ಅವರಿವರ ಪಕ್ಷ ಸೇರಲ್ಲ, ನನ್ನದೇ ಪಕ್ಷ ಮಾಡುತ್ತೀನಿ: ಕಮಲ್ ಹಾಸನ್

ಚೆನ್ನೈ, ಶುಕ್ರವಾರ, 15 ಸೆಪ್ಟಂಬರ್ 2017 (14:05 IST)

Widgets Magazine

ಹಲವು ದಿನಗಳಿಂದ ಎದ್ದಿದ್ದ ಕುತೂಹಲಕ್ಕೆ ಸೂಪರ್ ಸ್ಟಾರ್ ಕಮಲ್ ಹಾಸನ್ ತೆರೆ ಎಳೆದಿದ್ದಾರೆ. ತಮ್ಮ ಬದಲಾವಣೆಯ ಸಿದ್ಧಾಂತಗಳಿಗೆ ಯಾವ ಪಕ್ಷದಿಂದಲೂ ವೇದಿಕೆ ದೊರೆಯದ ಕಾರಣ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.
  


ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೊಸ ಪಕ್ಷ ಆರಂಭಿಸುವ ಬಗ್ಗೆ ಚಿಂತಿಸುತ್ತಿರುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ಹೌದು  ಪಕ್ಷ ಮಾಡುತ್ತಿದ್ದೇನೆ. ಸದ್ಯ, ಇರುವ ಯಾವುದೇ ಪಕ್ಷ ನನ್ನ ಸಿದ್ಧಾಂತಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ನಂಬಿಕೆ ಇಲ್ಲದಿರುವುದರಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದಿದ್ದಾರೆ.
 
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದೆ. ಕಮ್ಯುನಿಸ್ಟ್ ಪಕ್ಷದ ಬಗ್ಗೆ ನಾನು ಕೊಂಚ ಒಲವು ಹೊಂದಿದ್ದೆ. ಆದರೆ, ನನ್ನ ಗುರಿಗಳು ಮತ್ತು ಸಿದ್ಧಾಂತಗಳು ಯಾವುದೇ ಪಕ್ಷಕ್ಕೆ ಹೊಂದಿಕೆ ಆಗುವುದಿಲ್ಲ ಎಂದಿದ್ದಾರೆ. ಅಣ್ಣಾಡಿಎಂಕೆ ಪಕ್ಷದಿಂದ ಶಶಿಕಲಾ ಉಚ್ಚಾಟನೆ ಒಳ್ಳೆಯ ನಿರ್ಧಾರ ಎಂದ ಕಮಲ್ ಹಾಸನ್, ಈ ಹಿಂದೆಯೂ ಈ ಬಗ್ಗೆ ನಾನು ಪ್ರಸ್ತಾಪಿಸಿದ್ದೆ. ಇದೀಗ, ತಮಿಳುನಾಡಿನಲ್ಲಿ ಬದಲಾವಣೆ ತರಬಹುದೆಂಬ ನಂಬಿಕೆ ಬಂದಿದೆ. ಎಷ್ಟು ವಿಳಂಬವಾಗುತ್ತೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಭಾಸ್ ಸಾಹೋ ಹೀರೋಯಿನ್ ಬಗ್ಗೆ ಕೇಳಿ ಬಂದ ಈ ಸುದ್ದಿ ನಿಜವೇ?!

ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸಾಹೋ’. ಈ ಚಿತ್ರವ ಬಗ್ಗೆ ...

news

ಸಿಕ್ಕಿಂ ವಿಚಾರದಲ್ಲಿ ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ನಿರ್ಮಾಣದ ಸಿನಿಮಾವೊಂದರ ಬಗ್ಗೆ ಮಾತನಾಡುತ್ತಾ ಸಿಕ್ಕಿಂ ...

news

ಬೆಂಗಳೂರಿಗೆ ಬಂದಾಗಲೆಲ್ಲ ದೀಪಿಕಾ ಈ ಸ್ಟೋರ್`ಗೆ ಬಂದು ಇಡ್ಲಿ-ವಡೆ ಸವಿಯುತ್ತಾರೆ..!

ದೀಪಿಕಾ ಪಡುಕೋಣೆ.. ಕರ್ನಾಟಕ ಮೂಲದ ನಟಿಯಾದರೂ ಬೆಳೆದಿದ್ದೆಲ್ಲ ಬಾಲಿವುಡ್ ಹಾಲಿವುಡ್`ನಲ್ಲೇ. ...

news

ಬಿಕಿನಿ ಯಾಕೆ ಎಲ್ಲ ಬಿಚ್ಚಿ ಬಿಡು ಎಂದವನಿಗೆ ಟ್ವಿಟ್ಟರ್`ನಲ್ಲಿ ಖಡಕ್ ಉತ್ತರ ಕೊಟ್ಟ ತಾಪ್ಸಿ

ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ...

Widgets Magazine Widgets Magazine