Widgets Magazine

ಕ್ರಿಕೆಟ್ ಪ್ರೇಮಿ ಕಿಚ್ಚ ಸುದೀಪ್ ಈಗ ಲಂಡನ್ ನಲ್ಲಿ!

ಲಂಡನ್| Krishnaveni K| Last Modified ಸೋಮವಾರ, 10 ಜೂನ್ 2019 (09:36 IST)
ಲಂಡನ್: ಇಂಗ್ಲೆಂಡ್ ನಲ್ಲಿ ವಿಶ್ವಕಪ್ 2019 ಕಳೆ ರಂಗೇರಿದ್ದು, ನಿನ್ನೆ ಟೀಂ ಇಂಡಿಯಾ ಆಸ್ಟ್ರೇಲಿಯಾ ನಡುವಿನ ಮಹತ್ವದ ಪಂದ್ಯ ವೀಕ್ಷಿಸಲು ನಟ ಕಿಚ್ಚ ಸುದೀಪ್ ಲಂಡನ್ ಗೆ ಹಾರಿದ್ದಾರೆ.

 
ಓವಲ್ ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿರುವ ಮಧ್ಯೆಯೇ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ತಂಡಕ್ಕೆ ಚಿಯರ್ ಅಪ್ ಮಾಡಿದ್ದಾರೆ.
 
ಕ್ರಿಕೆಟ್ ಪ್ರೇಮಿಯಾಗಿರುವ ಕಿಚ್ಚ ಸುದೀಪ್ ಸಿನಿಮಾ ತಾರೆಯರ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಯಾಂಡಲ್ ವುಡ್ ತಂಡಕ್ಕೆ ನಾಯಕರೂ ಆಗಿದ್ದಾರೆ. ಇದೀಗ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸಹ ಆಟಗಾರರಾದ ರಾಜೀವ್, ಪ್ರದೀಪ್‍ ಜತೆಗೆ ಕಿಚ್ಚ ಸುದೀಪ್ ಪತ್ನಿ ಸಮೇತ ಲಂಡನ್ ಗೆ ಹೋಗಿ ಪಂದ್ಯ ವೀಕ್ಷಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :