ತೆರೆ ಮೇಲೆ ಶುರುವಾಗಿದೆ ಮುದ್ದು ಮನಸುಗಳ ಕಲರವ

ಶುಕ್ರವಾರ, 28 ಆಗಸ್ಟ್ 2015 (10:47 IST)

ಚಂದನವನದಲ್ಲಿ ಹೊಸಬರೇ ಕೂಡಿ ಮಾಡಿರುವ ಅದೆಷ್ಟೋ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿವೆ. ಇದೇ ಸಾಲಿಗೆ ಸೇರುವ ಸಿನಿಮಾವೊಂದು ಸ್ಯಾಂಡಲ್ ವುಡ್ ನಲ್ಲಿ ಇವತ್ತು ಬಿಡುಗಡೆಯಾಗಿದೆ. ಅದೇ ಮುದ್ದು ಮನಸೇ.
     
ಮುದ್ದು ಮನಸೇ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ರೋಮ್ಯಾಂಟಿಕ್ ಸಿನಿಮಾ. ಸಿನಿಮಾದಲ್ಲಿ ಅರು ಗೌಡ ನಾಯಕನಾಗಿ ಕಾಣಿಸಿಕೊಂಡ್ರೆ, ನಿತ್ಯಾರಾಮ್ ಹಾಗೂ ಐಶ್ವರ್ಯಾ ನಾಗ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅನಂತ್ ಶೈನ್ ಅನ್ನೋ ನವ ನಿರ್ದೇಶಕ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
      
ಈಗಾಗಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸುದ್ದಿ ಮಾಡಿದೆ. ಟ್ರೇಲರ್ ಅತ್ಯಂತ ರಿಚ್ ಆಗಿ ಮೂಡಿ ಬಂದಿದೆ. ಇನ್ನು ಹಾಡುಗಳಂತೂ ಈಗಾಗಲೇ ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿದೆ. ಸಿನಿಮಾದಲ್ಲಿರುವ ಆರು  ಹಾಡುಗಳಿಗೆ ಆರು ಜನ ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿ ತಾಯಿ ಸೆಂಟಿಮೆಂಟಲ್ ಇರುವ ಹಾಡೊಂದಿದ್ದು, ಹಾಡನ್ನು ಜೋಗಿ ಪ್ರೇಮ್ ಹಾಡಿದ್ದಾರೆ. ಈಗಾಗಲೇ ಹಾಡುಗಳಿಂದ ಗಮನ ಸೆಳೆದಿರುವ ಮುದ್ದು ಮನಸುಗಳಿಗೆ ಸಿನಿರಸಿಕರು ಯಾವ ರೀತಿ ಪ್ರೀತಿ ತೋರಿಸುತ್ತಾರೆ ಅನ್ನೋದು ಇವತ್ತು ಗೊತ್ತಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ವಾಸ್ಕೋಡಿಗಾಮಾನ ಎಂಟ್ರಿಗೆ ಮುಹೂರ್ತ ಫಿಕ್ಸ್

ವಾಸ್ಕೋಡಿಗಾಮ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಇತ್ತೀಚೆಗಷ್ಟೇ ...

news

ಅಪಾಯದಿಂದ ಸ್ವಲ್ಪದರಲ್ಲೇ ಪಾರಾದ ದುನಿಯಾ ವಿಜಿ

RX ಸೂರಿ ಸಿನಿಮಾದ ಫೈಟಿಂಗ್ ವೇಳೆ ದುನಿಯಾ ವಿಜಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬೆಂಗಳೂರಿನ ರಾಜ್ ...

news

ಇಂದಿನಿಂದ ಆಟಗಾರನ ಅಸಲಿ ಆಟ ಶುರು

ಕನ್ನಡದಲ್ಲಿ ಸದ್ದಿಲ್ಲದೇ ತನ್ನ ಶೂಟಿಂಗ್ ಮುಗಿಸಿ ಥ್ರಿಲ್ಲಿಂಗ್ ಸಿನಿಮಾವೊಂದು ಇವತ್ತು ಪ್ರೇಕ್ಷಕರೆದುರಿಗೆ ...

news

ಇಂದು ತೆರೆ ಮೇಲೆ ಅಪ್ಪಳಿಸಲಿದೆ ಫ್ಯಾಂಟಮ್

ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡುತ್ತಲೇ ಬಂದಿರುವ ಫ್ಯಾಂಟಮ್ ಸಿನಿಮಾ ಇವತ್ತು ವಿಶ್ವದಾದ್ಯಂತ ರಿಲೀಸ್ ...