ನ.24 ರಂದು ಸಪ್ತಪದಿ ತುಳಿಯಲಿರುವ ಕಾಲಿವುಡ್ ಹಾಟ್ ನಟಿ ನಮಿತಾ

ಚೆನ್ನೈ, ಶುಕ್ರವಾರ, 10 ನವೆಂಬರ್ 2017 (17:04 IST)

ಮಾದಕ ದೇಹ ಸೌಂದರ್ಯದಿಂದ ಪಡ್ಡೆಹುಡುಗರನ್ನು ಕೆರಳಿಸಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಹಾಟ್ ತಾರೆ ನಮಿತಾ ನವೆಂಬರ್ 24 ರಂದು ಸಪ್ತಪದಿ ತುಳಿಯಲಿದ್ದಾರೆ.
  
ಹಾಟ್ ನಟಿ ನಮಿತ್ ತನ್ನ ಸಹಕಲಾವಿದ ವೀರಾ ಚೌಧರಿ ಎನ್ನುವವರೊಂದಿಗೆ ವಿವಾಹವಾಗಲಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ಹಾರರ್ ಕಥೆಯನ್ನು ಹೊಂದಿದ್ದ ತಮಿಳು ಮಿಯಾ ಚಿತ್ರದಲ್ಲಿ ವೀರಾ ಚೌಧರಿ, ನಟಿ ನಮಿತಾ ಅವರೊಂದಿಗೆ ನಟಿಸಿದ್ದರು ಎಂದು ಮೂಲಗಳು ತಿಳಿಸಿವೆ.
 
ವೀಡಿಯೋದಲ್ಲಿ, ನಮಿತಾ ನಾಯಿಯನ್ನು ಹಿಡಿದುಕೊಂಡು ತನ್ನ ಗೆಳೆಯ ವೀರೇಂದ್ರ ಚೌಧರಿಯ ಪಕ್ಕದಲ್ಲಿ ಬಹಳ ಸಂತೋಷದಿಂದ ನಿಂತಿರುವುದು, ಮದುವೆಯ ದಿನಾಂಕವನ್ನು ಘೋಷಿಸಲು ಉತ್ಸಕರಾಗಿರುವುದು ಕಂಡು ಬಂದಿದೆ. ದಂಪತಿಗಳನ್ನು ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ಕೋರಲಿದ್ದಾರೆ.
 
ನಮಿತಾ ಹಿರಿಯ ನಟ ಶರತ್ ಬಾಬು ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ವದಂತಿಗಳು ಹರಡಿದ್ದವು. ನಂತರ ಕೆಲವು ಶ್ರೀಮಂತ ಉದ್ಯಮಿಗಳ ಹೆಸರು ಕೂಡ ಹುಟ್ಟಿಕೊಂಡವು. ಎಲ್ಲಾ ವದಂತಿಗಳನ್ನು ರದ್ದುಪಡಿಸಿ ನಮಿತಾ ಅಂತಿಮವಾಗಿ ತನ್ನ ಜೀವನ ಸಾಥಿಯನ್ನು ಕಂಡುಕೊಂಡಿದ್ದಾರೆ.
 
ಮೋಹನ್ ಲಾಲ್ ಅವರೊಂದಿಗೆ ಮೂರು ವರ್ಷಗಳ ನಂತರ ನಮಿತಾ ಮಲಯಾಳಂ ಬ್ಲಾಕ್‌ಬಸ್ಟರ್ ಪುಲಿಮುರುಗನ್‌ನಿಂದ ಎರಡನೇ ಇನ್ನಿಂಗ್ಸ್ ಆರಂಭವಾಗಿತ್ತು. ನಮಿತಾ ದೈಹಿಕ ಸಮಸ್ಯೆಗಳಿಂದಾಗಿ ದೊಡ್ಡ ಪರದೆಯಿಂದ ದೂರವಿರುತ್ತಿದ್ದಾರೆ ಎನ್ನಲಾಗುತ್ತಿದೆ.
 
ನಮಿತಾ ತಮಿಳು ಚಿತ್ರ ಪೊಟ್ಟು ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಪ್ರೇಕ್ಷಕರ ಕನಸಿನ ರಾಣಿಯಾಗಿರುವ ನಮಿತಾಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಮಲ್ ಹಾಸನ್ ಆಯೋಜಿಸಿದ್ದ ಬಿಗ್ ಬಾಸ್ ತಮಿಳಿನ ಚೊಚ್ಚಲ ಋತುವಿನಲ್ಲಿ ನಮಿತಾ ಹೆಸರು ಕೇಳಿ ಬಂದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಕರೆದರೆ ಇಲ್ಲಿಗೂ ಬರುತ್ತೇನೆ ಎಂದಳಾ ಚೆಲುವೆ!

ಮುಂಬೈ: ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈಗಲೂ ಯುವತಿಯರ ಫೇವರಿಟ್. ಈ ಎವರ್ ಗ್ರೀನ್ ಹೀರೋ ಕರೆದರೆ ನಾ ...

news

ರಚಿತಾ ರಾಂ ಮದುವೆಯಾಗುತ್ತಿರುವುದು ನಿಜವೇ?

ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮದುವೆಯಾಗುತ್ತಾರಂತೆ. ಈಗಾಗಲೇ ಆಕೆಗೆ ಬಾಯ್ ...

news

ಸ್ಪರ್ಧಿಗಳ ವರ್ತನೆಗೆ ನಿವೇದಿತಾ ಬೇಸರ: ಕಣ್ಣೀರಿಟ್ಟ ಬಾರ್ಬಿ ಡಾಲ್

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಮೂರು ಎಲಿಮಿನೇಟ್ ಆಗಿದ್ದು, ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ...

news

ಪದ್ಮಾವತಿ ಚಿತ್ರ ಪ್ರದರ್ಶಿಸಿದ್ರೆ ಥಿಯೇಟರ್ ಸುಟ್ಟು ಹಾಕ್ತೇವೆ: ಬಿಜೆಪಿ ಶಾಸಕ

ತೆಲಂಗಾಣಾ: ಪದ್ಮಾವತಿ ಚಿತ್ರದಲ್ಲಿ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ಸತ್ಯವನ್ನು ವಿರೂಪಗೊಳಿಸಿ ...

Widgets Magazine