ಕಿಚ್ಚ ಸುದೀಪ್-ಜಗ್ಗೇಶ್ ನಡುವೆ ನಡೆದ ಕುತೂಹಲಕಾರಿ ಟ್ವಿಟರ್ ಸಂಭಾಷಣೆ!

ಬೆಂಗಳೂರು, ಶನಿವಾರ, 2 ಸೆಪ್ಟಂಬರ್ 2017 (08:24 IST)

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನವರಸನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ನಟರು. ಅಭಿಮಾನಿಗಳೊಂದಿಗೆ ಹೆಚ್ಚಾಗಿ ಟ್ವಿಟರ್ ನಲ್ಲಿ ಬೆರೆಯುವ ಇವರು ಪರಸ್ಪರ ಕುತೂಹಲಕಾರಿ ಸಂಭಾಷಣೆ ಮಾಡಿದ್ದಾರೆ.


 
ಅದಕ್ಕೆ ಮೊದಲು ಓಂಕಾರ ಹಾಕಿದ್ದು ಜಗ್ಗೇಶ್. ಜಗ್ಗೇಶ್ ಯಾವತ್ತೂ ಕನ್ನಡದಲ್ಲೇ ನಡೆಸುವ ಸಂಭಾಷಣೆ ನಡೆಸುತ್ತಾರೆ. ಈ ಬಾರಿಯೂ ಕಿಚ್ಚನ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭ ಸಂದೇಶ ನೀಡಿದ್ದರು. ಈ ಬಗ್ಗೆ ಸುದೀಪ್ ಟ್ವಿಟರ್ ಸಂದೇಶದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
‘ನಿನ್ನ ಬರಹಗಳು, ಕನ್ನಡದ ಮೇಲಿನ ಹಿಡಿತ ಎಲ್ಲವೂ ನನಗೆ ಅಚ್ಚರಿ ಉಂಟು ಮಾಡುತ್ತದೆ. ನಿಮ್ಮ ಹಾಗೆ ನಾನೂ ಮಾತಾಡಬೇಕೆನಿಸುತ್ತದೆ’ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ‘ನೀನು ನಿಜವಾದ ಕನ್ನಡಿಗ. ಪರಭಾಷಿಕರು ಇಂದು ನಿನ್ನಿಂದ ಕನ್ನಡದ ಕಡೆಗೆ ತಿರುಗಿ ನೋಡಿದ ಹಾಗೆ ಮಾಡಿತಾದ ನೀನು. ಅಕ್ಷರಕ್ಕಿಂತ ನಿನ್ನ ಆಚರಣೆ ಶ್ರೇಷ್ಠ’ ಎಂದಿದ್ದಾರೆ.
 
ಹೀಗೆ ಸ್ಟಾರ್ ನಟರಿಬ್ಬರು ಪರಸ್ಪರ ಕನ್ನಡ ಪ್ರೀತಿಯನ್ನು ಹೊರಹಾಕಿರುವುದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ.
 
ಇದನ್ನೂ ಓದಿ.. ಬೆತ್ತಲೆಯಾಗಿ ಮಲಗೋದೂ ಒಳ್ಳೆಯದೇ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹೃತಿಕ್ ರೋಷನ್ ಕ್ಷಮೆಯಾಚಿಸಬೇಕು: ಕಂಗನಾ ರನೌತ್

ಮುಂಬೈ: ಬಿಟೌನ್ ಬೆಡಗಿ ಕಂಗನಾ ರನೌತ್ ಸದಾ ವಿವಾದಗಳಿಂದಲೇ ಸುದ್ದಿಯಾಗ್ತಾರೆ. ಈಗ ಮತ್ತೆ ಹೃತಿಕ್ ರೋಷನ್ ...

news

ಬಿಹಾರ ಪ್ರವಾಹ: ಸಂತ್ರಸ್ತರಿಗೆ 25ಲಕ್ಷ ರೂ. ಪರಿಹಾರ ನೀಡಿದ `ದಂಗಲ್’ ಸ್ಟಾರ್

ನವದೆಹಲಿ: ಬಿಹಾರದಲ್ಲಿ ಪ್ರವಾಹದಿಂದಾಗಿ ನೂರಾರು ಕೋಟಿ ನಷ್ಟವಾಗಿದೆ. ಸಾಕಷ್ಟು ಮಂದಿ ಪ್ರವಾಹಕ್ಕೆ ಸಿಲುಕಿ ...

news

ಗೆಳೆಯ ಶ್ರೇಯಸ್ ಜೊತೆ ಹಸೆಮಣೆ ಏರಿದ ಸಿಂಧು ಲೋಕನಾಥ್

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಿಂಧು ಲೋಕನಾಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾವು ...

news

ಸಂಭಾವನೆ ವಿಷಯದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ ಆ ನಟಿ ಯಾರು…?

ಮುಂಬೈ: ಇತ್ತೀಚಿಗಷ್ಟೇ ಫೋರ್ಬ್ಸ್ ತನ್ನ ನಿಯತಕಾಲಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ...

Widgets Magazine
Widgets Magazine