Widgets Magazine
Widgets Magazine

ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

Kocchi, ಶುಕ್ರವಾರ, 14 ಜುಲೈ 2017 (10:33 IST)

Widgets Magazine

ಕೊಚ್ಚಿ: ಬಿದ್ದವರ ಮೇಲೆ ಕಲ್ಲು ಎಸೆಯುವುದು ಸಹಜ. ಮಲಯಾಳಂ ನಟ ದಿಲೀಪ್ ಪ್ರಕರಣದಲ್ಲೂ ಅದೇ ಆಗುತ್ತಿದೆ. ಮಲಯಾಳಂ ಸಿನಿಮಾ ರಂಗದಲ್ಲಿ ನಡೆದ ಎರಡು ಅಸಹಜ ಸಾವುಗಳಿಗೆ ದಿಲೀಪ್ ಕಾರಣ ಎಂಬ ಆರೋಪಗಳನ್ನು ಅವರ ಕುಟುಂಬದವರು ಮಾಡುತ್ತಿದ್ದಾರೆ.


 
ಪೋಷಕ ನಟ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಕಲಾಭವನ್ ಮಣಿ ಅಸಹಜ ಸಾವಿಗೆ ಹಾಗೂ ಇನ್ನೊಬ್ಬ ಮಲಯಾಳಿ ನಟ ಶ್ರೀನಾಥ್ ಅಸಹಜ ಸಾವಿಗೂ ದಿಲೀಪ್ ಪರೋಕ್ಷವಾಗಿ ಕಾರಣರಾಗಿದ್ದರು ಎಂದು ಅವರ ಕುಟುಂಬ ಮಲಯಾಳಂ ಮಾಧ್ಯಮಗಳ ಮೂಲಕ ಆರೋಪಿಸಿವೆ.
 
ಕಲಾಭವನ್ ಮಣಿ ಮತ್ತು ದಿಲೀಪ್ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪವಿತ್ತು. ಅದರ ಹಿನ್ನಲೆಯಲ್ಲೇ ಮಣಿ ಸಾವನ್ನಪ್ಪಿದ್ದರು ಎಂದು ಮಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
 
ಮಣಿ ಕುಟುಂಬಸ್ಥರ ಆರೋಪದ ಬೆನ್ನಲ್ಲೇ ಇನ್ನೊಬ್ಬ ನಟ ಶ್ರೀನಾಥ್ ಸಾವಿಗೂ ದಿಲೀಪ್ ನಡತೆಯೇ ಕಾರಣ ಎಂದು ಆ ನಟನ ಕುಟುಂಬದವರೂ ಆರೋಪಿಸಿದ್ದಾರೆ. ಸಿನಿಮಾವೊಂದರ ಪಾತ್ರಕ್ಕೆ ಆಯ್ಕೆಯಾದ ಮೇಲೆ ನಟ ದಿಲೀಪ್ ರಿಂದಾಗಿ ಶ್ರೀನಾಥ್ ಗೆ ಅವಕಾಶ ಕೈ ತಪ್ಪಿ ಹೋಯಿತು. ಹೀಗಾಗಿ ಮನನೊಂದು ಶ್ರೀನಾಥ್ ಸಾವನ್ನಪ್ಪಿದ್ದರು ಎಂದು ಅವರ ಕುಟುಂಬಸ್ಥರು ಮಾಧ್ಯಮವೊಂದರಲ್ಲಿ ಹೇಳಿದ್ದಾರೆ. ಹೀಗಾಗಿ ಇದೀಗ ದಿಲೀಪ್ ನಟಿಯ ಮೇಲಿನ ಹಲ್ಲೆ ಪ್ರಕರಣದ ಜತೆಗೆ ಇಂತಹ ಆರೋಪಗಳಿಗೂ ವೃಥಾ ಗುರಿಯಾಗುತ್ತಿದ್ದಾರೆ.
 
ಇದನ್ನೂ ಓದಿ.. ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡ ಸಿನಿಮಾದಲ್ಲೂ ನಟಿಸಿದ್ದ ದಿಲೀಪ್.. ನೆನಪಿದೆಯೇ?

ಬೆಂಗಳೂರು: ಬಹುಭಾಷಾ ತಾರೆ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

news

ಇಂಡೋನೇಷ್ಯಾ ಸಂಗೀತಗಾರರ ಬಾಯಲ್ಲಿ ಈಗ ಬಾಹುಬಲಿ ಟೈಟಲ್ ಸಾಂಗ್: ಸಿಕ್ಕಾಪಟ್ಟೆ ಪಾಪ್ಯೂಲರ್ ಆಯ್ತು ವಿಡಿಯೋ

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ...

news

ದಿಲೀಪ್ ಬಂಧನದ ಬಗ್ಗೆ ಮಲೆಯಾಳಿ ನಟಿಯ ಮೊದಲ ಪ್ರತಿಕ್ರಿಯೆ

ವೈಯಕ್ತಿಕ ಶತೃತ್ವ ಅಥವಾ ಬೇರಾವುದೋ ವಿಷಯಕ್ಕಾಗಲಿ ಯಾರ ಮೇಲೂ ವಿನಾಕಾರಣ ನಾನು ಆರೋಪ ಮಾಡಿಲ್ಲ, ನಾನು ಯಾರ ...

news

ಯಾವ ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಟೈಗರ್ ತಂಗಿಯ ಗ್ಲಾಮರಸ್ ಲುಕ್

ಬಾಲಿವುಡ್ ನಟ ಜಾಕಿಶ್ರಾಫ್ ಪುತ್ರಿ ಕೃಷ್ಣ ಶ್ರಾಫ್ ನಟಿಯಾಗಿ ಇನ್ನೂ ಎಂಟ್ರಿಕೊಟ್ಟಿಲ್ಲವಾದರೂ ಯಾವ ...

Widgets Magazine Widgets Magazine Widgets Magazine