ಲಂಡನ್ ನಿಂದಲೇ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್

Bangalore, ಶುಕ್ರವಾರ, 7 ಜುಲೈ 2017 (11:36 IST)

ಬೆಂಗಳೂರು: ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ, ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಸದ್ದು ಮಾಡಿದವರು. ಅವರೀಗ ಅಭಿಮಾನಿಗಳು ಬೆರಗಾಗುವಂತಹ ಸುದ್ದಿ ಕೊಟ್ಟಿದ್ದಾರೆ.


 
ಹೌದು. ತಮಿಳು, ತೆಲುಗು, ತೆಲುಗು ಸಿನಿಮಾಗಳಲ್ಲಿ ನಟಿಸಿ ಸುದ್ದಿ ಮಾಡಿದ್ದ ಸುದೀಪ್ ಇದೀಗ ಹಾಲಿವುಡ್ ನತ್ತ ಹಾರಲಿದ್ದಾರೆ! ಸದ್ಯಕ್ಕೆ ಲಂಡನ್ ನಲ್ಲಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸುದೀಪ್ ಹಾಲಿವುಡ್ ನಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಂದಿದೆ.
 
ಆಸ್ಟ್ರೇಲಿಯಾ ಮೂಲದ ನಿರ್ದೇಶಕ ಎಡ್ಡಿ ಆರ್ಯ  ಅವರ ‘ರೈಸನ್’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರಂತೆ. ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು, ನೈಜ ಘಟನೆಯಾಧಾರಿತ ಸಿನಿಮಾ ಎನ್ನಲಾಗಿದೆ. ದಿ ವಿಲನ್ ಚಿತ್ರೀಕರಣ ಮುಗಿದ ಮೇಲೆ ಈ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
 
ಇದನ್ನೂ ಓದಿ.. ಸತ್ಯ ಕತೆ ಹೇಳಲಿದ್ದಾರೆ ಹೆಂಗಳೆಯರ ಮೆಚ್ಚಿನ ನಟಿ ಶ್ರುತಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸತ್ಯ ಕತೆ ಹೇಳಲಿದ್ದಾರೆ ಹೆಂಗಳೆಯರ ಮೆಚ್ಚಿನ ನಟಿ ಶ್ರುತಿ!

ಬೆಂಗಳೂರು: ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಕಿರುತೆರೆಯತ್ತ ವಾಲಿರುವ ನಟಿ ಶ್ರುತಿ ಈಗಾಗಲೇ ಕಲರ್ಸ್ ಸೂಪರ್ ...

news

ನಟಿ ಸಾವಿನ ಪ್ರಕರಣದಲ್ಲಿ ನಟ ವಿಕ್ರಮ್ ಚಟರ್ಜಿ ಬಂಧನ

ಬೆಂಗಾಲಿಯ ಮಾಡೆಲ್ ಕಮ್ ಟಿವಿ ನಿರೂಪಕಿ ಸೋನಿಕಾ ಚೌಹಾಣ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಕ್ರಮ್ ...

news

ಬುರ್ಖಾ ಹಾಕಿ ತಲೆಮರೆಸಿಕೊಂಡು ಬಂದ ರಾಖಿ ಸಾವಂತ್!

ಮುಂಬೈ: ಬಾಲಿವುಡ್ ವಿವಾದಾತ್ಮಕ ನಟಿ ರಾಖಿ ಸಾವಂತ್ ಪ್ರಕರಣವೊಂದರ ವಿಚಾರಣೆಗೆ ಬರುವಾಗ ಯಾರೂ ಗುರುತು ...

news

ಚಿತ್ರರಂಗದ ಮಂಚದ ಸಂಸ್ಕೃತಿ ಬಗ್ಗೆ ಜಗತ್ಜಾಹೀರು ಮಾಡಿದ ಮತ್ತೊಬ್ಬ ನಟಿ..!

ದಕ್ಷಿಣ ಭಾರತದ ಬೋಲ್ಡೆಸ್ಟ್ ನಟಿಯರಲ್ಲೊಬ್ಬರಾದ ಇಲಿಯಾನಾ ಡಿಕ್ರೂಜ್ ಇತ್ತೀಚಿನ ಸಂದರ್ಶನವೊಂದರಲ್ಲಿ ...

Widgets Magazine
Widgets Magazine