ಜಗ್ಗೇಶ್ ಹೊಸ ಚಿತ್ರದ ಹೆಸರು ಮೇಲ್ಕೋಟೆ ಮಂಜ

Bangalore, ಬುಧವಾರ, 26 ಅಕ್ಟೋಬರ್ 2016 (09:44 IST)

Widgets Magazine

ಬೆಂಗಳೂರು: ನವರಸ ನಾಯಕ ಜಗ್ಗೇಶ್ ನೀರ್ ದೋಸೆ ಯಶಸ್ಸಿನ ಖುಷಿಯಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದರ ಹೆಸರು “ಮೇಲ್ಕೋಟೆ ಮಂಜ”.
 
ಹೆಸರಿನಿಂದಲೇ ಗೊತ್ತಾಗುತ್ತದೆ ಇದು ಟಿಪಿಕಲ್ ಜಗ್ಗೇಶ್ ಚಿತ್ರ ಎಂದು. ವಿಶೇಷ ಎಂದರೆ ಈ ಚಿತ್ರದ ಕತೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಜಗ್ಗೇಶ್ ಅವರದ್ದೇ. ಜಗ್ಗೇಶ್ ಅಭಿಮಾನಿ ಆರ್. ಕೃಷ್ಣ ಚಿತ್ರದ ನಿರ್ಮಾಪಕರು.  
 
ಇದರ ಪೋಸ್ಟರ್ ನ್ನು ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ಹರಿಯಬಿಟ್ಟಿದ್ದಾರೆ. ಜತೆಗೆ ಜಗ್ಗೇಶ್ ಶೈಲಿಯಲ್ಲಿ ನೀರ್ ದೋಸೆಗೆ ಸೈಡ್ ಬಿಟ್ಟು, ಕಾದ ಮಂಜ.. ನಗಿಸಲು ಮೈ ಚಳಿ ಬಿಟ್ಟು ನಗಿಸಲು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರುತ್ತಿದ್ದಾನೆ ಎಂದು ಸಂದೇಶವನ್ನೂ ಕೊಟ್ಟಿದ್ದಾರೆ.
 
ಅಷ್ಟಕ್ಕೂ ಈ ಚಿತ್ರ ನೀರ್ ದೋಸೆಗಿಂತ ಮೊದಲೇ ಬಿಡುಗಡೆಯಾಗಬೇಕಿತ್ತಂತೆ. ಆದರೆ ನೀರ್ ದೋಸೆ ನಿರ್ಮಾಪಕರು ಕಷ್ಟದಲ್ಲಿದ್ದಾರೆಂದು ಜಗ್ಗೇಶ್ ಮನವಿ ಮಾಡಿದ್ದಕ್ಕೆ ಮಂಜ ನಿರ್ದೇಶಕರು ಒಪ್ಪಿಕೊಂಡು ಈಗ ಬಿಡುಗಡೆ ಮಾಡುತ್ತಿದ್ದಾರೆ. ಅಲ್ಲಿಗೆ ಜಗ್ಗೇಶ್ ಮತ್ತೊಂದು ಚಿತ್ರ ನವಂಬರ್ ನಲ್ಲಿ ತೆರೆಗೆ ಬರಲು ರೆಡಿ ಎಂದಾಯ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಗ್ಗೇಶ್ ನೀರ್ ದೋಸೆ ಮೇಲ್ಕೋಟೆ ಮಂಜ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಟ್ವಿಟರ್ Jaggesh Sandalwood Twitter Kannada Cinema Neer Dose Melkote Manja

Widgets Magazine

ಸ್ಯಾಂಡಲ್ ವುಡ್

news

ರಾಮಾ ರಾಮಾ ರೇ ಚಿತ್ರಕ್ಕೆ ಸುದೀಪ್ ಮೆಚ್ಚುಗೆ

ಕಳೆದ ವಾರ ಬಿಡುಗಡೆಯಾದ ರಾಮಾ ರಾಮಾ ರೇ ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

news

ಸೈನಿಕರಿಗೆ ಶುಭ ಹಾರೈಸಿದ ಬಾಲಿವುಡ್ ಸ್ಟಾರ್

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಭಾರತೀಯ ಸೈನಿಕರಿಗೆ ...

news

ವಿದ್ಯಾಬಾಲನ್ ಫೇಸುಬುಕ್ ಖಾತೆ ಶುರು

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಅಧಿಕೃತವಾಗಿ ಕೊನೆಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ಖಾತೆ ತೆರದಿದ್ದಾರೆ.

news

ಎಂಟಿವಿ ಅವಾರ್ಡ್ ನೀಡಲಿರುವ ದೀಪಿಕಾ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ನಟಿಸುತ್ತಿರುವ ಸುದ್ದಿ ಕೇಳಿರುತ್ತೀರಿ. ಇದೀಗ ...

Widgets Magazine