Widgets Magazine

ಅನಾರೋಗ್ಯ ಪೀಡಿತ ಕಿಲ್ಲರ್ ವೆಂಕಟೇಶ್ ಮೇಲೆ ಜಗ್ಗೇಶ್ ಗೆ ಯಾಕಿಷ್ಟು ಪ್ರೀತಿ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 20 ಫೆಬ್ರವರಿ 2020 (10:40 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೋಷಕ ನಟ ಕಿಲ್ಲರ್ ವೆಂಕಟೇಶ್ ಇಂದು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 
ಇವರ ಚಿಕಿತ್ಸೆಗೆ ಹಣವಿಲ್ಲದೇ ಈಗ ಚಿತ್ರರಂಗದ, ಅಭಿಮಾನಿಗಳ ನೆರವು ಪಡೆಯಲು ಸ್ವತಃ ಜಗ್ಗೇಶ್ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟಕ್ಕೂ ತನಗೆ ಕಿಲ್ಲರ್ ವೆಂಕಟೇಶ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಎನ್ನುವುದನ್ನು ಸ್ವತಃ ಜಗ್ಗೇಶ್ ಹೇಳಿಕೊಂಡಿದ್ದಾರೆ.
 
ರಣಧೀರ ಸಿನಿಮಾ ಮಾಡಲು ಹೊರಟಾಗ ರವಿಚಂದ್ರನ್ ನನ್ನ ಕರೆದು ನಾನು ರಣಧೀರ ಸಿನಿಮಾ ಮಾಡುತ್ತಿದ್ದೇನೆ, ನೀನೂ ನಟಿಸು, ಜತೆಗೆ ಇಬ್ಬರು ಹುಡುಗರಿದ್ದರೆ ಕರೆದುಕೊಂಡು ಬಾ ಎಂದಿದ್ದರು. ಆಗ ನಾನು ಕಿಲ್ಲರ್ ವೆಂಕಟೇಶ್ ನ್ನು ಪರಿಚಯಿಸಿದೆ. ನನಗೆ ಯಾಕೆ ಅವನ ಮೇಲೆ ಅಷ್ಟೊಂದು ಪ್ರೀತಿ ಎಂದರೆ 1984 ರಲ್ಲಿ ನನ್ನ ಮದುವೆಗೆ ಇದೇ ಕಿಲ್ಲರ್ ವೆಂಕಟೇಶ ನನಗೆ 700 ರೂ. ನೀಡಿದ್ದ. ಆ ಪ್ರೀತಿಯ ಋಣದಿಂದಾಗಿ ನನ್ನ ಬಹುತೇಕ ಸಿನಿಮಾದಲ್ಲಿ ಅವನಿಗೆ ಅವಕಾಶ ಕೊಡುತ್ತಿದ್ದೆ. ಪಾಪ ಇಂದು ಅವನ ಸ್ಥಿತಿ ನೋಡಿ ಭಾವುಕನಾದೆ. ಕೈಲಾದ ಸಹಾಯ ಮಾಡಿದೆ. ಮುಂದಿನದ್ದು ರಾಯರು ನೋಡಿಕೊಳ್ಳುತ್ತಾರೆ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :