ಮತ್ತೆ ಶುರುವಾಯ್ತು ಯಶ್, ಸುದೀಪ್ ಅಭಿಮಾನಿಗಳ ವಾರ್

ಬೆಂಗಳೂರು, ಶನಿವಾರ, 12 ಜನವರಿ 2019 (09:23 IST)

ಬೆಂಗಳೂರು: ಕೆಜಿಎಫ್ ಯಶಸ್ವಿಯಾಗುತ್ತಿದ್ದಂತೇ ಇದೀಗ ಸ್ಯಾಂಡಲ್ ವುಡ್ ನ ಇಬ್ಬರು ಸೂಪರ್ ಸ್ಟಾರ್ ಗಳ ಅಭಿಮಾನಿಗಳ ನಡುವೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ವಾರ್ ಶುರುವಾಗಿದೆ.


 
ಕಿಚ್ಚ ಸುದೀಪ್ ಬಗ್ಗೆ ಯಶ್ ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಕೀಳುಮಟ್ಟದ ಕಾಮೆಂಟ್ ಮಾಡಿದ್ದು, ಸುದೀಪ್ ಕಳೆದ 22 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೂ ಒಂದೇ ಒಂದು ಸಿನಿಮಾ 50 ಕೋಟಿ ಕ್ಲಬ್ ಕೂಡಾ ಸೇರಿಲ್ಲ. ಆದರೆ ಯಶ್ ಹತ್ತೇ ವರ್ಷದಲ್ಲಿ 200 ಕೋಟಿ ಕ್ಲಬ್ ಸೇರಿದ ಸಿನಿಮಾ ಮಾಡಿದ್ರು ಎಂದು ಕೆಣಕಿದ್ದಾನೆ.
 
ಈತನ ಕಾಮೆಂಟ್ ನೋಡಿ ಸುದೀಪ್ ಅಭಿಮಾನಿಗಳ ಪಿತ್ತ ನೆತ್ತಿಗೇರಿದ್ದು, ಯಶ್ ಅಭಿನಯಿಸಿ ಸೋತಿದ್ದ ಕೆಲವು ಸಿನಿಮಾಗಳ ಪಟ್ಟಿ ಮಾಡಿ ಅಣಕ ಮಾಡಿದ್ದಾರೆ. ಇದೀಗ ಈ ಕಿಡಿಗೇಡಿ ಅಭಿಮಾನಿಗಳ ಕೀಳುಮಟ್ಟದ ಮಾತಿನ ವಾರ್ ತಣ್ಣಗಾಗಲು ಸ್ವತಃ ಯಶ್, ಸುದೀಪ್ ಮಧ್ಯೆಪ್ರವೇಶಿಸಬೇಕೇನೋ.
 
ಹಿಂದೊಮ್ಮೆ ಯಶ್‍ ಬಗ್ಗೆ ಇದೇ ರೀತಿ ಕಿಚ್ಚ ಸುದೀಪ್ ಅಭಿಮಾನಿಗಳು ಟ್ವಿಟರ್ ನಲ್ಲಿ ಬಾಯಿಗೆ ಬಂದಂತೆ ವಾಗ್ದಾಳಿ ನಡೆಸಿದ್ದಾಗ ಸ್ವತಃ ಸುದೀಪ್ ಟ್ವೀಟ್ ಮಾಡಿ, ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ. ನಮ್ಮ ಹೆಸರಿನಲ್ಲಿ ದಯವಿಟ್ಟು ಈ ರೀತಿ ಮಾತಾಡಿ ಗೌರವ ಹಾಳುಮಾಡಬೇಡಿ ಎಂದಿದ್ದರು. ಅದಾದ ಬಳಿಕ ಅಭಿಮಾನಿಗಳ ವಾರ್ ಗೆ ಬ್ರೇಕ್ ಬಿದ್ದಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆ ಒಂದು ಮಾಧ್ಯಮದ ಮೇಲೆ ಕಿಡಿ ಕಾರಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಐಟಿ ದಾಳಿಗೊಳಗಾದ ಬಳಿಕ ವಿಚಾರಣೆಗಾಗಿ ನಿನ್ನೆಯಷ್ಟೇ ಐಟಿ ಕಚೇರಿ ಹೋಗಿ ಬಂದ ರಾಕಿಂಗ್ ಸ್ಟಾರ್ ...

news

ಪ್ರಧಾನಿ ಮೋದಿ ಜತೆ ಸೆಲ್ಫೀಗೆ ಮುಗಿಬಿದ್ದ ಬಾಲಿವುಡ್ ತಾರೆಯರು

ನವದೆಹಲಿ: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಮತ್ತು ತಂಡ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಸೆಲ್ಫೀ ...

news

ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ: ಇತಿಹಾಸ ನಿರ್ಮಿಸಿದ ಕನ್ನಡ ಸಿನಿಮಾ

ಇಸ್ಲಾಮಾಬಾದ್: ಕನ್ನಡದ ಕೆಜಿಎಫ್ ಸಿನಿಮಾ ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರ ಇದೀಗ ನೆರೆಯ ...

news

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿ ಎಂದಿದ್ದಕ್ಕೆ ತಮನ್ನಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಕೆಜಿಎಫ್ ನ ಹಾಡೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆಗೆ ಹೆಜ್ಜೆ ಹಾಕಿ ಮಿಲ್ಕಿ ಬ್ಯೂಟಿ ತಮನ್ನಾ ...