ಎಂಗೇಜ್ ಆದ ಅನಿಕಾ-ಸಚಿನ್ ಜೋಡಿ ಮದುವೆ ಮುರಿದುಬಿದ್ದಿದ್ದಕ್ಕೆ ಕಾರಣ ಯಾರು ಗೊತ್ತಾ...?

ಬೆಂಗಳೂರು, ಮಂಗಳವಾರ, 9 ಜನವರಿ 2018 (11:11 IST)

ಬೆಂಗಳೂರು : ಕಿರುತೆರೆ ನಟಿ ಅನಿಕಾ ಹಾಗು ಸಚಿನ್ ಅವರ ನಡುವೆ ಮದುವೆ  ನಿಶ್ಚಯವಾಗಿದ್ದು, ಈಗ ಅದು ಕಾರುಣ್ಯ ರಾಮ್ ಅವರಿಂದ ಮುರಿದು ಬಿದ್ದಿದೆ ಎಂಬ ಮಾತು ಕೇಳಿಬರುತ್ತಿದೆ.

 
ಕಾರುಣ್ಯ ರಾಮ್ ಹಾಗೂ ಸಚಿನ್ ಅವರ ನಡುವೆ ಸಂಬಂಧವಿದೆ ಎಂದು ತಿಳಿದು ಅನಿಕಾ ಮನೆಯವರು ಈ ಮದುವೆ ನಡೆದರೆ ಮಗಳ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ಮದುವೆಯನ್ನು ಕ್ಯಾನ್ಸಲ್ ಮಾಡಿರುವುದಾಗಿ ಅನಿಕಾ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಕಾರುಣ್ಯ ರಾಮ್ ಅವರು ‘9 ವರ್ಷಗಳ ಹಿಂದೆ ಸಚಿನ್ ಹಾಗು ನನಗೆ ಪರಿಚಯವಾಗಿದ್ದು ನಿಜ. ಆದರೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ. ಸುಮ್ಮನೆ ನನ್ನ ಈ ವಿಷಯದಲ್ಲಿ ಎಳೆಯಬೇಡಿ ಎಂದು ಹೇಳಿದ್ದಾರೆ.  ಸಚಿನ್ ಅವರು ಕೂಡ ಒಮ್ಮೆ ಅನುಮಾನ ಬಂದರೆ ಮುಂದಿನ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಎಂದು  ಮದುವೆ ಆಗುವುದು ಬೇಡವೆಂದು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

 
ಕಾರುಣ್ಯ ರಾಮ್ ಅವರು ಈ ಹಿಂದೆ ಸಚಿನ್ ಅವರನ್ನು ಮದುವೆಯಾಗಿದ್ದು, ಅದಕ್ಕೆ ಸಂಬಂಧಿಸಿದ ಸಾಕ್ಷಿಯನ್ನು ಅನಿಕಾ ಮನೆಯವರಿಗೆ ತೋರಿಸಿದ್ದರಿಂದ ಈ ಮದುವೆ ಮುರಿದು ಬಿದ್ದಿದೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಒಟ್ಟಿನಲ್ಲಿ ಹಸೆಮಣೆ ಏರಬೇಕಿದ್ದ ಅನಿಕಾ-ಸಚಿನ್ ಜೋಡಿ ಈಗ ಬೇರೆ ಬೇರೆಯಾಗಿದೆ ಎಂಬುದು ಮಾತ್ರ ಸತ್ಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಲು ಜೋರಾಗಿತ್ತು ಯಶ್ ಬರ್ತ್ ಡೇ! ಯಶ್-ರಾಧಿಕಾ ಪಾರ್ಟಿಗೆ ಯಾರೆಲ್ಲಾ ಬಂದಿದ್ದರು ಗೊತ್ತಾ? (ಫೋಟೋ ಗ್ಯಾಲರಿ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಖುಷಿಗೆ ಸ್ಯಾಂಡಲ್ ...

news

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ...

news

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಜಗನ್ ಹೋಗಿದ್ದೆಲ್ಲಿಗೆ?

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದರೂ ತನ್ನ ಮುಂಗೋಪದಿಂದಲೇ ...

news

ಕರಣ್ ಜೋಹರ್ ಅವರು ತಮ್ಮ ಮುದ್ದು ಮಕ್ಕಳ ಬಗ್ಗೆ ಕಟ್ಟಿಕೊಂಡ ಕನಸು ಹೇಗಿದೆ ಗೊತ್ತಾ...?

ಮುಂಬೈ : ಬಾಲಿವುಡ್ ನ ಖ್ಯಾತ ನಿರ್ಮಾಪಕರಾದ ಕರಣ್ ಜೋಹರ್ ಅವರು ತಮ್ಮ ಮಕ್ಕಳನ್ನು ಸಿನಿಮಾ ಸೆಟ್ ನಲ್ಲಿ ...

Widgets Magazine
Widgets Magazine