ಇಳಿಯರಾಜರಿಂದ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಲೀಗಲ್ ನೋಟಿಸ್ ಜಾರಿ

ಚೆನ್ನೈ, ಭಾನುವಾರ, 19 ಮಾರ್ಚ್ 2017 (18:07 IST)

Widgets Magazine

ಚಿತ್ರರಂಗದ ಇಬ್ಬರ ದಿಗ್ಗಜರ ನಡುವೆ ನಡೆಯುತ್ತಿರುವ ಜಟಾಪಟಿ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ತಾವು ಸಂಯೋಜಿಸಿರುವ ಹಾಡುಗಳನ್ನು ಹಾಡಬಾರದು ಎಂದು ಖ್ಯಾತ ಸಂಗೀತ ನಿರ್ದೆಶಕ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. 
ಅಮೆರಿಕ ಪ್ರವಾಸದಲ್ಲಿರುವ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿ  ತಮ್ಮ ಮತ್ತು ಇಳಿಯರಾಜ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ಬಹಿರಂಗಗೊಳಿಸಿದ್ದಾರೆ.
 
ಇಳಿಯರಾಜ, ಎಸ್‌.ಪಿ.ಬಾಲಸುಬ್ರಮಣ್ಯಂ ಹಾಗೂ ಶ್ರೀಮತಿ ಚೈತ್ರ ಮತ್ತು ಚರಣ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿ ತಮ್ಮ ಅನುಮತಿಯಿಲ್ಲದೇ ತಾವು ಸಂಯೋಜಿಸಿರುವ ಹಾಡುಗಳನ್ನು ಹಾಡುವಂತಿಲ್ಲ. ಒಂದು ವೇಳೆ ಹಾಡಿದಲ್ಲಿ ದಂಡ ತೆರಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
 
ಹಿನ್ನೆಲೆ ಗಾಯನದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಮಾಡಿರುವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ ಅವರ ಮಧ್ಯೆ ಎದುರಾಗಿರುವ ವಿರಸ ಅಭಿಮಾನಿಗಳಿಗೆ ಆಘಾತ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನ

ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನರಾಗಿದ್ದಾರೆ. 82 ವರ್ಷದ ಚಂದ್ರಹಾಸನ್ ...

news

ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅಂತ್ಯ ಸಂಸ್ಕಾರದಲ್ಲಿ ಗಣ್ಯರ ದಂಡು

ಮುಂಬೈ: ದೀರ್ಘಕಾಲದ ಅಸೌಖ್ಯದಿಂದಾಗಿ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಲಿವುಡ್ ತಾರೆ ...

news

ಐಶ್ವರ್ಯಾ ರೈಗೆ ಪಿತೃವಿಯೋಗ!

ಮುಂಬೈ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತಂದೆ ಕೃಷ್ಣರಾಜ್ ರೈ ಇಂದು ಮುಂಬೈಯ ಖಾಸಗಿ ...

news

ಏಪ್ರಿಲ್ 28ರ ಬಳಿಕ ಪ್ರಭಾಸ್ ಮದುವೆ ಸಿದ್ಧತೆ

ಟಾಲಿವುಡ್`ನ ಖ್ಯಾತ ನಟ, ಬಾಹುಬಲಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಟ ಪ್ರಭಾಸ್ ...

Widgets Magazine