ಪ್ರಕಾಶ್ ರೈಗೆ "ನಿನ್ನ ಜಾತಿ ಯಾವುದೆಂದು" ಅಪಮಾನ

Chennai, ಬುಧವಾರ, 8 ಮಾರ್ಚ್ 2017 (12:14 IST)

Widgets Magazine

ನಟ ಪ್ರಕಾಶ್ ರೈ ಅಪ್ಪಟ ಕನ್ನಡಿಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅವರು ಎಲ್ಲಾ ಜಾತಿ ಭಾಷೆಗಳನ್ನು ಮೀರಿ ಬೆಳೆದವರು. ತೆಲುಗು, ತಮಿಳಿನಲ್ಲಂತೂ ಅವರಿಗೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಎಲ್ಲಾ ಭಾಷೆಗಳಲ್ಲೂ ಅವರು ನಿರರ್ಗಳವಾಗಿ ಮಾತನಾಡುತ್ತಾರೆ ಕೂಡ.
 
ಹಿಂದಿಯಲ್ಲೂ ಅಭಿನಯಿಸಿದ್ದಾರೆ ಪ್ರಕಾಶ್ ರೈ. ಪ್ರಸ್ತುತ ತಮಿಳುನಾಡಿನಲ್ಲಿ ನಡೆಯಲಿರುವ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಉಪಾಧ್ಯಕ್ಷ ಪದವಿಗೆ ಪ್ರಕಾಶ್ ರೈ ಸ್ಪರ್ಧಿಸುತ್ತಿದ್ದಾರೆ. ಇದುವರೆಗೂ ಪ್ರಕಾಶ್ ರೈ 20 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆದರೆ ಚುನಾವಣೆ ಸಮಯದಲ್ಲಿ ತೆಲುಗು ಮೂಲದ ನಟ ವಿಶಾಲ್‍ಗೆ ವಿರೋಧ ವ್ಯಕ್ತವಾಗಿತ್ತು.
 
ಆ ಘಟನೆ ಇನ್ನೂ ಹಸಿಯಾಗಿರುವಾಗಲೇ ಈಗ ಪ್ರಕಾಶ್ ರೈರನ್ನು ಕನ್ನಡಿಗ ಎಂದು ವಿರೋಧಿಸುತ್ತಿದ್ದಾರೆ. ತನ್ನ ಜಾತಿಯ ಬಗ್ಗೆ, ಭಾಷೆಯ ಬಗ್ಗೆ ಕೇಳುತ್ತಿದ್ದಾರಂತೆ. ಇದರಿಂದ ಪ್ರಕಾಶ್ ರೈ ಮನಸ್ಸಿಗೆ ತುಂಬಾ ಬೇಸರವಾಗಿದೆಯಂತೆ. ಏನೇ ಆಗಲಿ ಹಿಂದಡಿಯಂತೂ ಇಡಲ್ಲ. ಉಪಾಧ್ಯಕ್ಷರಾಗಿ ಆಯ್ಕೆಯಾಗಿ ನಿರ್ಮಾಪಕರ ಸಂಘದಲ್ಲಿನ ಭ್ರಷ್ಟಾಚಾರ, ನಿರ್ಲಕ್ಷ್ಯ ಧೋರಣೆಯನ್ನು ತೊಡೆದುಹಾಕುತ್ತೇನೆಂದು ಕಂಕಣಕಟ್ಟಿದ್ದಾರೆ ಪ್ರಕಾಶ್ ರೈ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅನುಷ್ಕಾ ಶೆಟ್ಟಿ ತೂಕ ಕಡಿಮೆ ಆಗದೆ ಇರಲು ಕಾರಣ ಗೊತ್ತೇ?

ಪಾತ್ರಕ್ಕಾಗಿ ಕೆಲವು ತಾರೆಗಳು ಯಾವುದೇ ಸಾಹಸಕ್ಕೂ ಕೈಹಾಕುತ್ತಾರೆ. ಆ ರೀತಿಯ ತಾರೆಯಲ್ಲಿ ನಮ್ಮ ಕನ್ನಡ ಮೂಲಕ ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ

ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ...

news

ಕಟ್ಟಪ್ಪ ಯಾಕೆ ಬಾಹುಬಲಿಯನ್ನು ಕೊಂದ? ಸ್ವತಃ ಕಟ್ಟಪ್ಪನೇ ಹೇಳಿದ ಉತ್ತರ ನೋಡಿ!

ಹೈದರಾಬಾದ್: ‘ಬಾಹುಬಲಿ’ ಭಾಗ 1 ಸಿನಿಮಾ ಮುಗಿದ ನಂತರ ಎಲ್ಲರ ಪ್ರಶ್ನೆ ಕಟ್ಟಪ್ಪ ಯಾಕೆ ಬಾಹುಬಲಿಯನ್ನು ...

news

ಮಜಾ ಟಾಕೀಸ್‍ನಲ್ಲಿ ಶೋಭಾ ಕರಂದ್ಲಾಜೆ ಕರಾಮತ್ತು

ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋ ಮಜಾ ಟಾಕೀಸ್‍ನಲ್ಲಿ ಸಾಕಷ್ಟು ಸಿನಿಮಾ ತಾರೆಯರು ಅತಿಥಿಗಳಾಗಿ ಆಗಮಿಸಿ, ...

Widgets Magazine