Widgets Magazine
Widgets Magazine

ದರುಶನ ಕೊಡು ಅನಂತಪದ್ಮನಾಭ…! ಖ್ಯಾತ ಗಾಯಕ ಯೇಸುದಾಸ್ ಮನವಿ

ತಿರುವನಂತಪುರಂ, ಸೋಮವಾರ, 18 ಸೆಪ್ಟಂಬರ್ 2017 (09:58 IST)

Widgets Magazine

ತಿರುವನಂತಪುರಂ: ಕೇರಳ ರಾಜಧಾನಿಯಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿಯ ದರ್ಶನಕ್ಕೆ ಅನುವು ಮಾಡಿಕೊಡುವಂತೆ ಖ್ಯಾತ ಗಾಯಕ ಯೇಸುದಾಸ್ ದೇವಾಲಯದ ಟ್ರಸ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.


 
ಅನಂತ ಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಹಿಂದೂಗಳು ಮತ್ತು ಹಿಂದುತ್ವದಲ್ಲಿ ನಂಬಿಕೆ ಇಟ್ಟವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂಬ ಕಟ್ಟಪಾಡು ಇದೆ. ಹಾಗಾಗಿ ಮೂಲತಃ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಯೇಸುದಾಸ್ ಅವರಿಗೆ ಪ್ರವೇಶ ನೀಡಲಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಅವರು ಟ್ರಸ್ಟ್ ಗೆ ಮನವಿ ಪತ್ರವೊಂದನ್ನು ಬರೆದಿದ್ದಾರೆ.
 
ನಾನು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ್ದರೂ ಹಿಂದೂ ಆಚರಣೆಗಳಲ್ಲಿ ನಂಬಿಕೆಯಿಟ್ಟವನು. ಹಾಗಾಗಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಎಂದು ಪತ್ರದಲ್ಲಿ ಹಿರಿಯ ಗಾಯಕ ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ದೇವಾಲಯದ ಅಧಿಕಾರಿ ವಿ ರತೀಶನ್, ಹಿಂದೂ ಧರ್ಮದಲ್ಲಿ ನಂಬಿಕೆಯಿಟ್ಟವರು ದೇವಾಲಯ ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ. ಯೇಸುದಾಸ್ ತಾವು ಯಾವಾಗ ದೇವಾಲಯಕ್ಕೆ ಭೇಟಿ ನೀಡುವುದಾಗಿ ಪತ್ರದಲ್ಲಿ ತಿಳಿಸಿಲ್ಲ. ಆದರೆ ವಿಜಯದಶಮಿಯಂದು ಅವರು ದೇವಾಲಯಕ್ಕೆ ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ.
 
ಇದನ್ನೂ ಓದಿ… ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮಗಳಿಗಾಗಿ ಅಪ್ಪಂದಿರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದ ಅಭಿಷೇಕ್ ಬಚ್ಚನ್!

ಮುಂಬೈ: ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮುದ್ದಿನ ಮಗಳು ಆರಾಧ್ಯ ಬಚ್ಚನ್. ...

news

ಬ್ರಿಟನ್ ಸಂಸತ್ತಿನಲ್ಲಿ ಸಲ್ಮಾನ್ ಖಾನ್ ಗೆ ಗೌರವ

ಲಂಡನ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಬ್ರಿಟನ್ ಸಂಸತ್ತು ಗ್ಲೋಬಲ್ ಡೈವರ್ಸಿಟಿ ಅವಾರ್ಡ್ ...

news

ರಜನಿ ಜತೆ ಕೈ ಜೋಡಿಸುವುದಕ್ಕೆ ನಾನು ರೆಡಿ ಎಂದ ಕಮಲ್ ಹಾಸನ್

ಚೆನ್ನೈ: ತಮಿಳುನಾಡಿನಲ್ಲಿ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಲು ಹೊರಟಿರುವ ನಟ ...

news

ಬಾಹುಬಲಿ ಚಿತ್ರಕ್ಕಾದ ಗತಿಯೇ ಧ್ರವ ಸರ್ಜಾ ಭರ್ಜರಿಗೂ ಆಯಿತು!

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆ ಕಂಡಿದೆ. ಮೊದಲೇ ದಿನವೇ ...

Widgets Magazine Widgets Magazine Widgets Magazine