ರಕ್ಷಿತ್ ಶೆಟ್ಟಿ-ಸುದೀಪ್ ಕಾಂಬಿನೇಷನ್ ಮುರಿದುಬಿತ್ತು!

ಬೆಂಗಳೂರು, ಭಾನುವಾರ, 3 ಸೆಪ್ಟಂಬರ್ 2017 (08:33 IST)

ಬೆಂಗಳೂರು: ರಕ್ಷಿತ್ ಶೆಟ್ಟಿ ಹೊಸದಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಸೆನ್ಸೇಷನ್. ಕಿಚ್ಚ ಸುದೀಪ್ ಹಳೇ ಹುಲಿ. ಇವರಿಬ್ಬರೂ ಸೇರಿಕೊಂಡು ಅದ್ಭುತ ಸಿನಿಮಾ ಮಾಡುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಬಂದಿದೆ.


 
ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಸುದೀಪ್ ‘ಥಗ್ಸ್ ಆಫ್ ಮಾಲ್ಗುಡೀಸ್’ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಇವರಿಬ್ಬರೂ ಇದನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಎಲ್ಲಾ ಸರಿಯಾಗಿದ್ದರೆ ಕಿರಿಕ್ ಪಾರ್ಟಿ ಮುಗಿದ ಮೇಲೆ ರಕ್ಷಿತ್ ಈ ಸಿನಿಮಾ ಕೈಗೆತ್ತಿಕೊಳ್ಳಬೇಕಾಗಿತ್ತು.
 
ಆದರೆ ಎಲ್ಲವೂ ಮುರಿದು ಬಿದ್ದಿದೆ. ಇದಕ್ಕೆ ಕಾರಣ ರಕ್ಷಿತ್ ಈ ಸಿನಿಮಾ ಮಾಡಲು ನಿಧಾನ ಮಾಡಿದ್ದು. ಸುದೀಪ್ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಚಿತ್ರ ಮಾಡುತ್ತಿರುವುದು. ಇವರಿಬ್ಬರ ಟ್ವಿಟರ್ ಸಂಭಾಷಣೆಯಿಂದ ಇದು ಪಕ್ಕಾ ಆಗಿದೆ.
 
ಜತೆಗೆ ಸ್ಕ್ರಿಪ್ಟ್ ಮಾಡಿಕೊಳ್ಳಲು ತಡ ಮಾಡಿದ ರಕ್ಷಿತ್ ಬಗ್ಗೆ ಸುದೀಪ್ ಗೆ ಕೊಂಚ ಬೇಸರವೂ ಆಗಿದೆ ಎಂಬ ಗಾಳಿ ಸುದ್ದಿ ಬಂದಿದೆ. ಇನ್ನು ಈ ವಿಷಯದ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ ಎಂದು ಸುದೀಪ್ ಖಡಕ್ ಆಗಿ ಟ್ವಿಟರ್ ನಲ್ಲಿ ರಕ್ಷಿತ್ ಗೆ ಹೇಳಿರುವುದು ಎಲ್ಲವೂ ಮುಗಿದಿದೆ ಎನ್ನುವುದನ್ನು ಕನ್ ಫರ್ಮ್ ಮಾಡಿದೆ.
 
ಇದನ್ನೂ ಓದಿ.. ಪ್ರಧಾನಿ ಮೋದಿ ಸರ್ವಾಧಿಕಾರಿ ಎಂದ ಬಿಜೆಪಿ ಸಂಸದ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣ ರಣ ರಾವಣ… ಕಿಚ್ಚನ ಬರ್ತ್ ಡೇಗೆ `ದಿ ವಿಲನ್’ ಮೋಷನ್ ಪೋಸ್ಟರ್ ಗಿಫ್ಟ್

ಬೆಂಗಳೂರು: ತುಂಬಾ ಕುತೂಹಲದಿಂದ ಕಾಯುತ್ತಿದ್ದ `ದಿ ವಿಲನ್’ ಚಿತ್ರದ ಮೋಶನ್ ಪೋಸ್ಟರ್ ಕಿಚ್ಚನ ಬರ್ತ್ ಡೇಗೆ ...

news

ನಟ ಲಂಬೂ ನಾಗೇಶ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವು ಧಾರವಾಹಿ, ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದ ಲಂಬೂ ನಾಗೇಶ್ ...

news

ಕಾಂಗ್ರೆಸ್ ಗೆ ದರ್ಶನ್, ಬಿಜೆಪಿಗೆ ಸುದೀಪ್ ಗಾಳ!

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರಿಗೆ ಬಲೆ ಹಾಕುವುದಕ್ಕೆ ...

news

ನನ್ನ ಬಣ್ಣ ಕೇಸರಿಯಲ್ಲ: ಕಮಲ್ ಹಾಸನ್

ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುತ್ತಾರೆಂಬ ಸುದ್ದಿ ಹಲವು ದಿನಗಳಿಂದ ...

Widgets Magazine
Widgets Magazine