ಕನ್ನಡದ ಖ್ಯಾತ ನಿರ್ದೇಶಕ, ರಂಗಭೂಮಿ ಕಲಾವಿದ ಟಿ.ಎಸ್.ರಂಗಾ ಇನ್ನಿಲ್ಲ!

ಬೆಂಗಳೂರು, ಸೋಮವಾರ, 9 ಏಪ್ರಿಲ್ 2018 (07:02 IST)

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ, ರಂಗಭೂಮಿ ಕಲಾವಿದ ಟಿ.ಎಸ್.ರಂಗಾ ಅವರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.


 69 ವರ್ಷ ವಯಸ್ಸಿನ ಇವರು ಹಲವು ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದು, ಭಾನುವಾರದಂದು ಬೆಳಿಗ್ಗೆ ಬೆಂಗಳೂರಿನ ಎನ.ಆರ್.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇವರು ತಮ್ಮ ಪತ್ನಿ ಅಶ್ವಿನಿ, ಮಗಳು ತನ್ವಿತಾ, ಅಳಿಯ ಹಾಗೂ ಅವರ ಅಭಿಮಾನಿಗಳನ್ನು, ಶಿಷ್ಯವೃಂದದವರನ್ನು ಅಗಲಿದ್ದಾರೆ.


ಭಾನುವಾರ ಸಣಜೆ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆದಿದ್ದು, ಹಿರಿಯ ನಟ ಸುಂದರ್ ರಾಜ್, ಟಿ.ಎಸ್.ನಾಗಾಭರಣ ಸೇರಿದಂತೆ ಸಿನಿಮಾ ಕ್ಷೇತ್ರದ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದಿದ್ದರು.


ಅವರು ಸ್ಯಾಂಡಲ್ ವುಡ್ ನಲ್ಲಿ  'ಗೀಜಗನ ಗೂಡು' ಹಾಗೂ 'ಸಾವಿತ್ರಿ' ಸಿನಿಮಾವನ್ನ ನಿರ್ದೇಶನ ಮಾಡಿದ್ದು, 'ಗೀಜಗನ ಗೂಡು' ಇವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡದ ಮೊದಲ ಚಿತ್ರ. ಬಾಲಿವುಡ್ ನಲ್ಲಿ 'ಗಿಧ್' ಎಂಬ ಚಿತ್ರವನ್ನ ಡೈರೆಕ್ಟ್ ಮಾಡಿ ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ಟಿ ಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದ 'ಗ್ರಹಣ' ಚಿತ್ರಕ್ಕೆ ಚಿತ್ರಕಥೆ ಬರೆದು ಟಿ ಎಸ್ ರಂಗ ಅವರು ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ರಂಗಭೂಮಿಯಲ್ಲಿಯೂ ಟಿ ಎಸ್ ರಂಗ ಒಳ್ಳೆಯ ಹೆಸರು ಮಾಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹುಚ್ಚ ವೆಂಕಟ್ ಹಾಗೇ ಐಟಂ ಸಾಂಗ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ಯಾರು ಗೊತ್ತಾ..?

ಮುಂಬೈ : ಐಟಂ ಸಾಂಗ್ ಬ್ಯಾನ್ ಆಗ್ಬೇಕು ಅಂತ ನಟ ಫೈಯರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಹಲವು ಬಾರಿ ...

news

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಕಿಚ್ಚ ಸುದೀಪ್!

ಬೆಂಗಳೂರು : ತಮ್ಮ ಅಮೋಘವಾದ ಅಭಿನಯದ ಮೂಲಕ ಅಭಿನಯ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಸ್ಯಾಂಡಲ್ ವುಡ್ ನಟ ...

news

ಜಾನ್ ಅಬ್ರಾಹಂರವರು ಪ್ರೇರಣಾ ಅರೋರಾ ವಿರುದ್ಧ ದೂರು ದಾಖಲಿಸಲು ಕಾರಣವೇನು..?

ಮುಂಬೈ : ಬಾಲಿವುಡ್ ನಟ, ನಿರ್ಮಾಪಕರಾದ ಜಾನ್ ಅಬ್ರಾಹಂ ಅವರು ಪ್ರೇರಣಾ ಅರೋರಾ ಹಾಗೂ ಅವರ ಎಂಟರ್ ಟೈನ್ ...

news

ಇರ್ಫಾನ್ ಖಾನ್ ಅಭಿನಯದ ‘ಬ್ಲಾಕ್ ಮೇಲ್’ ಕುರಿತು ಅಮಿತಾಬ್ ಬಚ್ಚನ್ ಹೇಳಿದ್ದೇನು…?

ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ ‘ಬ್ಲಾಕ್ ಮೇಲ್’ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ...