ಒಬ್ಬರು ಮಾಡಿದ ತಪ್ಪಿನಿಂದ ಮನೆಯ ಎಲ್ಲರಿಗೂ ಶಿಕ್ಷೆ…!

ಬೆಂಗಳೂರು, ಬುಧವಾರ, 1 ನವೆಂಬರ್ 2017 (18:53 IST)

ಬೆಂಗಳೂರು: ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು, ಇದರ ನಡುವೆಯೂ ಕೆಲವರ ಮುನಿಸು ಇನ್ನೂ ಕಡಿಮೆಯಾಗಿಲ್ಲ.


ಆದರೆ ನಿನ್ನೆ ಒಬ್ಬರು ಮಾಡಿದ ತಪ್ಪಿನಿಂದಾಗಿ ಇಡೀ ಮನೆಯ ಸ್ಪರ್ಧಿಗಳು ಉಪವಾಸದಿಂದ ಇರಬೇಕಾಯಿತು. ತಿಂಡಿಯಾದ ಬಳಿಕ ಬಂದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸ್ ಲೆಮನ್ ಟೀ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ಗ್ಯಾಸ್ ಆಫ್ ಮಾಡದೆ ಹೋಗಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಮನೆಗೆ ಗ್ಯಾಸ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಮಧ್ಯಾಹ್ನ ಅಡುಗೆ ಮಾಡಲು ಬಂದವರಿಗೆ ಗ್ಯಾಸ್ ಇಲ್ಲದೆ ಪರದಾಡಿದರು. ಗ್ಯಾಸ್ ಸ್ಟೌವ್ ಸಮಸ್ಯೆ ಇರಬಹುದು ಎಂದು ಸಿಹಿಕಹಿ ಚಂದ್ರು ನೋಡಿದರು. ಆದರೆ ಏನೂ ಸಮಸ್ಯೆ ಇರಲಿಲ್ಲ. ಕಡೆಗೆ ಇದು ನಮ್ಮದೇ ತಪ್ಪಿನಿಂದ ಆಗಿರುವ ಸಮಸ್ಯೆ ಎಂದು ಆಶಿತಾ ಹೇಳಿದರು. ಜಯಶ್ರೀನಿವಾಸ್ ಈ ಮೊದಲು ಸ್ಟೌವ್ ಬಳಿಯಿದ್ದರು. ಹೀಗಾಗಿ ಇದು ಅವರ ತಪ್ಪಿನಿಂದಾದ ಶಿಕ್ಷೆ ಎಂದು ಅನುಪಮಾ ಹೇಳಿದರು.

ಕೊನೆಗೆ ಜಯಶ್ರೀನಿವಾಸ್ ಬಿಗ್ ಬಾಸ್ ಗೆ ಕ್ಷಮೆ ಕೋರಿದರು. ಇದರ ನಡುವೆ ಅನುಪಮಾ, ಚಂದ್ರು ಸಹ ಕ್ಷಮೆಕೋರಿದರೂ ಸಹ ಬಿಗ್ ಬಾಸ್ ಮನ್ನಿಸಲಿಲ್ಲ. ಇದರಿಂದ ಕೋಪಗೊಂಡ ಆಶಿತಾ, ಜೆಕೆ, ಕೃಷಿ, ಜಗನ್ ಇದೆಲ್ಲ ಜಯ ಶ್ರೀನಿವಾಸ್ ಮಾಡಿದ ತಪ್ಪು. ಅಡುಗೆ ಮಾಡಲು ಬರದಿದ್ದರೆ ಏಕೆ ಬರಬೇಕ್ಕಿತ್ತು ಎಂದು ಕೆಂಡಾಮಂಡಲವಾದರು. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಶೀತಲ ಸಮರ ಶುರುವಾಗಿದ್ದು, ಇದರ ನಡುವೆಯೇ ಎಲ್ಲರು ಉಪವಾಸದಿಂದ ದಿನಕಳೆದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನ್ಯೂಯಾರ್ಕ್ ಉಗ್ರರ ದಾಳಿಯಲ್ಲಿ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಎಸ್ಕೇಪ್

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ನಡೆದ ಉಗ್ರನ ದಾಳಿ ನನ್ನ ನಿವಾಸದಿಂದ ಕೇವಲ ಐದನೇ ಬ್ಲಾಕ್‌ನಲ್ಲಿ ...

news

ಆಟದ ವೇಳೆ ಕೆಳಗೆ ಬಿದ್ದ ಜೆಕೆ: ಇಷ್ಟಕ್ಕೆ ಕಣ್ಣೀರಿಟ್ಟರಾ ಆಶಿತಾ..?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಚಟುವಟಿಕೆಯಿಂದಲೇ ಪಾಲ್ಗೊಂಡ್ರು. 'ಆಡು ಆಟ ಆಡು' ...

news

ಎಲ್ಲಾ ಲಕ್ಷಣ ಇರೋದಕ್ಕೆ ನಾನು ನಿರ್ದೇಶಕನಾಗಿದ್ದು: ದಯಾಳ್

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿಗಳಿಗಾಗಿ `ನೋಡಿ ಸ್ವಾಮಿ ನಾವು ಇರೋದೆ ಹೀಗೆ’ ಎಂಬ ವಿಶೇಷ ಟಾಸ್ಕ್ ...

news

ನವರಸನಾಯಕ ಜಗ್ಗೇಶ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ?

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿರುವ ಸಿನಿಮಾ ಲೋಕದ ಮಂದಿಯೂ ...

Widgets Magazine
Widgets Magazine