾನವಿ ಹಾಗೂ ಇತರರು ಇದ್ದಾರೆ. ರವಿ ಕಿಶೋರ್ ಛಾಯಾಗ್ರಹಣ, ರಂಜಿತ್ ನಾಗ್ ಸಂಭಾಷಣೆ, ಮನೋಜ್ ಶ್ರೀಲಂಕಾ ಸಂಗೀತ, ಕೆ ಕಲ್ಯಾಣ್ ಅವರ ಸಾಹಿತ್ಯ, ವೇಣು ನಾರಸಂದ್ರ ನಿರ್ಮಾಣ ನಿರ್ವಹಣೆ ಚಿತ್ರಕ್ಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ರಾಧಿಕಾ ಬರ್ತ್ ಡೇಗೆ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?!

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಬರ್ತ್ ಡೇ. ಅಭಿಮಾನಿಗಳೊಂದಿಗೆ ಜನುಮದಿನ ...

news

ಎರಡೇ ಮಾತುಗಳಲ್ಲಿ ಖಡಕ್ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್

ನಾನು, ಸುದೀಪ್ ಇನ್ಮುಂದೆ ಸ್ನೇಹಿತರಲ್ಲ ಎಂದು ಇತ್ತೀಚೆಗೆ ದರ್ಶನ್ ಮಾಡಿದ್ದ ಟ್ವೀಟ್ ಭಾರೀ ಸಂಚಲನಕ್ಕೆ ...

news

ಅಭಿಮಾನಿಗೆ ಮಿಡಿದ ಶಿವರಾಜ್ ಕುಮಾರ್ ಹೃದಯ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಆದರೆ ...

news

ತುಮಕೂರಿನಲ್ಲಿ ಸುದೀಪ್ ಅಭಿಮಾನಿ ಸಾವು

ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಭಿನ್ನಾಭಿಪ್ರಾಯ ತಾರಕ್ಕೇರಿರುವ ಸಂದರ್ಭದಲ್ಲೇ ...

Widgets Magazine Widgets Magazine Widgets Magazine