Widgets Magazine
Widgets Magazine

ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣ; ನಟ ಸಲ್ಮಾನ್ ಖಾನ್ ದೋಷಿ, ಉಳಿದ ನಾಲ್ವರು ಆರೋಪದಿಂದ ಖುಲಾಸೆ

ರಾಜಸ್ಥಾನ, ಗುರುವಾರ, 5 ಏಪ್ರಿಲ್ 2018 (11:48 IST)

Widgets Magazine

: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಹ ನಟ ನಟಿಯರು 20 ವರ್ಷಗಳ ಹಿಂದೆ ಕೃಷ್ಣ ಮೃಗಗಳ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ(ಇಂದು) ರಾಜಸ್ಥಾನದ ಜೋಧ್ ಪುರ ಕೋರ್ಟ್ ಅಂತಿಮ ತೀರ್ಪುನ್ನು ಪ್ರಕಟಿಸಿದೆ.


1998ರ ಅಕ್ಟೋಬರ್‌ 1 ಮತ್ತು 2ರಂದು 'ಹಮ್ ಸಾಥ್‌ ಸಾಥ್‌ ಹೈ' ಚಿತ್ರದ ಚಿತ್ರೀಕರಣದ ವೇಳೆ ಜೋಧ್‌ಪುರ್‌ ಸಮೀಪದ ಕಂಕಣಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ ಆರೋಪದ ಮೇಲೆ  ಬಾಲಿವುಡ್‌‌ ನಟ ಸಲ್ಮಾನ್ ಖಾನ್ ಸೇರಿದಂತೆ ನಟ ಸೈಫ್ ಅಲಿ ಖಾನ್, ಹಾಗೂ ನಟಿಯರಾದ ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರ ಮೇಲೆ ಕೇಸು ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 28ರಂದು ಪ್ರಕರಣದ ಅಂತಿಮ ವಾದ-ಪ್ರತಿವಾದ ನಡೆದಿದ್ದು, ಇಂದು ಪ್ರಕರಣದ ಅಂತಿಮ ತೀರ್ಪನ್ನು ನ್ಯಾ.ದೇವ್‌ಕುಮಾರ್‌ ಖತ್ರಿ ಅವರು ಪ್ರಕಟಿಸಿದ್ದಾರೆ. ಇದರ ಪ್ರಕಾರ  ನಟ ಸಲ್ಮಾನ್ ಖಾನ್ ಅವರು ದೋಷಿ ಎಂದು ಪ್ರಕಟಿಸಲಾಗಿದೆ. ಆದರೆ ಉಳಿದ ನಾಲ್ವರು ನಟ-ನಟಿಯರನ್ನು ಈ ಆರೋಪದಿಂದ ಖುಲಾಸೆಗೊಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ರನ್ನು ನೋಡುವುದಕ್ಕಾಗಿ ಈ ಬಾಲಕಿ ಇಂತಹ ಸಾಹಸಕ್ಕೆ ಕೈ ಹಾಕುವುದಾ…?

ಮುಂಬೈ : ನಟ ಸಲ್ಮಾನ್ ಖಾನ್ ಅವರಿಗಾಗಿ ಅವರ ಅಭಿಮಾನಿಗಳು ಮಾಡುವ ಅವಾಂತರಗಳು ಒಂದೆರಡಲ್ಲ. ಹಿಂದೊಮ್ಮೆ ಅವರ ...

news

ಹುಚ್ಚ 2 ಚಿತ್ರ ಇಷ್ಟು ತಡವಾಗಲು ಕಾರಣ ಯಾರು…?

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದರಂಗಿ ...

news

‘ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ನೋಡಿ ಮೆಚ್ಚಿಗೆಯ ಸುರಿಮಳೆ ಗೈದ ಬಾಲಿವುಡ ಸ್ಟಾರ್ ನಟರು!

ಮುಂಬೈ : ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯಿಸಿದ ‘ಭಾಗಿ-2’ ಚಿತ್ರ ಭರ್ಜರಿ ...

news

ನಟ ಜಗ್ಗೇಶ್ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿರುವುದು ಯಾರಿಗೋಸ್ಕರ…?

ಬೆಂಗಳೂರು : ‘ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು’ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ...

Widgets Magazine Widgets Magazine Widgets Magazine