ಲೈಂಗಿಕ ಕಿರುಕುಳದ ಕಹಿ ಮೆಟ್ಟಿ ನಿಂತು ಶೂಟಿಂಗ್`ಗೆ ಬಂದ ಮಲೆಯಾಳಿ ನಟಿ

ಕೊಚ್ಚಿ, ಸೋಮವಾರ, 27 ಫೆಬ್ರವರಿ 2017 (09:48 IST)

ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಲೆಯಾಳಿ ನಟಿ ನಿನ್ನೆ ಶೂಟಿಂಗ್`ಗೆ ಹಾಜರಾಗಿದ್ದಾರೆ. ಲೈಂಗಿಕ ಕಿರುಕುಳದ ದುಃಸ್ವಪ್ನದಿಂದ ಹೊರಬಂದಿರುವ ನಟಿ ಧೈರ್ಯವಾಗಿ ನಿನ್ನೆ ಶೂಟಿಂಗ್ ಸ್ಥಳಕ್ಕೆ ಬಂದು ನೂತನ ಚಿತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂದು ಸಹ ನಟ ಪೃಥ್ವಿರಾಜ್ ಫೇಸ್ಬುಕ್`ನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಧೈರ್ಯವನ್ನೂ ಪೃಥ್ವಿರಾಜ್ ಶ್ಲಾಘಿಸಿದ್ದಾರೆ.


ಒಬ್ಬ ಅಸಾಮಾನ್ಯ ಮಹಿಳೆಯ ಅಸಾಮಾನ್ಯ ನಿರ್ಧಾರಕ್ಕೆ ನಾನಿಲ್ಲಿ ಸಾಕ್ಷಿಯಾಗಿದ್ದೇನೆ. ಯಾವುದೇ ಘಟನೆ ಮತ್ತು ಯಾರೊಬ್ಬರೂ ನಿಮ್ಮನ್ನ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ನೀವು ಮಾತ್ರವೇ ನಿಮ್ಮನ್ನ ಕಂಟ್ರೋಲ್ ಮಾಡಬೇಕೆಂದು ಆಕೆ ಹೇಳಿದ ಮಾತು ನನ್ನಲ್ಲಿ ಎಂದೆಂದಿಗೂ ಪ್ರತಿಧ್ವನಿಸುತ್ತಿರುತ್ತೆ ಎಂದು ಪೃಥ್ವಿರಾಜ್ ಹೇಳಿದ್ದಾರೆ.

ಈ ಮಧ್ಯೆ, ಘಟನೆ ಕುರಿತಂತೆ ನಟಿ ಪತ್ರಿಕಾಗೋಷ್ಠಿ ನಡೆಸಲೂ ಇಚ್ಛಿಸಿದ್ದರಂತೆ. ಆದರೆ, ಐಡೆಂಟಿಫಿಕೆಶನ್ ಪೆರೇಡ್ ನಡೆಯುವವರೆಗೂ ಬೇಡವೆಮದು ಪೊಲಿಸರು ಸೂಚಿಸಿದ್ದರಿಂದ ನಟಿ ಸುಮ್ಮನಾಗಿದ್ದಾರೆ ಎಂದು ತಿಳಿದುಬಂದಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗಣೇಶ್ ಮತ್ತು ಎಸ್ ನಾರಾಯಣ್ ನಡುವೆ ತಿಕ್ಕಾಟ

ಒಂದು ಕಾಲದಲ್ಲಿ ಕಲಾಸಾಮ್ರಾಟ್ ಎಸ್ ನಾರಾಯಣ್ ಮತ್ತು ಗಣೇಶ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಈಗ ಅದು ...

news

ಮತ್ತೆ ನಿರ್ದೇಶನಕ್ಕೆ ಮರಳಿದ ಕ್ರೇಜಿಸ್ಟಾರ್ ರವಿಚಂದ್ರನ್

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ನಿರ್ದೇಶನಕಕ್ಕೆ ವಾಪಸ್ ಆಗಿದ್ದಾರೆ. ಅಪೂರ್ವ ಚಿತ್ರದ ಬಳಿಕ ಅವರು ...

news

ದುನಿಯಾ ವಿಜಯ್ ’ಮಾಸ್ತಿಗುಡಿ’ ಹಾಡುಗಳು ಬಿಡುಗಡೆ

ದುನಿಯಾ ವಿಜಯ್ ಅಭಿನಯದ ’ಮಾಸ್ತಿಗುಡಿ’ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ. ಸಾಧುಕೋಕಿಲ ಸಂಗೀತ ...

news

ಅರವಿಂದ್ ಸ್ವಾಮಿಯನ್ನು ಒಲ್ಲೆ ಎಂದ ಪ್ರಿಯಾಮಣಿ

ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ತಾರೆ ಪ್ರಿಯಾಮಣಿ. ಆಕೆ ಅಭಿನಯದ ಪರುತ್ತಿವೀರನ್ ಚಿತ್ರ ...

Widgets Magazine
Widgets Magazine