ಅಕ್ರಮ ಪಿಸ್ತೂಲ್ ಮಾರಾಟ ದಂಧೆ; ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರು ಅರೆಸ್ಟ್

ಬೆಂಗಳೂರು, ಸೋಮವಾರ, 5 ನವೆಂಬರ್ 2018 (06:47 IST)

ಬೆಂಗಳೂರು : ಅಕ್ರಮ ಪಿಸ್ತೂಲ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಸ್ಯಾಂಡಲ್ ವುಡ್ ನಟ ಸೇರಿದಂತೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ನಟ (25), ಮೊಹಮ್ಮದ್ ನಿಜಾಮ್(25), ಬಿ.ಜಿ.ಸತೀಶ್‍ಕುಮಾರ್(44),  ಹಾಗೂ ಸಯ್ಯದ್ ಸಮೀರ್ ಅಹಮ್ಮದ್ ಬಂಧಿತ ಆರೋಪಿಗಳು. ಮೊಹಮ್ಮದ್ ನಿಜಾಮ್ ಮತ್ತು ಜಗದೀಶ್ ಹೊಸಮಠ ಪಿಸ್ತೂಲ್ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಅವರ ಬಳಿ ಒಂದು ಪಿಸ್ತೂಲ್ ಮತ್ತು 10 ಬುಲೆಟ್ ಗಳು ದೊರೆತ ಹಿನ್ನಲೆಯಲ್ಲಿ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


ನಂತರ ಬಂಧಿತ ಆರೋಪಿಗಳ ನೀಡಿದ ಮಾಹಿತಿಯ ಆಧಾರದ ಮೇಲೆ ಸತೀಶ್ ಮತ್ತು ಸೈಯದ್ ರನ್ನು ಅರೆಸ್ಟ್ ಮಾಡಿ ಮತ್ತೊಂದು ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


ಜಾಗ್ವರ್ ಜಗ್ಗ ಎಂದೇ ಕರೆಯುವ ಹುಬ್ಬಳ್ಳಿಯ ಗಣೇಶ್‍ಪೇಟೆಯ ಶೆಟ್ಟರ ಓಣಿಯಲ್ಲಿ ವಾಸವಾಗಿದ್ದ ನಟ ಜಗದೀಶ್ ಹೊಸಮಠ "ಸರ್ಕಾರ್" ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ನ ನಿರ್ದೇಶಕನ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರು : ಸ್ಯಾಂಡಲ್ ವುಡ್ ನ ನಿರ್ದೇಶಕರೊಬ್ಬರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ...

news

ಮತ್ತೊಬ್ಬ ನಟಿಯ ಜೊತೆ ಲವ್ವಿ-ಡುವ್ವಿ ಶುರುಮಾಡಿದ್ರಾ ರಕ್ಷಿತ್ ಶೆಟ್ಟಿ

ಬೆಂಗಳೂರು : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಜೊತೆ ತಮ್ಮ ...

news

ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಸನ್ನಿ ಲಿಯೋನ್ ಮೇಲೆ ಬಾಟಲಿ ಎಸೆದ ಕಿಡಿಗೇಡಿ

ಬೆಂಗಳೂರು : ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕಾರ್ಯಕ್ರಮವೊಂದರ ಪ್ರಯುಕ್ತ ಬೇಂಗಳೂರಿಗೆ ಆಗಮಿಸಿದಾಗ ಗಲಾಟೆ ...

news

ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಒಳ ಉಡುಪು ಧರಿಸಿದ ಪೋಟೋ ಲೀಕ್

ಚೆನ್ನೈ : ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ನಟಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಇದೀಗ ಸಾಮಾಜಿಕ ...

Widgets Magazine
Widgets Magazine