ನಟಿ ಖುಷ್ಬೂ ಚಲಿಸುತ್ತಿದ್ದ ಕಾರು ಭೀಕರ ಅಪಘಾತ

ಚೆನ್ನೈ| Krishnaveni K| Last Modified ಬುಧವಾರ, 18 ನವೆಂಬರ್ 2020 (11:18 IST)
ಚೆನ್ನೈ: ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಚಲಿಸುತ್ತಿದ್ದ ಕಾರು ಟ್ಯಾಂಕರ್ ಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಖುಷ್ಬೂ ಕೂದಲೆಳೆಯಲ್ಲಿ ಪಾರಾಗಿದ್ದಾರೆ.

 
ತಮಿಳುನಾಡಿನ ಮೇಲ್ ಮರವತ್ತೂರ್ ನಲ್ಲಿ ಈ ಭೀಕರ ಅಪಘಾತ ನಡೆದಿದೆ. ಕಾರಿನ ಹಿಂಭಾಗದ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ವಿಚಾರವನ್ನು ಸ್ವತಃ ಖುಷ್ಬೂ ಟ್ವಿಟರ್ ಮೂಲಕ ವಿವರಿಸಿದ್ದು, ದೇವರ ದಯೆಯಿಂದ ನಾನು ಯಾವುದೇ ತೊಂದರೆಯಾಗದೇ ಪಾರಾಗಿದ್ದೇನೆ. ನನ್ನ ಪ್ರಯಾಣವನ್ನು ಮುಂದುವರಿಸಿದೆ’ ಎಂದಿದ್ದಾರೆ. ಇದೀಗ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :