Widgets Magazine
Widgets Magazine

ಟಪ್ಪಾಂಗುಚ್ಚಿ ಹಾಡೊಂದಕ್ಕೆ ಗಾಯಕರಾದ ಪ್ರೇಮಕವಿ ಕೆ ಕಲ್ಯಾಣ್

ಬೆಂಗಳೂರು, ಸೋಮವಾರ, 19 ಜೂನ್ 2017 (12:07 IST)

Widgets Magazine

ಬೆಂಗಳೂರು: ಈ ವರೆಗೆ ಗೀತರಚನೆಕಾರರಾಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ ಗಮನ ಸೆಳೆದಿದ್ದ ಕೆ ಕಲ್ಯಾನ ಈಗ ಗಾಯಕರಾಗಿದ್ದಾರೆ. ಮುತ್ತುಗಳನ್ನು ಪೋಣಿಸಿಟ್ಟಂತ ಸಾಹಿತ್ಯದ ಮೂಲಕ 3000ಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ ಕೆ ಕಲ್ಯಾಣ್ ಈಗ ಮೊದಲ ಬಾರಿಗೆ ’ಜೊತೆಯಾಗಿರು’ ಚಿತ್ರದ ಮೂಲಕ ಗಾಯಕರಾಗಿದ್ದಾರೆ.
 
ಬಹುತೇಕ ಹೊಸಬರೇ ಇರುವ ಸತೀಶ್‌ ರೇ ನಿರ್ದೇಶನದ "ಜೊತೆಯಾಗಿರು' ಚಿತ್ರದಲ್ಲಿ ವಿರಾಟ್‌ ವೆಂಕಟೇಶ್‌ ನಾಯಕರಾಗಿದ್ದು, ರಶ್ಮಿ ನಾಯಕಿ. ಸುನೀಲ್‌ ಕಾಂಚನ್‌ ಸೇರಿದಂತೆ ಹಲವು ಹೊಸ ಕಲಾವಿದರೇ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತವಿದೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡಿಗೆ ಕೆ.ಕಲ್ಯಾಣ್‌ ದನಿಯಾಗಿದ್ದಾರೆ.
 
ಸತೀಶ್‌ ರೇ ಅವರು ಬರೆದ, "ಊರ್‌ ತುಂಬ ಹುಡುಗೀರು, ನಮಗಂತ ಯಾರವರೊ, ಯಾವುದೂನು ಗೊತ್ತಾಗ್ತಿಲ್ವಲ್ಲ ...' ಎಂಬ ಟಪ್ಪಾಂಗುಚ್ಚಿ ಹಾಡಿಗೆ ಕೆ.ಕಲ್ಯಾಣ್‌ ತಮ್ಮ ದನಿ ಕೊಟ್ಟಿದ್ದಾರೆ. ಸ್ವತಃ ಸಂಗೀತ ನಿರ್ದೇಶಕರಾಗಿದ್ದರೂ ಕಲ್ಯಾಣ್‌, ಎಂದೂ ಹಾಡುವ ಪ್ರಯತ್ನ ಮಾಡಿರಲಿಲ್ಲ. ಟ್ರ್ಯಾಕ್‌ ಹಾಡಿ, ಗಾಯಕರಿಗೆ ಹೇಳಿ ಕೊಡುತ್ತಿದ್ದ ಕಲ್ಯಾಣ್‌ಗೆ, ಈ ಹೊಸಬರ ತಂಡ, ಒಮ್ಮೆಲೆ ಹಾಡಿ ಅಂತ ಪೀಡಿಸಿದ್ದರಿಂದ, "ಒಂದು ಪ್ರಯತ್ನ ಮಾಡುತ್ತೇನೆ, ಚೆನ್ನಾಗಿಲ್ಲ ಎನಿಸಿದರೆ, ತೆಗೆದು ಬೇರೆ ಗಾಯಕರಿಂದ ಹಾಡಿಸಿ' ಅಂದಿದ್ದರಂತೆ ಕಲ್ಯಾಣ್‌. ಕೊನೆಗೆ ಕಲ್ಯಾಣ್‌ ದನಿ ಕೇಳಿದ ತಂಡ, ಅವರ ವಾಯ್ಸ ಫಿಕ್ಸ್‌ ಮಾಡಿಬಿಟ್ಟಿದೆ. ಅಂದಹಾಗೆ, ಈ ಹಾಡು ಹಾಡುತ್ತಿದ್ದಂತೆಯೇ, ಈಗ ಇನ್ನೂ ಎರಡು ಸಿನಿಮಾಗಳಲ್ಲಿ ಹಾಡುವ ಕೋರಿಕೆಯೂ ಕಲ್ಯಾಣ್‌ಗೆ ಬಂದಿದೆಯಂತೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರೀತಿಸಿ ಮೋಸ.. ಹುಚ್ಚ ವೆಂಕಟ್ ಆರೋಪದ ಬಗ್ಗೆ ನಟಿ ಉತ್ತರ

ಸೂಪರ್ ಜೋಡಿ ರಿಯಾಲಿಟಿ ಶೋನಲ್ಲಿ ಜೊತೆಗಿದ್ದ ರಚನಾ ನನ್ನನ್ನ ಪ್ರೀತಿಸಿ ಈಗ ಮದುವೆಯಾಗುವುದಿಲ್ಲ ...

news

ಮಾಮ್ ಚಿತ್ರದ ಬಳಿಕ ಶ್ರೀದೇವಿ ಮಿಸ್ಟರ್ ಇಂಡಿಯಾ-2 ಆರಂಭ

1987 ರಲ್ಲಿ ಬಿಡುಗಡೆಯಾದ ಬ್ಲಾಕ್ ಬಸ್ಟರ್ ಸಿನಿಮಾ ಮಿಸ್ಟರ್ ಇಂಡಿಯಾ ಮತ್ತೆ ಸದ್ದು ಮಾಡುತ್ತಿದೆ. ಮಿಸ್ಟರ್ ...

news

ಬಿಗ್‌ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ...

news

ಪ್ರೇಮ.. ಪ್ರೇಮ.. ಪ್ರೇಮ..ಹುಚ್ಚಾ ವೆಂಕಟ್ ಹುಚ್ಚಾಟ: ಆತ್ಮಹತ್ಯೆಗೆ ಯತ್ನ

ನಟ ಹುಚ್ಚ ವೆಂಕಟ ಅವರು ಭಗ್ನ ಪ್ರೇಮದಿಂದ ಮನನೊಂದು ಪಿನಾಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ...

Widgets Magazine Widgets Magazine Widgets Magazine