ಶೂಟಿಂಗ್ ವೇಳೆ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಮಾಡಿದ್ರಾ ನಟ ದರ್ಶನ್?

ಬೆಂಗಳೂರು, ಶುಕ್ರವಾರ, 31 ಆಗಸ್ಟ್ 2018 (07:08 IST)

ಬೆಂಗಳೂರು : ‘ಯಜಮಾನ’ ಸಿನಿಮಾದ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು ಈ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.


ದೊಡ್ಡ ಮೊತ್ತದ  ಬಂಡವಾಳ ಹಾಕಿ ನಿರ್ಮಿಸುತ್ತಿರುವ ನಟ ದರ್ಶನ್ ಅವರ ‘ಯಜಮಾನ’ ಸಿನಿಮಾದ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನೊಬ್ಬ ಶೂಟಿಂಗ್ ಸೆಟ್ ನ ಫೋಟೋ ತೆಗೆಯುತ್ತಿರುವಾಗ ನಟ ದರ್ಶನ್ ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದ್ದರಂತೆ. ಆದರೆ ಮಾತ್ರ ದರ್ಶನ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಇದಕ್ಕೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್, ‘ಸಾರ್ವಜನಿಕ ಸ್ಥಳದಲ್ಲಿ ಮಾಡುತ್ತಿದ್ದಾಗ ಫೋಟೋ ತೆಗೆಯಲು ಬೇಡಾ ಅಂತಾ ಹೇಳುವುದಕ್ಕೆ ಬರುವುದಿಲ್ಲ. ಆದರೆ ಖಾಸಗಿ ಜಾಗದಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಚಿತ್ರೀಕರಣ ಮಾಡುತ್ತಿದ್ದಾಗ ಒಬ್ಬ ಜೂನಿಯರ್ ಕಲಾವಿದ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಲೈಕ್, ಕಮೆಂಟ್ಸ್ ತಗೊಂಡರೆ ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡುತ್ತಾರಾ? ಇದರಿಂದ ನಿರ್ಮಾಪಕರ ಕಥೆ ಏನಾಗುತ್ತದೆ? ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದೆ. ತಪ್ಪು ಮಾಡಿದರೆ ಕೇಳುವುದೇ ತಪ್ಪಾ ಅಂತಾ ದರ್ಶನ್ ಪ್ರಶ್ನಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಿಸಿದ ‘ದಿ ವಿಲನ್’ ಚಿತ್ರ

ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ...

news

ಶಾರುಖ್ ಖಾನ್ ಆಫರ್ ಇದ್ದರೂ ಹಾಲಿವುಡ್ ನಲ್ಲಿ ನಟಿಸದಿರುವುದಕ್ಕೆ ಇದೇ ಮುಖ್ಯ ಕಾರಣವಂತೆ

ಮುಂಬೈ : ಹಾಲಿವುಡ್ ನ ಸಿನಿಮಾಗಳಲ್ಲಿ ನಟಿಸಲು ನಟ ನಟಿಯರು ತುದಿಗಾಲಿನಲ್ಲಿ ನಿಂತಿರುವಾಗ ಬಾಲಿವುಡ್ ನ ...

news

ಮತ್ತೆ ಬಾಲಿವುಡ್ ಕಡೆಗೆ ಮುಖಮಾಡಿದ ನಟಿ ಪ್ರಿಯಾಂಕ

ಮುಂಬೈ : ಇತ್ತೀಚೆಗಷ್ಟೇ ಹಾಲಿವುಡ್ ನಲ್ಲಿ ನಟಿಸುವ ಸಲುವಾಗಿ ನಟಿ ಪ್ರಿಯಾಂಕ ಚೋಪ್ರಾ ಸಲ್ಮಾನ್ ಖಾನ್ ...

news

ದರ್ಶನ್-ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ವಾಕ್ಸಮರ: ಕಾರಣವೇನು ಗೊತ್ತಾ?

ಬೆಂಗಳೂರು: ಒಂದು ಕಾಲದಲ್ಲಿ ಕುಚುಕು ಗೆಳೆಯರಾಗಿದ್ದು, ನಂತರ ದೂರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ...

Widgets Magazine