‘ಎಂಥಾ ಗಂಡ ಸಿಕ್ಯಾನವ್ವ ನಿಂಗೆ?’ ರಾಧಿಕಾ ಪಂಡಿತ್ ಗೆ ಅಭಿಮಾನಿಗಳು ಹೀಗೇಕೆ ಹೇಳಿದ್ರು?!

ಬೆಂಗಳೂರು, ಸೋಮವಾರ, 11 ಫೆಬ್ರವರಿ 2019 (10:09 IST)

ಬೆಂಗಳೂರು: ಮಗುವಾದ ಮೇಲೆ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದಾರೆ.


 
ಈ ನಡುವೆ ರಾಧಿಕಾ ಪಂಡಿತ್ ತಾವು ವಿಡಿಯೋ ಸಂದೇಶವನ್ನು ಮಾಡಲು ರೆಡಿಯಾಗುತ್ತಿರುವ ವಿಡಿಯೋ ಒಂದನ್ನು ಪ್ರಕಟಿಸಿ ‘ನಾನು ಕೆಲವು ದಿನಗಳಿಂದ ಪ್ರಕಟಿಸುತ್ತಿದ್ದ ವಿಡಿಯೋಗಳಿಗೆ ಅದನ್ನು ಮಾಡಿದವರ ಕ್ರೆಡಿಟ್ ಕೊಟ್ಟಿರಲಿಲ್ಲ. ಈ ವಿಡಿಯೋ ನೋಡಿ ನನ್ನ ವಿಡಿಯೋ ಮಾಡುವವರು ಯಾರು ಎಂದು ಗೊತ್ತಾಗುತ್ತದೆ. ಇದನ್ನು ನೋಡಿದ ಮೇಲೆ ಯಾರು ವಿಡಿಯೋ ಮಾಡುವವರು ಎಂದು ಹೇಳಬೇಕಿಲ್ಲ ಅಲ್ವಾ?’ ಎಂದು ತಮಾಷೆಯಾಗಿ ಬರೆದುಕೊಂಡು ವಿಡಿಯೋ ಹಾಕಿದ್ದಾರೆ.
 
ಆ ವಿಡಿಯೋದಲ್ಲಿ ರಾಧಿಕಾಗೆ ತಯಾರಾಗಲು ಯಶ್ ತೆರೆ ಹಿಂದೆ ನಿಂತು ಸಲಹೆ ಸೂಚನೆ ನೀಡುವ ಮಾತುಕತೆ ಕೇಳಿಸುತ್ತಿದೆ. ಕೂದಲು ಸರಿ ಮಾಡ್ಕೋ ಎಂದು ಹೇಳುವ ಯಶ್ ರಾಧಿಕಾ ವಿಡಿಯೋ ಮಾಡಲು ರೆಡಿಯಾಗುತ್ತಿರುವ ಧ್ವನಿ ಕೇಳಿಸುತ್ತದೆ.
 
ಇದನ್ನು ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ‘ರಾಧಿಕಾ ಅತ್ತಿಗೆ ನಿಮಗೆ ಎಷ್ಟು ಕೇರ್ ಮಾಡುವ, ಪ್ರೀತಿಸುವ ಗಂಡ ಸಿಕ್ಕಿದ್ದಾನೆ’ ಎಂದು ಹೊಗಳುತ್ತಿದ್ದಾರೆ. ಇನ್ನು, ಕೆಲವರು ಗಂಡ ವಿಡಿಯೋ ಮಾಡುತ್ತಾನೆಂದರೆ ಎಷ್ಟು ಪ್ರೀತಿಯಿಂದ ರೆಡಿಯಾಗುತ್ತಿದ್ದಾರೆ ಎಂದು ರಾಧಿಕಾ ಕಾಲೆಳೆದಿದ್ದಾರೆ. ಮತ್ತೆ ಕೆಲವರು ನಮ್ಮ ಯಶ್ ಬಾಸ್ ಧ್ವನಿ ಕೇಳಿದ್ರೇ ಗೊತ್ತಾಗುತ್ತದೆ. ಇನ್ನು ಅವರ ಹೆಸರು ಹೇಳುವ ಅಗತ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಶ್ಮಿಕಾ ಮಂದಣ್ಣಗೆ ಡಿ ಬಾಸ್ ದರ್ಶನ್ ಮೆಸೇಜ್ ಮಾಡಿ ಧನ್ಯವಾದ ಸಲ್ಲಿಸಿದ್ದೇಕೆ ಗೊತ್ತಾ?

ಬೆಂಗಳೂರು: ಯಜಮಾನ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ...

news

ಸ್ಮಶಾನದಲ್ಲಿ ಕಾಲು ಜಾರಿ ಬಿದ್ದ ನಟಿ ರಾಧಿಕಾ

ಬೆಂಗಳೂರು: ಸ್ಮಶಾನದಲ್ಲಿ ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದ ನಟಿ ರಾಧಿಕಾ ಬೆನ್ನು ಮೂಳೆಗೆ ಪೆಟ್ಟು ...

news

ಕಿಚ್ಚ ಸುದೀಪ್ ಮೆಚ್ಚಿಕೊಂಡ ರಾಧಿಕಾ ಪಂಡಿತ್ ಪುರಾಣ!

ಬೆಂಗಳೂರು: ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಅಭಿನಯಿಸಿದ್ದ ಮೊದಲ ಸಿನಿಮಾ ಆದಿಲಕ್ಷ್ಮಿ ಪುರಾಣದ ಟ್ರೈಲರ್ ...

news

ಸಂಜಯ್ ದತ್ ಸಂಪರ್ಕಿಸಿದ್ದು ನಿಜ ಎಂದು ಒಪ್ಪಿಕೊಂಡ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲು ಬಾಲಿವುಡ್ ತಾರೆ ...