Widgets Magazine

ರಣ ರಣ ರಾವಣ… ಕಿಚ್ಚನ ಬರ್ತ್ ಡೇಗೆ `ದಿ ವಿಲನ್’ ಮೋಷನ್ ಪೋಸ್ಟರ್ ಗಿಫ್ಟ್

ಬೆಂಗಳೂರು, ಶನಿವಾರ, 2 ಸೆಪ್ಟಂಬರ್ 2017 (13:44 IST)

Widgets Magazine

ಬೆಂಗಳೂರು: ತುಂಬಾ ಕುತೂಹಲದಿಂದ ಕಾಯುತ್ತಿದ್ದ `ದಿ ವಿಲನ್’ ಚಿತ್ರದ ಮೋಶನ್ ಪೋಸ್ಟರ್ ಕಿಚ್ಚನ ಬರ್ತ್ ಡೇಗೆ ರಿಲೀಸ್ ಆಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್ ನ ಮೊದಲ ಚಿತ್ರ ಇದು. ಹೀಗಾಗಿ ಈ ಸಿನಿಮಾ ಗಾಂಧಿನಗರದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ರಣ ರಣ ಎಂಬ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಶುರುವಾಗುತ್ತಿದ್ದಂತೆ, ಶಿವಣ್ಣನ ಮುಖದಲ್ಲಿ ಸುದೀಪ್ ಹಾಗೂ ಕಿಚ್ಚ ಸುದೀಪ್ ಮುಖದಲ್ಲಿ ಶಿವಣ್ಣನ ಮುಖ ಕಳಚಿ ಬೀಳುತ್ತದೆ. ಇಲ್ಲಿಯೂ ಕಥೆ ಬಿಟ್ಟು ಕೊಟ್ಟಿಲ್ಲ. ಪ್ರತಿ ರಾಮನೊಳಗೆ ರಾವಣ, ಪ್ರತಿ ರಾವಣನಲ್ಲೂ ರಾಮನೊಬ್ಬ ಇರುತ್ತಾನೆ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ಇರಬಹುದು ಎಂದು ಊಹಿಸಿಕೊಳ್ಳಬಹುದು.
 
ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ ಸಿ.ಆರ್.ಮನೋಹರ್ ಬಂಡವಾಳ ಹಾಕಿದ್ದಾರೆ. ಒಟ್ಟನಲ್ಲಿ ಸುದೀಪ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಈ ವಿಶೇಷ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಶುಭ ಕೋರಿದ್ದು, ಅಭಿಮಾನಿಗಳಿಗೂ ಸೂಪರ್ ಗಿಫ್ಟ್ ಕೊಟ್ಟಿದ್ದಾರೆ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ನಟ ಲಂಬೂ ನಾಗೇಶ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವು ಧಾರವಾಹಿ, ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದ ಲಂಬೂ ನಾಗೇಶ್ ...

news

ಕಾಂಗ್ರೆಸ್ ಗೆ ದರ್ಶನ್, ಬಿಜೆಪಿಗೆ ಸುದೀಪ್ ಗಾಳ!

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರಿಗೆ ಬಲೆ ಹಾಕುವುದಕ್ಕೆ ...

news

ನನ್ನ ಬಣ್ಣ ಕೇಸರಿಯಲ್ಲ: ಕಮಲ್ ಹಾಸನ್

ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುತ್ತಾರೆಂಬ ಸುದ್ದಿ ಹಲವು ದಿನಗಳಿಂದ ...

news

ಕಿಚ್ಚ ಸುದೀಪ್-ಜಗ್ಗೇಶ್ ನಡುವೆ ನಡೆದ ಕುತೂಹಲಕಾರಿ ಟ್ವಿಟರ್ ಸಂಭಾಷಣೆ!

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟರು. ...

Widgets Magazine Widgets Magazine