Widgets Magazine

ಈ ಕಾರಣಕ್ಕಾಗಿ ಇನ್ ಸ್ಟಾಗ್ರಾಂನಲ್ಲಿ ಅರೆನಗ್ನ ಪೋಟೊ ಹಾಕಿದ ಸಲೋನಿ ಚೋಪ್ರಾ

ಹೈದರಾಬಾದ್| pavithra| Last Modified ಮಂಗಳವಾರ, 11 ಸೆಪ್ಟಂಬರ್ 2018 (08:54 IST)
ಹೈದರಾಬಾದ್ : ನಟಿ ಸಲೋನಿ ಚೋಪ್ರಾ
ತಾನು ಗರ್ಭಿಣಿ ಅಲ್ಲ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಟಾಪ್‍ಲೆಸ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.ಸಲೋನಿ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋಗಳನ್ನು ಹಾಕುವ ಮೂಲಕ ಸುದ್ದಿಯಾಗುತ್ತಿದ್ದು, ಇದೀಗ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅರೆನಗ್ನ ಫೋಟೋವನ್ನು ಹಾಕಿ “ನಾನು ಗರ್ಭಿಣಿ ಅಲ್ಲ. ನಾನು ಗರ್ಭಿಣಿ ಎಂಬ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಇದು ನನ್ನ ವೈಯಕ್ತಿಕ ವಿಚಾರವಾಗಿದೆ. ಎಲ್ಲಾ ಹುಡುಗಿಯರು ಒಂದೇ ರೀತಿ ಇರುವುದಿಲ್ಲ.


ಕೆಲವರಿಗೆ ಫ್ಲಾಟ್ ಹೊಟ್ಟೆ ಇರುತ್ತದೆ. ಇನ್ನು ಕೆಲವರಿಗೆ ದಪ್ಪ ಹೊಟ್ಟೆ ಇರುತ್ತದೆ. ಅದೇ ರೀತಿ ಎಲ್ಲ ಹುಡುಗರಿಗೂ ಸಿಕ್ಸ್ ಪ್ಯಾಕ್ ಇರುವುದಿಲ್ಲ. ಎಲ್ಲ ಹುಡುಗಿಯರ ಕೂದಲು ಒಂದೇ ರೀತಿ ಇರುವುದಿಲ್ಲ. ಅದೇ ರೀತಿ ಎಲ್ಲ ಹುಡುಗಿಯರು ಆರೋಗ್ಯವಾಗಿ ಇರುವುದಿಲ್ಲ. ಆದರೆ ಎಲ್ಲ ಹುಡುಗಿಯರು ಸುಂದರವಾಗಿರುತ್ತಾರೆ” ಎಂದು ಬರೆದುಕೊಂಡಿರುವುದು
ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಸಲೋನಿ ಚೋಪ್ರಾ ಅವರು ಗರ್ಭಿಣಿ ಎಂದು ಎಲ್ಲೂ ಚರ್ಚೆಯಾಗಿಲ್ಲ. ಆದರೆ ವೈಯಕ್ತಿಕವಾಗಿ ಸುದ್ದಿಯಾಗಿರುವುದಕ್ಕೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :