ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕಿಚ್ಚ ಸುದೀಪ್ ಮಾಡಿದ ಈ ಟ್ವೀಟ್ ನ ಒಳಗುಟ್ಟೇನು?!

ಬೆಂಗಳೂರು, ಮಂಗಳವಾರ, 5 ಜೂನ್ 2018 (08:53 IST)

ಬೆಂಗಳೂರು: ಇತ್ತೀಚೆಗೆ ವೈರಲ್ ಆಗುತ್ತಿರುವ ಫಿಟ್ ನೆಸ್ ಚಾಲೆಂಜ್ ಗೆ ರಾಕಿಂಗ್ ಸ್ಟಾರ್ ಯಶ್ ಮಾಡಿರುವ ವಿಡಿಯೋ ಒಂದು ಕಿಚ್ಚ ಸುದೀಪ್ ಅಭಿಮಾನಿಗಳನ್ನು ಕೆರಳಿಸಿದೆ. ಆದರೆ ಈ ಬಗ್ಗೆ ಇದೀಗ ಸ್ವತಃ ಸುದೀಪ್ ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
 
ಅಷ್ಟಕ್ಕೂ ಆಗಿದ್ದೇನು? ಕ್ರಿಕೆಟಿಗ ವಿನಯ್ ಕುಮಾರ್ ಕಿಚ್ಚ ಸುದೀಪ್ ಗೆ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಲು ಆಹ್ವಾನಿಸಿದ್ದರು. ಅದರಂತೆ ಸವಾಲು ಸ್ವೀಕರಿಸಿದ ಕಿಚ್ಚ ತಮ್ಮ ಫಿಟ್ ನೆಸ್ ಟ್ರೈನಿಂಗ್ ವಿಡಿಯೋ ಅಪ್ ಲೋಡ್ ಮಾಡಿದ್ದಲ್ಲದೆ, ಪತ್ನಿ ಪ್ರಿಯಾ, ಬಾಲಿವುಡ್ ನಟ ಸೊಹೇಲ್ ಖಾನ್, ಶಿವರಾಜ್ ಕುಮಾರ್ ಜತೆಗೆ ರಾಕಿಂಗ್ ಸ್ಟಾರ್ ಯಶ್ ಗೆ ಸವಾಲು ಸ್ವೀಕರಿಸಲು ಆಹ್ವಾನಿಸಿದ್ದರು.
 
ಆದರೆ ಯಶ್ ತಾವು ಫಿಟ್ ನೆಸ್ ಟ್ರೈನಿಂಗ್ ಮಾಡುವ ಬದಲು ಇದುವರೆಗೆ ವ್ಯಾಯಾಮ ಮಾಡಿಯೇ ಅಭ್ಯಾಸವಿಲ್ಲದ ತಮ್ಮ ಗೆಳೆಯನ ಮೂಲಕ ದೈಹಿಕ ಕಸರತ್ತು ನಡೆಸಿ ಆ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಇದು ಕಿಚ್ಚ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
 
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳು ಕೆಂಡ ಕಾರಿದ್ದರು. ಇದಕ್ಕೆ ಇದೀಗ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸುದೀಪ್ ‘ಯಾರೂ ನನ್ನ ಹೆಸರು ಹೇಳಿಕೊಂಡು ಯಶ್ ಹಾಕಿರುವ ವಿಡಿಯೋಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ಆ ವಿಡಿಯೋ ಅವರು ಅಪ್ ಲೋಡ್ ಮಾಡಿರುವುದು ನನ್ನ ಮೇಲಿನ ಪ್ರೀತಿಯಿಂದ ಮತ್ತು ಗೌರವದಿಂದ. ನನಗೆ ಆ ವಿಡಿಯೋದಲ್ಲಿ ಅಷ್ಟೇ ಕಾಣುತ್ತಿದೆ. ನನ್ನ ಮಾತುಗಳಿಗೆ ಬೆಲೆ ಕೊಡುತ್ತೀರಿ ಅಂದುಕೊಳ್ಳುತ್ತೇನೆ’ ಎಂದು ಸುದೀಪ್ ಇದೀಗ ಟ್ವೀಟ್ ಮಾಡಿ ಅಭಿಮಾನಿಗಳನ್ನು ತಣ್ಣಗಾಗಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತೀವ್ರ ಉಸಿರಾಟದ ಸಮಸ್ಯೆಯಿಂದ ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲು

ಮುಂಬೈ : ಬಾಲಿವುಡ್ ನಟಿ ಬಿಪಾಶಾ ಬಸು ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದರಿಂದ ಇದೀಗ ಮುಂಬೈ ...

news

ಮ್ಯಾಗಝೀನ್ ನ 'ಕವರ್ ಗರ್ಲ್' ಆಗಿದ್ದಕ್ಕೆ ಜಾಹ್ನವಿ ಕಪೂರ್ ಗೆ ಟ್ರೋಲಿಗರು ಹೇಳಿದ್ದೇನು ?

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ದಿವಗಂತ ಶ್ರೀದೇವಿ ಅವರ ಮಗಳು ನಟಿ ಜಾಹ್ನವಿ ಕಪೂರ್ ಅವರು ಇದೀಗ ಮತ್ತೆ ...

news

ಸನ್ನಿಲಿಯೋನಾ ಭೇಟಿ ಮಾಡಬೇಕೆಂದುಕೊಂಡವರಿಗೆ ಇಲ್ಲಿದೆ ನೋಡಿ ಒಂದು ಬಂಪರ್ ಆಫರ್

ಮುಂಬೈ : ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನು ನೋಡಬೇಕು, ಅವರನ್ನು ಭೇಟಿ ಮಾಡಿ ಮಾತನಾಡಬೇಕು ...

news

ವೇಶ್ಯಾವಾಟಿಕೆ ಅಡ್ಡದಲ್ಲಿ ಸಿಕ್ಕಿಬಿದ್ದ ಈ ನಟಿ ಯಾರು ಗೊತ್ತಾ…?

ಚೆನ್ನೈ : ತಮಿಳು ಟಿವಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಾಣಿ-ರಾಣಿ ಧಾರವಾಹಿಯ ಫೇಮಸ್ ನಟಿ ಸಂಗೀತಾ ...

Widgets Magazine
Widgets Magazine