ನವರಸನಾಯಕ ಜಗ್ಗೇಶ್ ಲವ್ ಗೆ ಪುತ್ರನ ಸಾಥ್!

Bangalore, ಗುರುವಾರ, 13 ಜುಲೈ 2017 (12:57 IST)

ಬೆಂಗಳೂರು: ಏನ್ರೀ ಇದು.. ಈ ವಯಸ್ಸಲ್ಲಿ ಜಗ್ಗೇಶ್ ಇನ್ನೊಂದು ಲವ್ ಮಾಡ್ತಾವ್ರಾ ಎಂದು ಕೇಳಬೇಡಿ. ಅಸಲಿಗೆ ಜಗ್ಗೇಶ್ ಹಿಂದೊಮ್ಮೆ ಲವ್ ಮಾಡಿ ಸುಪ್ರೀಂ ಕೋರ್ಟ್ ವರೆಗೂ ಹೋಗಿ ತಮ್ಮ ಪ್ರೀತಿಯ ಪತ್ನಿ ಪರಿಮಳಾ ಅವರನ್ನು ಗೆದ್ದು ಬಂದಿದ್ದು ಇತಿಹಾಸ.


 
ಇದೀಗ ಅದೇ ಕತೆಯನ್ನು ತೆರೆಯ ಮೇಲೆ ತರಲು ಜಗ್ಗೇಶ್ ಪುತ್ರ ಯತಿರಾಜ್ ತಯಾರಿ ನಡೆಸಿದ್ದಾರೆ. ಅಂದರೆ ಜಗ್ಗೇಶ್ ದ್ವಿತೀಯ ಪುತ್ರ ಯತಿರಾಜ್ ಇದೀಗ ಅಪ್ಪ-ಅಮ್ಮನ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲು ಹೊರಟಿದ್ದಾರೆ.
 
ಜಗ್ಗೇಶ್ ಲವ್ ಸ್ಟೋರಿ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ. ಹುಡುಗಿಯ ಮನೆಯವರ ವಿರೋಧ ಕಟ್ಟಿಕೊಂಡು ಜಗ್ಗೇಶ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಗೆದ್ದು ಪತ್ನಿಯನ್ನು ಮನೆ ತುಂಬಿಸಿಕೊಂಡ ಕತೆ ಈಗಾಗಲೇ ಹಲವು ಬಾರಿ ಓದಿರುತ್ತೀರಿ. ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಜಗ್ಗೇಶ್ ಈ ಬಗ್ಗೆ ಹೇಳಿದ್ದರು. ಇದೀಗ ಅದೇ ಕತೆ ತೆರೆ ಮೇಲೆ ಬರಲಿದೆ. ಆ ಮೂಲಕ ಜಗ್ಗೇಶ್ ದ್ವಿತೀಯ ಪುತ್ರನೂ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ.
 
ಇದನ್ನೂ ಓದಿ.. ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತೆ? ಪತಿ ಸ್ವರಾಜ್ ರನ್ನು ಕೇಳಿ ನೋಡಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜಗ್ಗೇಶ್ ಲವ್ ಸ್ಟೋರಿ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Jaggesh Sandalwood Love Story Kannada Film News

ಸ್ಯಾಂಡಲ್ ವುಡ್

news

ಮಲಯಾಳಂ ಸ್ಟಾರ್ ದಿಲೀಪ್ ಮ್ಯಾನೇಜರ್ ನಾಪತ್ತೆ: ಇದೀಗ ಪತ್ನಿಯೂ ಸಂಕಷ್ಟದಲ್ಲಿ?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

news

ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ

ಬೆಂಗಳೂರು: ಈ ಸಾರಿ ಅಮ್ಮನ ಸಾವಿನ ಹಿನ್ನಲೆಯಲ್ಲಿ ಬರ್ತ್ ಡೇ ಆಚರಿಸಿಕೊಳ್ಳುವುದಿಲ್ಲ ಎನ್ನುತ್ತಲೇ ...

news

ತಮಿಳುನಾಡು ಸರ್ಕಾರ ನೆರವಿಗೆ ಒತ್ತಾಯಿಸಿದ ಸಂಕಷ್ಟದಲ್ಲಿರುವ ಕಮಲ್..!

ತಮಿಳು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, ಕೇರಳ ಸರ್ಕಾರದ ರೀತಿ ತಮಿಳುನಾಡು ...

news

ಮಲೆಯಾಳಿ ನಟಿಗೆ ದಿಲೀಪ್ ಲೈಂಗಿಕ ಕಿರುಕುಳ ನೀಡಿದ್ದರ ಹಿಂದಿದೆ ಸೇಡಿನ ಕಿಚ್ಚು

ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಪೋಟಕ ...

Widgets Magazine