ನಟ ರವಿ ತೇಜಾ ಅಂತಹವನಲ್ಲ ಎಂದ ಅಮ್ಮ

Hyderabad, ಮಂಗಳವಾರ, 18 ಜುಲೈ 2017 (11:34 IST)

ಹೈದರಾಬಾದ್: ಮಾದಕ ವಸ್ತುಗಳ ದುರ್ಬಳಕೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ತೆಲುಗು ನಟ ರವಿ ತೇಜಾ ಬೆಂಬಲಕ್ಕೆ ಅವರ ತಾಯಿ ರಾಜಲಕ್ಷ್ಮಿ ಬಂದಿದ್ದಾರೆ. ನನ್ನ ಮಗ ಅಂತಹವನಲ್ಲ ಎಂದಿದ್ದಾರೆ.


 
ನನ್ನ ಮಗ ಮಾದಕ ವಸ್ತು ವ್ಯಸನಿಯಲ್ಲ, ಅಂತಹ ಜಾಲದಲ್ಲೂ ಆತ ನಂಟು ಹೊಂದಿಲ್ಲ ಎಂದು ರಾಜಲಕ್ಷ್ಮಿ ಹೇಳಿದ್ದಾರೆ. ರವಿ ತೇಜಾಗೆ ಅಬಕಾರಿ ಇಲಾಖೆಯಿಂದ ನೋಟೀಸ್ ಬಂದಿರುವುದನ್ನು ಒಪ್ಪಿಕೊಂಡಿರುವ ರಾಜಲಕ್ಷ್ಮಿ ಜುಲೈ 22 ರೊಳಗಾಗಿ ತಮ್ಮ ಪುತ್ರ ಕೋರ್ಟ್ ಗೆ ಹಾಜರಾಗಿ ವಿವರಣೆ ನೀಡಲಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.
 
ಮಾದಕ ವಸ್ತು ಬಿಡಿ, ರವಿ ತೇಜಾಗೆ ತಂಬಾಕಿನ ವಾಸನೆ ಕೂಡಾ ಹಿಡಿಸಲ್ಲ. ಹಾಗಿರುವಾಗ ಮಾದಕ ವಸ್ತುಗಳ ವ್ಯಸನಿಯಾಗುವ ಮಾತೆಲ್ಲಿ ಬಂತು ಎಂದು ಅಮ್ಮ ಪ್ರಶ್ನಿಸಿದ್ದಾರೆ. ತೆಲುಗು ಚಿತ್ರರಂಗದ ಹಲವು ನಟ-ನಟಿಯರಿಗೆ ಮಾದಕ ವಸ್ತುಗಳ ದುರ್ಬಳಕೆ ಪ್ರಕರಣದಲ್ಲಿ ಅಬಕಾರಿ ಇಲಾಖೆ ನೋಟಿಸ್ ನೀಡಿತ್ತು. ಅವರಲ್ಲಿ ರವಿತೇಜಾ ಹೆಸರೂ ಇದೆ.
 
ಇದನ್ನೂ ಓದಿ..  ಅತ್ಯಾಚಾರ ಕ್ರಿಕೆಟಿಗ ಮೊಹಮ್ಮದ್ ಶಮಿ ಅಪಾರ್ಟ್ ಮೆಂಟ್ ಮೇಲೆ ದಾಳಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಾಕತ್ತಿದ್ದರೆ ರಾಜಕೀಯಕ್ಕೆ ಬರಲಿ: ಕಮಲ್ ಹಾಸನ್ ಮೇಲೆ ಮುಗಿಬಿದ್ದ ಸಚಿವರು

ತಮಿಳುನಾಡಿನ ಆಡಳಿತಾರೂಢ ಅಣ್ಣಾಡಿಎಂಕೆ ಮತ್ತೆ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನ ಟಾರ್ಗೆಟ್ ಮಾಡಿದೆ. ...

news

ಸಿನಿಮಾ ನೋಡಲು ಬಂದ ನಟಿಗೆ ಚಿತ್ರಮಂದಿರದಲ್ಲಿ ಕಿರುಕುಳ

ಮುಂಬೈ: ಸಿನಿಮಾ ನೋಡಲು ಪುತ್ರಿ ಜತೆ ಚಿತ್ರಮಂದಿರಕ್ಕೆ ಬಂದಿದ್ದ ಮರಾಠಿ ಸಿನಿಮಾ ನಟಿ ಪ್ರಿಯಾ ಬೆರ್ಡೆಗೆ ...

news

ಬಹಿರಂಗವಾಗಿ ಕಿತ್ತಾಡಿಕೊಂಡ ಪೂಜಾ ಗಾಂಧಿ, ಸಂಜನಾ

ಬೆಂಗಳೂರು: ಸ್ಯಾಂಡಲ್ ವುಡ್ ನ ಇಬ್ಬರು ನಟಿಯರಾದ ಪೂಜಾ ಗಾಂಧಿ ಮತ್ತು ಸಂಜನಾ ನಡುವೆ ಕಳೆದ ಕೆಲವು ದಿನಗಳಿಂದ ...

news

ಬಾಲಿವುಡ್ ಬಾದ್ ಶಾ ಶಾರುಖ್ ಫೋನ್ ನಂಬರ್ ಗೊತ್ತಾ..?

ಸಾಮಾನ್ಯವಾಗಿ ಸಿನಿಮಾ ತಾರೆಯರು ತಮ್ಮ ಫೋನ್ ನಂಬರ್ ಗಳನ್ನು ಎಲ್ಲೂ ಬಹಿರಂಗ ಪಡಿಸಲ್ಲ. ಅದರಲ್ಲೂ ಅವರ ...

Widgets Magazine