ಇದರಲ್ಲಿ ಇನ್ನಷ್ಟು ಓದಿ :
ಬಾಹುಬಲಿ-2 ಚಿತ್ರ ವೀಕ್ಷಿಸದ ಉದ್ಯೋಗಿಯನ್ನು ವಜಾಗೊಳಿಸಿದ ಕಂಪೆನಿ

ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ಬಿಡುಗಡೆಯಾಗಿ ಆರು ದಿನಗಳು ಕಳೆದರೂ ಚಿತ್ರವನ್ನು ವೀಕ್ಷಿಸದಿದ್ದರಿಂದ 29 ವರ್ಷ ವಯಸ್ಸಿನ ಉದ್ಯೋಗಿ ಮಹೇಶ್ ಬಾಬುನನ್ನು ಕಂಪೆನಿ ವಜಾಗೊಳಿಸಿದ ವಿಚಿತ್ರ ಘಟನೆ ವರದಿಯಾಗಿದೆ.
ಉದ್ಯೋಗಿ ಮಹೇಶ್ ಬಾಬುಗೆ ಬಾಹುಬಲಿ-2 ಚಿತ್ರ ಯಾಕೆ ವೀಕ್ಷಿಸಲಿಲ್ಲ ಎನ್ನುವುದಕ್ಕೆ ಕಾರಣ ನೀಡಿ ಎಂದು ಕಂಪೆನಿ ನೋಟಿಸ್ ಜಾರಿ ಮಾಡಿತ್ತು. ನಂತರ ಉದ್ಯೋಗಿಯಿಂದ ತೃಪ್ತಿಕರ ವಿವರಣೆ ಬಾರದಿರುವುದರಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಬಾಹುಬಲಿ-2 ಚಿತ್ರ ವೀಕ್ಷಣೆಗಾಗಿ ಕಂಪೆನಿಯಿಂದ ಒಂದು ದಿನದ ರಜೆ ನೀಡಲಾಗಿತ್ತು. ಆತನ ಡೆಸ್ಕ್ ಪಕ್ಕದಲ್ಲಿ ಬಾಹುಬಲಿ ಚಿತ್ರದ ಪೋಸ್ಟರ್ಗಳನ್ನು ಹಾಕಲಾಗಿದ್ದರೂ ಮಹೇಶ್ ಬಾಬು ಚಿತ್ರ ವೀಕ್ಷಿಸಲು ತೆರಳಲಿಲ್ಲ ಎಂದು ಮಹೇಶ್ ಬಾಬು ಸಹದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಬಾಹುಬಲಿ-2 ಚಿತ್ರ ವೀಕ್ಷಿಸುವಂತೆ ಹಲವಾರು ಬಾರಿ ಒತ್ತಡ ಹೇರಿದಾಗ, ಚಿತ್ರ ವೀಕ್ಷಿಸುವುದರಿಂದ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆಯೇ ಎಂದು ಮಹೇಶ್ ಬಾಬು ಕೋಪದಿಂದ ಪ್ರಶ್ನಿಸಿದ್ದರಿಂದ, ಆತನನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
|
|
ಸಂಬಂಧಿಸಿದ ಸುದ್ದಿ
- ರಾಜಮೌಳಿಗೆ ರಜಿನಿಕಾಂತ್, ಸುದೀಪ್, ಮಹೇಶ್ ಬಾಬು ಸೇರಿದಂತೆ ಸ್ಟಾರ್`ಗಳಿಂದ ಪ್ರಶಂಸೆಗಳ ಸುರಿಮಳೆ
- ರಾಜಮೌಳಿ ವಿರುದ್ಧ ಹೈದ್ರಾಬಾದ್`ನಲ್ಲಿ ದೂರು ದಾಖಲು
- 200 ರೂ. ಫಿಕ್ಸ್ ಮಾಡಿ 1050 ರೂ. ಕೊಟ್ಟು ಟಿಕೆಟ್ ಖರೀದಿಸಿದ ಸಿಎಂ..?
- ಬಾಹುಬಲಿ-2 ವೀಕೆಂಡ್ ಗಳಿಕೆ ಎಷ್ಟು ಗೊತ್ತಾ..? ಊಹಿಸಲೂ ಅಸಾಧ್ಯ
- ಬಾಹುಬಲಿ-2 ಬಗ್ಗೆ ಬಗ್ಗೆ ಹೇಳುವಾಗ ವರ್ಮಾ ಮಾನಸಿಕ ತಜ್ಞರ ವಿಷಯ ಪ್ರಸ್ತಾಪಿಸಿದ್ದೇಕೆ..?