ಕನ್ನಡದಲ್ಲಿ ಮಾತನಾಡಿ, ಕುಂದಾಪುರದ ನಂಟು ಬಿಚ್ಚಿಟ್ಟ ಜ್ಯೂ. ಎನ್ಟಿಆರ್

ಹೈದರಾಬಾದ್, ಮಂಗಳವಾರ, 4 ಏಪ್ರಿಲ್ 2017 (12:31 IST)

Widgets Magazine

ತೆಲುಗಿನ ದಂತಕತೆ ಎನ್`ಟಿಆರ್ ಮೊಮ್ಮಗ ಜ್ಯೂ. ಎನ್ಟಿರ್ ಬಗ್ಗೆ ಬಹುಶಃ ಕನ್ನಡಿಗರಿಗೂ ಚಿರ ಪರಿಚಿತ. ಆಂಧ್ರಪ್ರದೇಶದಲ್ಲಷ್ಟೆ ಅಲ್ಲ, ಕರ್ನಾಟಕದಲ್ಲೂ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಕರ್ನಾಟಕದ ಜೊತೆ ಸಿನಿಮಾ ಮೂಲಕ ನಂಟು ಹೊಂದಿದ್ದ ಎನ್ಟಿಆರ್`ಗೆ ರಕ್ತ ಸಂಬಂಧದ ನಂಟೂ ಇದೆ ಎನ್ನುವ ವಿಷಯವನ್ನ ಅವರೇ ಹೇಳಿಕೊಂಡಿದ್ದಾರೆ.


ಐಫಾ ಚಿತ್ರೋತ್ಸವದ ಸಂದರ್ಭ ರಕ್ಷಿತ್ ಶೆಟ್ಟಿಗೆ ಪ್ರಶಸ್ತಿ ನೀಡಲು ಸ್ಟೆಜ್`ಗೆ ಬಂದ ಎನ್ಟಿಆರ್, ಈ ವಿಷಯವನ್ನ ಹೇಳಿಕೊಂಡಿದ್ದಾರೆ. ನನ್ನ ತಾಯಿ ಸಹ ಕುಂದಾಪುರದವರೇ, ನಮ್ಮ ಅಪ್ಪನ ಕುಟುಂಬದ ರೀತಿ ನನ್ನ ಅಮ್ಮನದ್ದೂ ದೊಡ್ಡ ಕುಟುಂಬ ಎಂದು ಎನ್ಟಿಆರ್ ಹೇಳಿದ್ದಾರೆ.ಕನ್ನಡ ಮತ್ತು ಕರ್ನಾಟಕ ನನ್ನ ಬದುಕಿನಲ್ಲಿ ಬೆಸೆದುಕೊಂಡಿದೆ ಎಂದು ಕನ್ನಡದಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಚಿತ್ರದಲ್ಲಿ ತಾವೇ ಹಾಡಿದ್ದ ಗೆಳೆಯ ಗೆಳೆಯ ಹಾಡನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದರು.

ಎನ್`ಟಿಆರ್ ಪುತ್ರ ಹರಿಕೃಷ್ಣ ಮತ್ತು ಶಾಲಿನಿಯ ಪುತ್ರ ಜ್ಯೂ. ಎನ್ಟಿಆರ್. ಶಾಲಿನಿ ಚಿಕ್ಕಂದಿನಲ್ಲೇ ಅವರ ಕುಟುಂಬ ಹೈದರಾಬಾದ್`ಗೆ ತೆರಳಿ ಅಲ್ಲಿಯೇ ನೆಲೆಯೂರಿತ್ತು. ಹರಿಕೃಷ್ಣ, ಶಾಲಿನಿಯವರನ್ನ 2ನೇ ಮದುವೆಯಾಗಿದ್ದರು.
 
 
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜ್ಯೂ. ಎನ್ಟಿಆರ್ ಕುಂದಾಪುರ ಶಾಲಿನಿ Telugu Shalini Junior Ntr

Widgets Magazine

ಸ್ಯಾಂಡಲ್ ವುಡ್

news

ಪ್ರಿಯಾಂಕಾ ಚೋಪ್ರಾ ವಿಶ್ವದ 2ನೇ ಸುಂದರ ಮಹಿಳೆ

ಬಾಲಿವುಡ್, ಹಾಲಿವುಡ್`ನಲ್ಲಿ ತನ್ನ ನಟನೆ ಮತ್ತು ಸೌಂದರ್ಯದ ಮೂಲಕ ಹೆಸರು ಮಾಡಿರುವ ಖ್ಯಾತ ನಟಿ ಪ್ರಿಯಾಂಕಾ ...

news

ರಾಜಕುಮಾರನ ನೋಡಿ ಅತ್ತ ಶಿವರಾಜ್ ಕುಮಾರ್

ಬೆಂಗಳೂರು: ರಾಜ್ ಕುಮಾರ ಎಂದಾಕ್ಷಣ ಸಾಮಾನ್ಯ ಜನರಿಗೇ ಒಂದು ಕ್ಷಣ ಅಭಿಮಾನವುಕ್ಕಿ ಬರುತ್ತದೆ. ಹಾಗಿದ್ದ ...

news

ರಮ್ಯಾ ಬಿಜೆಪಿಗೆ ಸೇರ್ತಾರಾ..? ಇಲ್ಲಿದೆ ತಾಯಿ ರಂಜಿತಾ ಕೊಟ್ಟ ಉತ್ತರ

ನಟಿ ರಮ್ಯಾ ಎಸ್.ಎಂ. ಕೃಷ್ಣ ಬೆನ್ನಲ್ಲೇ ಬಿಜೆಪಿ ಸೇರುತ್ತಾರೆಂಬ ಊಹಾಪೋಹಗಳಿಗೆ ರಮ್ಯಾ ತಾಯಿ ರಂಜಿತಾ ತೆರೆ ...

news

ಅವಕಾಶ ಬೇಕಾದರೆ ನಮ್ಮ ಜೊತೆ ಮಲಗು ಎಂದರಂತೆ..!

ಕನ್ನಡದ ಮಿಲನ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಮನೆಮಾತಾದ ನಟಿ ಪಾರ್ವತಿ ತಮ್ಮ ವೃತ್ತಿ ಜೀವನದ ಕಹಿ ...

Widgets Magazine