ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ ಕುಮಾರಸ್ವಾಮಿ ಜೀವನ ಚರಿತ್ರೆ ಆಧರಿಸಿದ ಸಿನಿಮಾ

ಭಾನುವಾರ, 30 ಏಪ್ರಿಲ್ 2017 (18:04 IST)

Widgets Magazine

ಮಾಜಿ ಸಿಎಂ ಕುಮಾರಸ್ವಾಮಿ ಕಥಾಧರಿತ ಸಿನಿಮಾ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ರಾಜಕೀಯ ವ್ಯಕ್ತಿಗಳ ಕಥಾಧರಿತ ಚಿತ್ರಗಳ ಉದಾಹರಣೆಗಳಿಲ್ಲ. ಿದೇ ಮೊದಲ ಬಾರಿಗೆ ಇಂಥದ್ದೊಂದಿ ಸಾಹಸಕ್ಕೆ ಕಲಾ ಸಾಮ್ರಾಟ್ ಎಸ್. ನಾರಾಯಣ್ ಮುಂದಾಗಿದ್ದಾರೆ.


ಪ್ರಮುಖವಾಗಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಚಿಸಿದ್ದ 20 ತಿಂಗಳ ಸರ್ಕಾರದ ಆಡಳಿತದ ಕುರಿತಾಗಿ ಕಥಾಹಂದರವಿರಲಿದೆ ಎಂದು ಹೇಳಲಾಗುತ್ತಿದೆ. ಜನಸ್ಪಂದನೆ ಸೇರಿದಂತೆ ಕುಮಾರಸ್ವಾಮಿ ಆಡಳಿತವನ್ನ ಸೂಕ್ಷ್ಮವಾಗಿ ಗಮನಿಸಿದ್ದ ನಾರಾಯಣ್ ಅವರೇ ಚಿತ್ರ ನಿರ್ದೇಶಿಸುತ್ತಿದ್ದಾರೆ. ಕೆ. ಪ್ರಭು ಚಿತ್ರ ನಿರ್ಮಾಣ ಮಾಡುತ್ತಿದ್ದಾರಂತೆ. ಮೇ.8ಕ್ಕೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮುಹೂರ್ತ ನೆರವೇರಲಿದೆ ಎನ್ನಲಾಗಿದೆ.
 
ಮೊದ ಮೊದಲು ತಮ್ಮ ಕಥಾಧರಿತ ಚಿತ್ರ ಮಾಡಲು ನಿರಾಕರಿಸಿದ್ದ ಕುಮಾರಸ್ವಾಮಿ, ಈ ಸಿನಿಮಾ ಇತರರಿಗೆ ಮಾದರಿಯಾಗುತ್ತೆ ಎಂದು ಹೇಳಿದಾಗ ಒಪ್ಪಿಕೊಂಡರಂತೆ. ಯಾವುದೇ ಕಾರಣಕ್ಕೂ ವೈಭವೀಕರಿಸದಂತೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕುಮಾರಸ್ವಾಮಿ ಪಾತ್ರದಲ್ಲಿ ಹಿರಿಯ ನಟ ಅರ್ಜುನ್ ಸರ್ಜಾ ನಟಿಸುತ್ತಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟಿ ಅಮೂಲ್ಯ ಬ್ಯಾಚುಲರ್ ಪಾರ್ಟಿಯ ಬಿಂದಾಸ್ ಫೋಟೋ

ಬೆಂಗಳೂರು: ಮೇ ತಿಂಗಳು ವಿವಾಹವಾಗಲಿರುವ ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯ ತಮ್ಮ ಸ್ನೇಹಿತರ ಜತೆಗೆ ...

news

ಬಾಹುಬಲಿ ನಟ ರಾಣಾ ಹೇಳಿದ ಸತ್ಯ ತಿಳಿದರೆ ಶಾಕ್ ಆಗುತ್ತೀರಿ!

ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ನಾಯಕ ಪ್ರಭಾಸ್ ನಷ್ಟೇ ಪ್ರಮುಖ ಪಾತ್ರ ವಹಿಸಿದ ನಟ ರಾಣಾ ದಗ್ಗುಬತಿ. ...

news

ರೌಡಿಗಳನ್ನ ಬೇಟೆಯಾಡಿದ ರೋಚಕ ಸಂಗತಿ ಬಿಚ್ಚಿಟ್ಟ ರವಿ ಡಿ ಚೆನ್ನಣ್ಣನವರ್

ಕನ್ನಡದ ಮಟ್ಟಿಗೆ ವೀಕೆಂಡ್ ವಿತ್ ರಮೇಶ್ ಅತ್ಯಂತ ಜನಪ್ರಿಯ ಕಾರ್ಯಕ್ರಮ ಸಿನಿಮಾ ಸಾಧಕರೇ ಹೆಚ್ಚಾಗಿ ...

news

ಬಾಹುಬಲಿ 2 ಬಗ್ಗೆ ನವರಸನಾಯಕ ಜಗ್ಗೇಶ್ ಏನಂತಾರೆ?

ಬೆಂಗಳೂರು: ನವರಸನಾಯಕ ಜಗ್ಗೇಶ್ ಸದಾ ಕನ್ನಡಪರ ಮಾತನಾಡುವವರು. ಡಬ್ಬಿಂಗ್ ಚಿತ್ರ ಕನ್ನಡಕ್ಕೆ ಬರುತ್ತದೆಂದಾಗ ...

Widgets Magazine