ಕಾಶೀನಾಥ್ ಬಗ್ಗೆ ಚೌಕ ನಿರ್ದೇಶಕರು ಬಿಚ್ಚಿಟ್ಟ ಸತ್ಯ!

ಬೆಂಗಳೂರು, ಗುರುವಾರ, 18 ಜನವರಿ 2018 (10:18 IST)

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಇನ್ನಿಲ್ಲ ಎಂಬುದು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ದೊಡ್ಡ ನಷ್ಟ. ಅವರು ಕೊನೆಯದಾಗಿ ನಟಿಸಿದ ಚೌಕ ಚಿತ್ರದ ಸಂದರ್ಭದಲ್ಲಿಯೇ ಅವರಿಗೆ ಕ್ಯಾನ್ಸರ್ ರೋಗವಿತ್ತಂತೆ!
 

ಹಾಗಂತ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಚೌಕ ಚಿತ್ರವನ್ನು ಒಪ್ಪಿಕೊಂಡಿದ್ದರು.
 
ಅವರು ಚಿತ್ರೀಕರಣದ ದಿನಗಳಲ್ಲಿ ಆಗಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ದರು. ಹಾಗಿದ್ದರೂ ಒಂದು ದಿನವೂ ಚಿತ್ರೀಕರಣಕ್ಕೆ ತೊಂದರೆ ಮಾಡಿಲ್ಲ. ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ಸಿದ್ಧರಾಗಿ ಬರುತ್ತಿದ್ದರು. ಕ್ಯಾನ್ಸರ್ ಇದೆ ಎಂದು ಗೊತ್ತಿದ್ದರೂ ಲವಲವಿಕೆಯಿಂದಲೇ ಇದ್ದ ವ್ಯಕ್ತಿ ಎಂದು ತರುಣ್ ಸುಧೀರ್ ಸ್ಮರಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಾಶೀನಾಥ್ ನಿಧನಕ್ಕೆ ಚಿತ್ರರಂಗದ ಪ್ರತಿಕ್ರಿಯೆ ಏನು?

ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶೀನಾಥ್ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟ ಜಗ್ಗೇಶ್, ...

news

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ!

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಅವರು ಗುರುವಾರ(ಇಂದು) ಬೆಳಿಗ್ಗೆ ...

news

ಜಗ್ಗೇಶ್ ಈಗ ಸರಿಗಮಪ ಲಿಟಲ್ ಚಾಂಪ್ಸ್ ಜ್ಞಾನೇಶನ ಫ್ಯಾನ್!

ಬೆಂಗಳೂರು: ನವರಸನಾಯಕ ಜಗ್ಗೇಶ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪಿಯನ್ ...

news

ಬೇಡದ ರಗಳೆ ಬಗ್ಗೆ ಮಾತನಾಡಲು ಹೋಗಿ ಉಗಿಸಿಕೊಂಡ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ...

Widgets Magazine
Widgets Magazine