ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ

ಬೆಂಗಳೂರು, ಸೋಮವಾರ, 25 ಸೆಪ್ಟಂಬರ್ 2017 (23:11 IST)

ಬೆಂಗಳೂರು: ಸತತ ಸಿನಿಮಾಗಳಿಂದ ಬ್ಯುಸಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಜಾಲಿ ಮೂಡಲ್ಲಿದ್ದಾರೆ. ತಮ್ಮ ಪತ್ನಿ ಶಿಲ್ಪಾ ಗಣೇಶ್ ಮತ್ತು ಮಕ್ಕಳ ಜತೆ ಶ್ರೀಲಂಕಾದಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.


ಸದ್ಯ ಗಣೇಶ್ ಅಭಿನಯದ ಮುಗುಳುನಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಮಕ್ ಮತ್ತು ಆರೆಂಜ್ ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದೇ ಖುಷಿಯಲ್ಲಿ ಕೊಲಂಬೊ ಸುತ್ತುತ್ತಿದ್ದಾರೆ ಗಣಿ ಅಂಡ್ ಫ್ಯಾಮಿಲಿ.

ಸದ್ಯ ಕೊಲಂಬೊದಲ್ಲಿರುವ ಗಣೇಶ್ ಮತ್ತು ಪುತ್ರ ಹೆಬ್ಬಾವಿನೊಂದಿಗೆ ಚಿನ್ನಾಟವಾಡುತ್ತಿರುವ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಹಾನ್ ಸ್ವಲ್ಪವೂ ಭಯವಿಲ್ಲದೆ ಹಾವಿನ ಜತೆ ಆಟವಾಡ್ತಿದ್ದಾನೆ. ಈ ದೃಶ್ಯವನ್ನ ಗಣೇಶ್ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಕಡೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಗಣೇಶ್, ರೆಸಾರ್ಟ್ ವೊಂದರಲ್ಲಿ ಬಣ್ಣ ಬಣ್ಣದ ಮೀನುಗಳಿಗೆ ಮಗನ ಜತೆ ಆಹಾರ ನೀಡ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚಿತ್ರರಂಗಕ್ಕೆ ಚಿರಂಜೀವಿ ಕುಟುಂಬದ ಮತ್ತೊಬ್ಬ ನಟ ಎಂಟ್ರಿ

ಹೈದರಾಬಾದ್: ಸಿನಿಮಾ ರಂಗಕ್ಕೆ ಯಾರೇ ಎಂಟ್ರಿಯಾದರು ಅವರ ಫ್ಯಾಮಿಲಿ ಸಹ ಅದೇ ರಂಗದಲ್ಲಿ ಮುಂದುವರೆಯುತ್ತೆ. ...

news

ರಮೇಶ್ ಅರವಿಂದ್ `ಪ್ಯಾರಿಸ್ ಪ್ಯಾರಿಸ್’ಗೆ `ಕ್ವೀನ್’ ಕಾಜಲ್ ಅಗರ್ವಾಲ್

ಬೆಂಗಳೂರು: ಬಾಲಿವುಡ್ `ಕ್ವೀನ್’ ಸಿನಿಮಾ ಕನ್ನಡ ಸೇರಿದಂತೆ ತಮಿಳು ಭಾಷೆಗಳಿಗೆ ರಿಮೇಕ್ ಆಗ್ತಿರೋದು ಗೊತ್ತೇ ...

news

ಜಗನ್ನಾಥ್ ಪೂರಿ ಗರಡಿಯಲ್ಲಿ ಮಳೆ ಹುಡುಗಿ ನೇಹಾಶೆಟ್ಟಿ

ಬೆಂಗಳೂರು: ಮುಂಗಾರು ಮಳೆ 2 ಸಕ್ಸಸ್ ನಂತರ ಮಳೆ ಹುಡುಗಿ ನೇಹಾ ಶೆಟ್ಟಿ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ...

news

ಸಿನಿಮಾವಾಗಲಿದೆ ಕಪಿಲ್ ದೇವ್ ರ 1983 ರ ಸಾಹಸ

ಮುಂಬೈ: ಧೋನಿ, ಸಚಿನ್ ನಂತರ ಭಾರತದ ಇನ್ನೊಬ್ಬ ಮಹಾನ್ ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನ ಚರಿತ್ರೆ ...

Widgets Magazine
Widgets Magazine