ಕೆಪಿಎಲ್ ಸರಣಿಯಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಔಟ್

ಬೆಂಗಳೂರು, ಶನಿವಾರ, 5 ಆಗಸ್ಟ್ 2017 (14:29 IST)

ಕಿಚ್ಚ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದೆ. ಕೆಪಿಎಲ್`ನಲ್ಲಿ ಆಡಲು ಕೆಎಸ್`ಸಿಎ ಜೊತೆ 3 ವರ್ಷಗಳ ಒಪ್ಪಂದವಾಗಿತ್ತು. ಆದರೆ, ಈ ಬಾರಿ ಕಿಚ್ಚ ಸುದೀಪ್ ತಂಡಕ್ಕೆ ಆಹ್ವಾನ ನೀಡಿಲ್ಲ ಎಂದು ವಕ್ತಾರರು ಖಾಸಗಿ ಚಾನಲ್`ಗಳಿಗೆ ತಿಳಿಸಿದ್ದಾರೆ.


ಕಳೆದ ವರ್ಷ ಭರ್ಜರಿ ಅಭ್ಯಾಸ ನಡೆಸಿ ಸುದೀಪ್ ನೇತೃತ್ವದ ರಾಕ್ ಸ್ಟಾರ್ಸ್ ತಂಡ ಅಭಿಮಾನಿಗಳನ್ನ ರಂಜಿಸಿತ್ತು. ಆದರೆ, ಆಡಿದ ಎಲ್ಲ ಪಂದ್ಯಗಳನ್ನ ಸೋತು ನಿರಾಸೆ ಮೂಡಿಸಿತ್ತು. ತಂಡದ ಕಳಪೆ ಸಾಧನೆಯೂ ಟೂರ್ನಿಯಿಂದ ಹೊರಗಿಡಲು ಕಾರಣವಿರಬಹುದೆಂದು ಹೇಳಲಾಗುತ್ತದೆ. ಜೊತೆಗೆ ತಂಡದ ಪ್ರಮುಖ ಾಟಗಾರ ಧ್ರುವ ಶರ್ಮಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದು ತಂಡದ ಬಲ ಕುಗ್ಗಿಸಿದೆ. ಇದರ ಬೆನ್ನಲ್ಲೇ ತಂಡವನ್ನ ಟೂರ್ನಿಯನ್ನ ಹೊರಗಿಡಲಾಗಿದೆ.

ಕೆಪಿಎಲ್ ಆಡಳಿತ ಮಂಡಳಿಯ ೀ ನಿರ್ಧಾರದ ಬಗ್ಗೆ ಕಿಚ್ಚಿ ಸುದೀಪ್ ಟ್ವಿಟ್ಟರ್`ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕಾಏಕಿ ನಮಗೆ ತಿಳಿಸದೇ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಐಟಿ ದಾಳಿ ಬಗ್ಗೆ ಕುತೂಹಲಕಾರಿ ಟ್ವಿಟ್ ಮಾಡಿದ ಉಪೇಂದ್ರ

ದೇಶ ಮತ್ತು ರಾಜ್ಯದಲ್ಲಾಗುವ ಪ್ರಮುಖ ಬೆಳವಣಿಗೆಗಳ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸುವ ರಿಯಲ್ ...

news

ಕುರುಕ್ಷೇತ್ರಕ್ಕೆ ಭಾನುವಾರ ಮುಹೂರ್ತ

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ಕುರುಕ್ಷೇತ್ರ’ಕ್ಕೆ ಭಾನುವಾರ ಮುಹೂರ್ತ ...

news

ಹಸಿಬಿಸಿ ಲೈಂಗಿಕ ದೃಶ್ಯಗಳಿಂದ ಈ ಚಿತ್ರದ 48 ದೃಶ್ಯಗಳು ಕಟ್

ಇತ್ತೀಚಿನ ದಿನಗಳಲ್ಲಿ ಅತಿರಂಜಿತ ಲೈಂಗಿಕ ದೃಶ್ಯ, ಅಪರಾಧಕ್ಕೆ ಸಂಬಂಧಿತ ದೃಶ್ಯಗಳಗನ್ನೊಳಗೊಂಡ ಚಿತ್ರಗಳ ...

news

ಗಂಡನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡ ಮಾಡೆಲ್..!

ಗಂಡನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲೈವ್`ನಲ್ಲೇ ಮಾಡೆಲ್ ನೇಣಿಗೆ ಶರಣಾಗಿರುವ ಘಟನೆ ಬಾಂಗ್ಲಾದೇಶದ ...

Widgets Magazine